Breaking News

ಅಕ್ರಮ ಕ್ವಾರಿ, ಸ್ಫೋಟಕಗಳ ಅಕ್ರಮ ಸಾಗಾಟ ನಿಯಂತ್ರಣಕ್ಕೆ ಕ್ರಮ: ಎಸ್ಪಿ ಲಕ್ಷ್ಮಣ ನಿಂಬರಗಿ

ಬೆಳಗಾವಿ, ): ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಹಿರೆನಗವೆಲಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದ ಸ್ಫೋಟ ದುರಂತದ ಘಟನೆಗಳು ನಮ್ಮ ಜಿಲ್ಲೆಯಲ್ಲಿ ಆಗದಂತೆ ಎಚ್ಚರಿಕೆ ವಹಿಸಬೇಕು. ಅಕ್ರಮ ಕ್ವಾರಿ ಹಾಗೂ ಸ್ಫೋಟಕಗಳ ಅಕ್ರಮ ಸಂಗ್ರಹ ಮತ್ತು ಸಾಗಾಣಿಕೆ ಮೇಲೆ ನಿಗಾ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ವಿವಿಧ ಇಲಶಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಬುಧವಾರ (ಫೆ. 24) ನಡೆದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ನಮ್ಮ ಮೂಲ ಉದ್ದೇಶವು ಅಕ್ರಮ ಕ್ವಾರಿಗಳು ಹಾಗೂ ಅಕ್ರಮ ಸ್ಪೋಟಕಗಳು ಪತ್ತೆ ಹಚ್ಚುವುದು ಆಗಿದ್ದು, ಯಾವುದೇ ಕಾನೂನುಬದ್ಧ ಕ್ವಾರಿಗಳನ್ನು ಮುಚ್ಚಿಸುವುದಲ್ಲ; ಮಾನವ ಪ್ರಾಣ ಹಾನಿಯಾಗದೆ ಸ್ಪೋಟಕಗಳನ್ನು ಬಳಸುವುದು ಹೇಗೆ ಎಂಬುದರ ಅರಿವು ಮೂಡಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಅಕ್ರಮವಾಗಿ ಸ್ಪೋಟಕ (ಮ್ಯಾಗಜೀನ್ ಗಳ) ಸಾಗಾಟ ಆಗುತ್ತಿರುವುದು ಗಮನಕ್ಕೆ ಬಂದಿದ್ದು, ಅದು ಇನ್ನೂ ಮುಂದೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾನೂನು ಬಾಹಿರವಾಗಿ ಕ್ವಾರಿಗಳ ಕೂಡ ಆರಂಭಿಸಲಾಗಿದ್ದು, ಅದರ ಕುರಿತಂತೆ ಸಮೀಕ್ಷೆ ನಡೆಸಿ ಒಂದು ವಾರದಲ್ಲಿ ಮಾಹಿತಿ ನೀಡಲು ಅಧಿಕಾರಿಗಳಿಗೆ ಹೇಳಿದರು.

ಇನ್ನು ಪ್ರತಿ ತಿಂಗಳು ತಾಲೂಕ ಮಟ್ಟದಲ್ಲಿ ಸಭೆಗಳನ್ನು ನಡೆಸಿ ನಿಗದಿತ ಅವಧಿಯಲ್ಲಿ ವರದಿಯನ್ನು ನೀಡಲು ಸೂಚಿಸಿದರು.
ಎಲ್ಲಾ ಇಲಾಖೆಯವರು ಪರಸ್ಪರ ಸಹಕಾರ ನೀಡಿ ಮಾಹಿತಿಯನ್ನು ಒದಗಿಸಲು ಹಾಗೂ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಕ್ವಾರಿಗಳು ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ತಿಳಿಸಿದರು.

ಮರಳು ಸಾಗಾಣಿಕೆ ಮಾಡುವಂತಹ ಪ್ರತಿ ವಾಹನಕ್ಕೆ ಜಿಪಿಎಸ್ ಅಳವಡಿಸಬೇಕು ಎಂದು ಹೇಳಿದರು.
ಜಿಪಿಎಸ್ ಹೊಂದಿರದ ವಾಹನಗಳಲ್ಲಿ ಮರಳು ಸಾಗಾಣಿಕೆ ಮಾಡಲು ಅನುಮತಿಯನ್ನು ನೀಡಬಾರದು. ಪಾಸ್ ಗಳಿಲ್ಲದ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುವಂತೆ ಸೂಚನೆ ನೀಡಿದರು.

