ಬೆಳಗಾವಿ-ಕೆಂಪು, ಹಳದಿ ಬಾವುಟ ಹಾಕಿಕೊಂಡು ಓಡಾಡಿದ್ರೆ ಅಟ್ಟಾಡಿಸಿ ಹೊಡಿತೀವಿ ಎಂದು ಬೆಳಗಾವಿ ನೆಲದಲ್ಲಿ ನಿಂತು ಎಂಇಎಸ್ ಮುಖಂಡನೊಬ್ಬ ಧಮ್ಕಿ ಹಾಕಿದ್ದಾನೆ.
ಎಂಇಎಸ್ ಯುವ ಘಟಕದ ಮುಖಂಡ ಶುಭಂ ಸಾಳುಂಕೆ ಕನ್ನಡಿಗರಿಗೆ ಬಹಿರಂಗವಾಗಿ ಧಮಕಿ ಹಾಕಿ ಗಡಿನಾಡಿನಲ್ಲಿ ಪುಂಡಾಟಿಕೆ ಪ್ರದರ್ಶಿಸಿದ್ದಾನೆ. ಬೆಳಗಾವಿಯಲ್ಲಿ ಎಂಇಎಸ ಶಿವಸೇನೆ ಎರಡು ಒಂದಾಗಿವೆ.ಹಳದಿ ಕೆಂಪು ಬಣ್ಣದ ಶಾಲು ಧರಿಸಿದವರನ್ನ ಸಿಕ್ಕ ಸಿಕ್ಕಲ್ಲಿ ನಾವು ಹೊಡ್ತಿವಿ.ನಮ್ಮ ಶಾಂತಿಯುತ ಹೋರಾಟವನ್ನ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ.ಕನ್ನಡ ಹೋರಾಟಗಾರರ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು.ಇಲ್ಲವಾದಲ್ಲಿ ನಾವು ಬೇರೆ ಪದ್ಧತಿಯಿಂದ ಉತ್ತರ ಕೊಡಬೇಕಾಗುತ್ತದೆ ಈ ಶುಭಂ ಸಾಳುಂಕೆ ಎಂಬಾತ ಪೋಲೀಸರಿಗೆ ಎಚ್ಚರಿಕೆ ಕೊಟ್ಟಿದ್ದಾನೆ.
ಕಾನೂನು ಕೈಗೆ ತೆಗೆದುಕೊಳ್ಳುವ ಧಮಕಿ ಕೊಟ್ಟಿರುವ ಎಂಇಎಸ್ ಮುಖಂಡ ಶುಭಂ ಸಾಳುಂಕೆ,ಶಿವಸೇನೆ ಮುಖಂಡ ಪ್ರಕಾಶ ಶಿರೋಳಕ ವಾಹನದ ನಾಮಫಲಕಕ್ಕೆ ಮಸಿ ವಿಚಾರ.ಕನ್ನಡ ಹೋರಾಟಗಾರರಿಗೆ ಬಹಿರಂಗ ಎಚ್ಚರಿಕೆ ಕೊಟ್ಟಿದ್ದಾನೆ.
ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾದ್ಯಕ್ಷ ದೀಪಕ ಗುಡಗನಟ್ಟಿ ಶುಭಂ ಸಾಳುಂಕೆ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