ಬೆಳಗಾವಿ- ಬಜೆಟ್ ಅಧಿವೇಶನ ಮುಗಿಸಿಕೊಂಡು ಬೆಂಗಳೂರಿನಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಇವತ್ತು ನಾಯಕರ ದಂಡು ಆಗಮಿಸಿತು,ಏನಾದ್ರು ಬಿಸಿಬಿಸಿ ಸುದ್ಧಿ ಸಿಗಬಹುದು ಎಂದು ಮಾದ್ಯಮ ಪ್ರತಿನಿಧಿಗಳು ಮೈಕ್ ಹಿಡಿದು ನಿಂತರೆ ಅಲ್ಲಿ ನಡೆದಿದ್ದು ನಾ…ಒಲ್ಲೇ….ನೀ..ಒಲ್ಲೆ…
ಮಾದ್ಯಮಗಳ ಲೋಗೋ ನೋಡಿದ್ರೆ ಸಾಕು ರಾಜಕಾರಣಿ ಗಳು ಮಾತನಾಡಲು ನಾ.ಮುಂದೆ ನೀ ಮುಂದೆ ಅಂತಾರೆ ಆದ್ರೆ ಇವತ್ತು ಸಾಂಬ್ರಾ ಏರ್ ಪೋರ್ಟ್ ನಲ್ಲಿ ಇದಕ್ಕೆ ತದ್ವಿರುದ್ಧವಾದ ಪ್ರಸಂಗ ಎದುರಾಯಿತು.ಶ್ರೀಮಂತ ಪಾಟೀಲ ಅವರನ್ನು ಹೊರತು ಪಡಿಸಿದರೆ ಉಳಿದ ಎಲ್ಲ ನಾಯಕರು ಕೈ ಮುಗಿದು,ನಾ ಒಲ್ಲೇ..ನೀ ಒಲ್ಲೇ ಅಂತ ಮಾದ್ಯಮಗಳ ಜೊತೆ ಮಾತನಾಡದೇ ತೆರಳಿದರು
ಡಿಸಿಎಂ ಲಕ್ಷ್ಮಣ ಸವದಿ,ಶಾಸಕ ನಡಹಳ್ಳಿ,ಪ್ರಕಾಶ ಹುಕ್ಕೇರಿ,ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಅನೇಕ ಜನ ನಾಯಕರು ಇವತ್ತು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ.
ಸಿಡಿ ಪ್ರಕರಣದ ಕುರಿತು ಮಾದ್ಯಮಗಳು ಪ್ರಶ್ನೆ ಮಾಡಬಹುದು.ಎನ್ನುವ ನಿರೀಕ್ಷೆಯಿಂದ ಮುಜುಗರ ದಿಂದ ತಪ್ಪಿಸಿಕೊಳ್ಳಲು ಶ್ರೀಮಂತ ಪಾಟೀಲರನ್ನು ಬಿಟ್ಟರೆ ಬೇರೆ ಯಾರೊಬ್ಬರೂ ಮಾತನಾಡದೇ ಗಪ್ ಚುಪ್ ಜಾಗ ಖಾಲಿ ಮಾಡಿದರು
ಸಚಿವ ಶ್ರೀಮಂತ ಪಾಟೀಲ ಮಾತನಾಡಿ,ಸಿಡಿ ಪ್ರಕರಣದ ವಿಚಾರಣೆಗೆ ಸರ್ಕಾರ ಎಸ್ ಐ ಟಿ ರಚಿಸಿಸಿದೆ.ತನಿಖೆ ಮುಗಿಯುವವರೆಗೆ ಸದ್ಯಕ್ಕೆ ಬಾಲಚಂದ್ರ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಬೇಕು,ಈ ಭಾಗದ ನೀರಾವರಿ ಯೋಜನೆಗಳು ಅನುಷ್ಠಾನಗೊಳಿಸಲು ಬಾಲಚಂದ್ರ ಅವರಿಗೆ ಜಲಸಂಪನ್ಮೂಲ ಸಚಿವರನ್ನಾಗಿ ಮಾಡಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ ಎಂದರು