ಮಾರ್ಚ್ ಅಂತ್ಯದೊಳಗೆ ಗಣಿಗಾರಿಕೆ ಹಾಗೂ ಸ್ಫೋಟಕ ಸಾಗಾಣಿ-ಸಂಗ್ರಹಣೆ ಕುರಿತು ಸಮಗ್ರ ಮಾಹಿತಿಯನ್ನು ಸಲ್ಲಿಸಬೇಕು ಎಂದು ಲಕ್ಷ್ಮಣ ನಿಂಬರಗಿ ತಿಳಿಸಿದರು.

ಪ್ರಮುಖವಾಗಿ ಗೋಕಾಕ್ ಹಾಗೂ ಸತಿಗೇರಿ ಯ ಗ್ರಾಮಗಳಲ್ಲಿ ಕಾನೂನುಬಾಹಿರ ಕ್ವಾರಿಗಳು ತಲೆಯೆತ್ತಿದ್ದು ಎರಡು ತಾಲೂಕುಗಳಿಗೆ ಅತಿ ಶೀಘ್ರದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕ್ವಾರಿಗಳನ್ನು ಪರೀಕ್ಷಿಸಬೇಕೆಂದು ಸೂಚನೆ ನೀಡಿದರು.

ಪೊಲೀಸ್ ಅಧಿಕಾರಿಗಳಿಗಾಗಿ ಮುಂದಿನ ವಾರದಲ್ಲಿ ಒಂದು ವಿಶೇಷ ಸ್ಪೋಟಕ ಕಾರ್ಯಗಾರವನ್ನು ಮಾಡುವುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಬಿಂದನ್ ಅವರು, ಸ್ಫೋಟಕಗಳ ಕುರಿತು ಅದರಲ್ಲಿ ಬಳಸುವ ರಾಸಾಯನಿಕಗಳ ಕುರಿತು ಹಾಗೂ ಅವುಗಳನ್ನು ಹೇಗೆ ಸಾಗಾಟ ಮಾಡಲಾಗುವದು ಹಾಗೂ ಕ್ವಾರಿ ಗಳಿಗೆ ಹೇಗೆ ಅನುಮತಿ ನೀಡಲಾಗುತ್ತದೆ ಹಾಗೂ ಯಾವೆಲ್ಲ ಷರತ್ತುಗಳನ್ನು ಹಾಕಿರುತ್ತಾರೆ ಎನ್ನುವದರ ಬಗ್ಗೆ ಮಾಹಿತಿ ನೀಡಿದರು.

ಯಾವ ರೀತಿ ಸ್ಪೋಟಕಗಳನ್ನು ಸ್ಪೋಟಿಸಬೇಕು ಹಾಗೂ ಇಂತಹ ಅನಾಹುತಗಳಿಗೆ ಸ್ಪೋಟಕಗಳ ಮೇಲೆ ಪೆಟ್ರೋಲ್ ಸೀಮೆ ಎಣ್ಣೆಯನ್ನು ಬಳಸುತ್ತಿರುವುದು ಮುಖ್ಯ ಕಾರಣ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ, ಗಣಿ ಮತ್ತು ಭೂ ಇಲಾಖೆ ಅಧಿಕಾರಿ ಗಳು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಅಗ್ನಿಶಾಮಕ ಮತ್ತು ತುರ್ತು ಸೇವಾ ಅಧೀಕ್ಷಕರು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಜಿಲ್ಲೆಯಲ್ಲ ತಾಲೂಕಿನ ಪೊಲೀಸ್ ಉಪಾಧೀಕ್ಷಕರು ಹಾಗೂ ಜಿಲ್ಲೆಯ ಇಲ್ಲ ಸಿಪಿಐ ಗಳು ಸಭೆಯಲ್ಲಿ ಉಪಸ್ಥಿತರಿದ್ದರು.
*****

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *