Home / Breaking News / ಗಡಿಯಲ್ಲಿದ್ದರೂ, ವ್ಹೀ ಆರ್ ವೇರೀ ಸೇಫ್ – ಬೆಳಗಾವಿ ಡಿಸಿ

ಗಡಿಯಲ್ಲಿದ್ದರೂ, ವ್ಹೀ ಆರ್ ವೇರೀ ಸೇಫ್ – ಬೆಳಗಾವಿ ಡಿಸಿ

ಬೆಳಗಾವಿ- ಪಕ್ಕದಮಹಾರಾಷ್ಟ್ರದಲ್ಲಿ ದಿನೇದಿನೇ ಕೊರೊನಾ‌ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗಾಗಲೇ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು RTPCR ಟೆಸ್ಟ್ ಕಡ್ಡಾಯ ಮಾಡಿದೆ. ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ RTPCR ಟೆಸ್ಟ್ ಕಡ್ಡಾಯ ಮಾಡಿದೆ.

ಬೆಳಗಾವಿಯಲ್ಲಿ ಡಿಹೆಚ್‌ಒ ಡಾ.ಎಸ್.ವಿ.ಮುನ್ಯಾಳ್ ಮಾದ್ಯಮಗಳ ಜೊತೆ ಮಾತನಾಡಿ ಈ ವಿಷಯವನ್ನು ತಿಳಿಸಿದ್ದು. ಈಗಾಗಲೇ ಚೆಕ್‌ಪೋಸ್ಟ್ ಗಳಲ್ಲಿ ಆರೋಗ್ಯ ತಪಾಸಣೆ ಕೇಂದ್ರ ಸ್ಥಾಪನೆ ಮಾಡಲಾಗಿದೆ.ಮಾರ್ಚ್ 15ರವರೆಗೆ ಎರಡನೇ ಅಲೆ ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.ಹೀಗಾಗಿ ಮಾರ್ಗಸೂಚಿ ಪಾಲನೆ ಅತ್ಯಂತ ಅವಶ್ಯಕವಾಗಿದೆ. ಬರುವ ದಿನಗಳಲ್ಲಿ ಸರ್ಕಾರ ಮಾರ್ಗಸೂಚಿ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.

7 ದಿನಗಳಲ್ಲಿ ಮಹಾರಾಷ್ಟ್ರದಿಂದ ಬಂದವರ ಟ್ರಾವೆಲ್ ಹಿಸ್ಟರಿ ಕಲೆ ಹಾಕ್ತೀವಿ,ಮುಂಬೈ, ಪೂನಾ, ಅಮರಾವತಿ ಡಿವಿಜನ್ ರೆಡ್ ಅಲರ್ಟ್ ಇದೆ.ಟಿಕೆಟ್ ರಿಸರ್ವೇಶನ್ ಮಾಡಿದವರ ಮಾಹಿತಿ ಪಡೆದು ಕೊರೊನಾ ಟೆಸ್ಟ್ ಮಾಡುತ್ತೇವೆ.ಕೊರೊನಾ‌ ಟೆಸ್ಟ್ ಮಾಡಿಸಿಕೊಳ್ಳಲು ಎಸ್‌ಎಂಎಸ್ ಕಳಿಸಿ ಕರೆ ಮಾಡಿ ಹೇಳ್ತೀವಿ.
ಜನರು ತಮ್ಮ ಹಾಗೂ ತಮ್ಮ‌ ಕುಟುಂಬದ ಹಿತದೃಷ್ಟಿಯಿಂದ ತಪಾಸಣೆ ಮಾಡಿಸಿಕೊಳ್ಳಿ ಎಂದು ಡಿ ಹೆಚ್ ಓ ಹೇಳಿದ್ರು.

