ಬೆಳಗಾವಿ- ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಮಾರ್ಚ,25 ಅಥವಾ 26 ಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ಚುನಾವಣೆಗೆಕಾಂಗ್ರೆಸ್ ಪಕ್ಷ ರೆಡಿ ಇದೆ, ಅಭ್ಯರ್ಥಿ ವಿಚಾರ ಹೈಕಮಾಂಡ ಅಂತಿಮ ಮಾಡಿಲ್ಲ, ಆ ಸಭೆಯಲ್ಲಿ ಮೂರು ಹೆಸರುಗಳು ಶಿಫಾರಸು ಆಗವೆ,ಪಕ್ಷ ಆದೇಶ ಮಾಡಿದರೆ ನಾನು ಚುನಾವಣೆಗೆ ನಿಲ್ಲುತ್ತೇನೆ, ಪಕ್ಷದ ದೃಷ್ಟಿಯಿಂದ ನನ್ನ ಹೆಸರು ಪ್ರಸ್ತಾಪ ಮಾಡಿರಬಹುದು,ಎಂದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ನಾಳೆ ಸಂಜೆ ದೆಹಲಿ ಪ್ರಯಾಣ ಬೆಳೆಸುತ್ತೇನೆ.ಕೆಲವು ವಿಚಾರಗಳನ್ನು ಪಕ್ಷದ ವರಿಷ್ಠರ ಜೊತೆ ಚರ್ಚೆ ಮಾಡುತ್ತೇನೆ, ೨೫ -೨೬ ಒಳಗೆ ಅಭ್ಯರ್ಥಿ ಹೆಸರು ಪೈನಲ್ ಮಾಡುತ್ತೇವೆ.ಎಂದರು.
ಟಿಕೆಟ್ ಘೋಷಣೆ ಆದರೆ ಯಮಕನಮರಡಿ ಕ್ಷೇತ್ರದ ಜೊತೆಗೆ ಸಭೆ ಮಾಡ್ತನಿ..ಅಭಿಪ್ರಾಯ ಕೇಳ್ತನಿ, ಸಿಡಿ ವಿಚಾರ, ಕಾಂಗ್ರೆಸ್ ಗೆ ಪ್ಲಸ್ ಮೈನಸ್ ಆಗಲ್ಲ ಅವರ ಮತದಾರ ಅವರ ಜೊತೆಗೆ ಇರ್ತಾರೆ ನಮ್ಮ ಮತದಾರ ನಮ್ಮ ಜೊತೆಗೆ ಇರ್ತಾರೆ..
ಇದರಿಂದ ಯಾವುದೇ ತೊಂದರೆ ಆಗಲ್ಲ, ಸಿಡಿ ಲೇಡಿ ಹೊರಗೆ ಬರಬೇಕು.. ಪೊಲೀಸ್ ತನಿಖೆ ನಡೆಸುತ್ತಿದೆ..ಇವತ್ತಿಲ್ಲ ನಾಳೆ ಸಿಕ್ಕೇ ಸಿಗ್ತಾರೆ..ಪೊಲೀಸರು ಅವರನ್ನು ಪತ್ತೆ ಮಾಡ್ತಾರೆ ,ಆಮೇಲೆ ಸತ್ಯಾಂಶ ಹೊರಬರುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು,
ಕೇಂದ್ರ ಬೆಲೆ ಏರಿಕೆ, ಖಾಸಗಿಕರಣ,ನೆರೆ ಪರಿಹಾರ, ರಾಜ್ಯದಲ್ಲಿ ಹಣ ಬಂದಿಲ್ಲ.. ಎಲ್ಲಾ ಸಮಸ್ಯೆ ಇಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ,ಕೇಂದ್ರ ಹಾಗು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗ್ತೇವಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು
ಸಿಡಿ ಬಿಡುಗಡೆ ನಂತರ ರಮೇಶ್ ಜಾರಕಿಹೊಳಿ ಅವರ ಜೊತೆ ಮಾತನಾಡಿಲ್ಲ.ನಾಳೆ ಬೆಂಗಳೂರು ಗೆ ಹೋಗುತ್ತಿದ್ದೇನೆ ಸಮಯ ಸಿಕ್ಕರೆ ಭೇಟಿ ಆಗುತ್ತೇನೆ ಅವರ ಜೊತೆ ಮಾತನಾಡುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.