ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ವ್ಯವಸ್ಥಿತವಾಗಿ ಕಸ ಸಂಗ್ರಹ ಮಾಡಲು,ಬೆಳಗಾವಿ ಮಹಾನಗರ ಪಾಲಿಕೆ ಸುಧಾರಿತ ಅಟೋ ಟಿಪ್ಪರ್ ಗಳನ್ನು ಖರೀಧಿ ಮಾಡಿದೆ.
14 ನೇಯ ಹಣಕಾಸು ಯೋಜನೆಯ,2.75 ಕೋಟಿ ರೂ ಅನುದಾನದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ 35 ಟಿಪ್ಪರ್ ಗಳನ್ನು ಖರೀಧಿ ಮಾಡಿದ್ದು 35 ಟಿಪ್ಪರ್ ಗಳು ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ಪಾರ್ಕ್ ಆಗಿವೆ.
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಅವರು ಬೆಳಗಾವಿ ಮಹಾನಗರದಲ್ಲಿ ವ್ಯೆವಸ್ಥಿತವಾದ ಕಸ ಸಂಗ್ರಹಕ್ಕೆ ಹೆಚ್ವಿನ ಒತ್ತು ನೀಡುತ್ತಿದ್ದು ,ಒಂದೇ ವಾಹನದಲ್ಲಿ ಒಣ ಕಸ,ಮತ್ತು ಹಸಿ ಕಸವನ್ನು ಬೇರೆ,ಬೇರೆಯಾಗಿ ಸಂಗ್ರಹಿಸುವ ಸುಧಾರಿತ ಅಟೋ ಟಿಪ್ಪರ್ ಗಳನ್ನು ಖರೀಧಿ ಮಾಡಿದ್ದು ಹದಿನೈದನೇಯ ಹಣಕಾಸು ಯೋಜನೆಯ ಅನುದಾನದಲ್ಲಿ ಕಸ ಸಂಗ್ರಹಕ್ಕೆ ಅನಕೂಲವಾಗುವ,ಮಿನಿ ಹಿತಾಚಿ ಸೇರಿದಂತೆ ಇನ್ನಿತರ ಯಂತ್ರೀಪಕರಣಗಳನ್ನು ಖರೀಧಿ ಮಾಡಲು ಬೆಳಗಾವಿ ಮಹಾನಗರ ಪಾಲಿಕೆ ನಿರ್ದರಿಸಿದೆ.
ಈಗಾಗಲೇ ಬೆಳಗಾವಿಗೆ ಬಂದಿರುವ ಅಟೋ ಟಿಪ್ಪರ್ ಗಳು 1.5 ಟನ್ ಕಸ ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ.ಬೆಳಗಾವಿ ಮಹಾನಗರದಲ್ಲಿ 58 ವಾರ್ಡ್ ಗಳಿದ್ದು 47 ವಾರ್ಡ್ ಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಸ ಸಂಗ್ರಹ,ಮತ್ತು ವಿಲೇವಾರಿ ಮಾಡಲಾಗುತ್ತಿದೆ.ಉಳಿದ 11 ವಾರ್ಡಗಳಲ್ಲಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಕಸ ಸಂಗ್ರಹ ಮತ್ತು ವಿಲೇವಾರಿ ಮಾಡುತ್ತಿದ್ದು ,ಪಾಲಿಕೆ ಕಸ ಸಂಗ್ರಹ ಮಾಡುವ 11 ವಾರ್ಡ್ ಗಳಲ್ಲಿ 35 ಹೊಸ ಅಟೋ ಟಿಪ್ಪರ್ ಗಳು ಕಾರ್ಯನಿರ್ವಹಿಸಲಿವೆ.