ಬೆಳಗಾವಿ,): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವತಿಯಿಂದ ಶುಕ್ರವಾರ(ಮಾ.12) ಬೆಳಿಗ್ಗೆ 6.45 ಗಂಟೆಗೆ ಚನ್ನಮ್ಮನ ಕಿತ್ತೂರಿನಿಂದ ಸೈಕಲ್ ರ್ಯಾಲಿ ನಡೆಯಲಿದೆ.
ಈ ರ್ಯಾಲಿಯು ಬೆಳಿಗ್ಗೆ 8.15 ಗಂಟೆಗೆ ಬೆಳಗಾವಿಯ ಕಿತ್ತೂರು ಚನ್ನಮ್ಮ ವೃತ್ತಕ್ಕೆ ಆಗಮಿಸಲಿದೆ. ಕಿತ್ತೂರು ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಇರುವ ಸಂಗೊಳ್ಳಿ ರಾಯಣ್ಣ ಸ್ಮಾರಕದವರೆಗೆ ರ್ಯಾಲಿ ನಡೆಯಲಿದೆ.
ಕಿತ್ತೂರಿನಿಂದ ನಂದಗಡವರೆಗಿನ 75 ಕಿ.ಮೀ. ಸೈಕಲ್ ರ್ಯಾಲಿಯಲ್ಲಿ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರದ 75 ಸೈಕ್ಲಿಸ್ಟ್ ಗಳು ಭಾಗವಹಿಸಲಿದ್ದಾರೆ ಎಂದು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಎಚ್.ಡಿ.ಕೋಳೇಕರ ತಿಳಿಸಿದ್ದಾರೆ.
****
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