ಬೆಳಗಾವಿ, : ನಗರದ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಮಕ್ಕಳ ದತ್ತು ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಂಗಳವಾರ (ಮಾ.16) ಭೇಡಿ ನೀಡಿದರು.
ಸಂಸ್ಥೆಯಲ್ಲಿರುವ ನಿರ್ಗತಿಕ ಮಕ್ಕಳ ಕುಟೀರ(ಹೆಣ್ಣು ಮತ್ತು ಗಂಡು),ಅನಾಥಾಶ್ರಮ, ಸ್ವದೇಶಿ ಮತು ವಿದೇಶಿ ದತ್ತು ಕೇಂದ್ರ ಹೀಗೆ ನಾಲ್ಕು ಮಕ್ಕಳ ಪಾಲನಾ ಸಂಸ್ಥೆಗಳನ್ನು ನಡೆಸುತ್ತಿದ್ದು, ಸದರಿ ಸಂಸ್ಥೆಗೆ ಜಿಲ್ಲಾಧಿಕಾರಿಗಳು ಭೇಡಿ ನೀಡಿ ಸಂಸ್ಥೆಯಲ್ಲಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿ ಸಂಸ್ಥೆಯು ಮಕ್ಕಳ ಸರ್ವಾಂಗೀಣ ಅಭಿವೃದ್ದಿಗಾಗಿ ಒಂದು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಮನಿಷಾ ಭಾಂಡನಕರ, ಕಾರ್ಯದರ್ಶಿಗಳಾದ ಗೀರಿಶ ಇನಾಂದಾರ, ಕೆ.ಪಿ.ಎಸ್.ಸಿ ಸದಸ್ಯರಾದ ವಿಜಯಕುಮಾರ ಕುಚನೂರೆ, ಖಜಾಂಚಿಗಳಾದ ರಮೇಶ ಲದ್ದಡ, ವಿರುಪಾಕ್ಷ ಚೊನ್ನದ, ಶ್ರೀಮತಿ ಸರಿತಾ ಸಬನೀಸ್ ಸಂಸ್ಥೆಯ ವಿಶ್ವಸ್ಥರು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಶ್ರೀ ಸಚೀನ್ ಹಿರೇಮಠ ಹಾಗೂ ಸಂಸ್ಥೆಯ ವ್ಯವಸ್ಥಾಪಕರು ಶ್ರೀ ರಾಜಶೇಖರ ನಾವಲಗಟ್ಟಿ ಮತ್ತು ಸಮಾಜ ಕಾರ್ಯಕರ್ತೆಯಾದ ಶ್ರೀಮತಿ ಮೇಘಾ ವಿ. ಕಾನಟ್ಟಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಈ ಸಂದರ್ಭದಲ್ಲಿ ದತ್ತು ಕೇಂದ್ರದ ಮಕ್ಕಳ ಜನ್ಮ ದಾಖಲಾತಿ, ಪೊಲಿಸ್ ಠಾಣೆಗಳಲ್ಲಿ ತಕ್ಷಣವೇ ಎಫ್.ಆಯ್. ಆರ್. ಮಾಡುವಂತೆ ಮತ್ತು ಜಿಲ್ಲಾ ಆಸ್ಪತ್ರೆಯಿಂದ ಮಕ್ಕಳನ್ನು ಬೇಗ ಡಿಸ್ಚಾರ್ಜ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸಂಸ್ಥೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಇದಲ್ಲದೇ ದತ್ತು ಕೇಂದ್ರದಲ್ಲಿರುವ ಮಕ್ಕಳ ಸಂಖ್ಯಾ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಕೇಳಿಕೊಂಡರು.
****