ಲಸಿಕಾಕರಣ ಕಾರ್ಯಕ್ರಮವೂ ಸಹ ಕ್ರಮಬದ್ಧವಾಗಿ ನಡೆಯುತ್ತಿದೆ.ಬೆಳಗಾವಿ ಜಿಲ್ಲೆಯಲ್ಲಿ ಶೇಕಡ 68ರಷ್ಟು ಲಸಿಕಾಕರಣ ಆಗಿದೆ.ಎರಡನೇ ಹಂತದಲ್ಲಿ ಶೇಕಡ 38ರಷ್ಟು ಲಸಿಕಾಕರಣ ಆಗಿದೆ.ಕೊರೊನಾ ಪ್ರಕರಣ ಹೆಚ್ಚಳವಾದ್ರೆ ಸಕಲ ರೀತಿಯ ಬೆಡ್ ವ್ಯವಸ್ಥೆ ಇದೆ.ಬೆಳಗಾವಿ ಜಿಲ್ಲೆಯಲ್ಲಿ ಯಾರಲ್ಲೂ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ಬೆಳಗಾವಿಯಲ್ಲಿ ಡಿಹೆಚ್‌ಒ ಡಾ.ಎಸ್.ವಿ.ಮುನ್ಯಾಳ್ ಹೇಳಿದರು.

ಕೋವೀಡ್ ಬಗ್ಗೆ ಬೆಳಗಾವಿ ಡಿಸಿ ಹಿರೇಮಠ ಹೇಳಿದ್ದು

ಮಹಾರಾಷ್ಟ್ರದಲ್ಲಿ ದಿನೇದಿನೇ ಕೊರೊನಾ‌ ಪ್ರಕರಣ ಹೆಚ್ಚಳ ಆಗುತ್ತಿರುವ ಹಿನ್ನಲೆಯಲ್ಲಿ,ಈಗಾಗಲೇ ಗಡಿಗೆ ಹೊಂದಿಕೊಂಡ ಮಹಾರಾಷ್ಟ್ರ ಜಿಲ್ಲೆಗಳ ಡಿಸಿಗಳ ಜತೆ ಮಾತುಕತೆ ಮಾಡಲಾಗಿದೆ.ಪ್ರವಾಸ ಶುರು ಮಾಡುವ ಮುನ್ನವೇ ಆರ್‌ಟಿಪಿಸಿಆರ್ ವರದಿ ಇಲ್ಲದವರನ್ನ ಅಲ್ಲೇ ತಡೆ ಹಿಡಿಯಲು ಮನವಿ ಮಾಡಿಕೊಳ್ಳಲಾಗಿದೆ.ಎಂದು ಡಿಸಿ ಹಿರೇಮಠ ಹೇಳಿದರು.

ಮಹಾರಾಷ್ಟ್ರದಿಂದ ಬರುವವರಿಗೆ 72 ಗಂಟೆ ಮುನ್ನ ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ.ಮಹಾರಾಷ್ಟ್ರದಲ್ಲಿ ರಾಜ್ಯದವರು ಯಾರಾದರೂ ಕೋವಿಡ್‌ನಿಂದ ಮೃತಪಟ್ಟರೇ ಕೋವಿಡ್ ಮಾರ್ಗಸೂಚಿ ಪ್ರಕಾರ ಅಂತ್ಯ ಸಂಸ್ಕಾರಕ್ಕೆ ಕ್ರಮ ಕೈಗೊಳ್ಳಲು ತಿಳಿಸಲಾಗಿದ್ದು ನಾನ್ ಕೋವಿಡ್ ಡೆತ್ ಆದ್ರೆ‌ ಮೃತದೇಹ ತರಲು ಏನೂ ಇಸ್ಯೂ ಇಲ್ಲ ಎಂದರು.

ಮಹಾರಾಷ್ಟ್ರ ಮೂಲಕ ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ಪ್ರವೇಶಿಸುವವರಿಗೆ ಏನೂ ತೊಂದರೆ ಇಲ್ಲ.ರಾಜ್ಯದ 5 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ವಿದ್ದು ಅದರಲ್ಲಿ ನಮ್ಮ ಜಿಲ್ಲೆ ಇಲ್ಲ.ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ 0.5ಕ್ಕಿಂತಲೂ ಕಡಿಮೆ ಇದೆ,ವಿ ಆರ್ ವೇರಿ ಸೇಫ್, ಗಡಿಯಲ್ಲಿದ್ದರೂ ಸೇಫ್ ಆಗಿ ಇದ್ದೀವಿ ಎಂದು ಬೆಳಗಾವಿ ಡಿಸಿ ಹೇಳಿದರು

ಮಹಾರಾಷ್ಟ್ರದಿಂದ 7 ದಿವಸಗಳ ಹಿಂದೆ ಬಂದವರ ಮಾಹಿತಿ ಕಲೆ ಹಾಕ್ತೇವೆ. ಕೇರಳ, ಮಹಾರಾಷ್ಟ್ರದಿಂದ ಬಂದವರ ಮಾಹಿತಿ ಕಲೆ ಹಾಕಿ ತಪಾಸಣೆ ಮಾಡುತ್ತೇವೆ.ಐದಕ್ಕಿಂತ ಹೆಚ್ಚು ಪ್ರಕರಣ ಬಂದ ಪ್ರದೇಶ ಕಂಟೈನ್‌ಮೆಂಟ್ ಝೋನ್ ಎಂದು ಘೋಷಿಸುತ್ತೇವೆ.ಬಿಮ್ಸ್ ಆಸ್ಪತ್ರೆಯಲ್ಲಿ 750 ಆಕ್ಸಿಜನ್ ಬೆಡ್‌ಗಳು ಇವೆ.ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 30 ಬೆಡ್‌ಗಳಿದ್ದು, ಬೆಡ್‌ಗಳ ಸಮಸ್ಯೆ ಇಲ್ಲ.ಎಪಿಎಂಸಿ ಮಾರುಕಟ್ಟೆಯಲ್ಲಿ ಜನಜಂಗುಳಿ ಆಗದಂತೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ.
ಸ್ಯಾನಿಟೈಸರ್, ಮಾಸ್ಕ್ ಧರಿಸಿ ಮುಂಜಾಗ್ರತಾ ಕ್ರಮ ಅನುಸರಿಸಲು ಸೂಚನೆ ನೀಡಲಾಗಿದೆ ಎಂದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿಡಿಯೋ ಕಾನ್ಫರೆನ್ಸ್

ಡಿಸಿಗಳ ಜೊತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಬೆಳಗಾವಿಗೆ ಕಳೆದ 7 ದಿನಗಳಲ್ಲಿ ಮಹಾರಾಷ್ಟ್ರದಿಂದ ಬಂದವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.ಶನಿವಾರ ರಾತ್ರಿ ಕೊಗನೊಳ್ಳಿ ಟೋಲ್‌ಗೇಟ್ ಬಳಿ ಚೆಕ್‌ಪೋಸ್ಟ್ ಶುರು ಮಾಡಿದ್ದೇವೆ.ಆರ್ ಟಿಪಿಸಿಆರ್ ವರದಿ ಇದ್ದವರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶ ನೀಡುತ್ತಿದ್ದೇವೆ.ನಿನ್ನೆ 3900 ಗೂಡ್ಸ್ ವಾಹನ, 7200 ಪ್ಯಾಸೆಂಜರ್ ವಾಹನಗಳು ಬಂದಿವೆ.ಕೊಗನೊಳ್ಳಿ ಚೆಕ್‌ಪೋಸ್ಟ್ ಮೂಲಕ ರಾಜ್ಯಕ್ಕೆ ವಾಹನಗಳು ಬಂದ ಮಾಹಿತಿ ಪಡೆಯುತ್ತಿದ್ದೇವೆ.ಬೆಳಗಾವಿ ಜಿಲ್ಲೆಯ‌ 14 ಕಡೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪನೆ ಮಾಡಲಾಗುವುದು.ಈಗಾಗಲೇ ಸವದತ್ತಿ ಯಲ್ಲಮ್ಮದೇವಿ, ಚಿಂಚೋಳಿ ಮಾಯಕ್ಕದೇವಿ ದೇವಸ್ಥಾನ ಬಂದ್ ಮಾಡಿದ್ದೇವೆ.ಎಂದುಬೆಳಗಾವಿ ಡಿಸಿ ಆರೋಗ್ಯ ಸಚಿವರಿಗೆ ಮಾಹಿತಿ ನೀಡಿದರು.

Check Also

ಮಕ್ಕಳನ್ನು ಚುನಾವಣೆ ಪ್ರಚಾರಕ್ಕೆ ಬಳಸಿದ ಎಂಇಎಸ್ ಬೆಂಬಲಿತ ಅಭ್ಯರ್ಥಿ

ಬೆಳಗಾವಿ- ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಮಹಾರಾಷ್ಟ್ರ ಏಕೀಕರಣ  ಸಮಿತಿ ಅಸ್ತಿತ್ವ ಕಳೆದುಕೊಂಡಿದೆ. ಲೋಕಸಭೆ ಉಪಚುನಾವಣೆ ಮೂಲಕ ಮತ್ತೆ …

Leave a Reply

Your email address will not be published. Required fields are marked *