ಬೆಳಗಾವಿ-ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಸತೀಶ್ ಜಾರಕಿಹೊಳಿ ಸ್ಪರ್ಧೆಗೆ ಅವರ ಅಭಿಮಾನಿಗಳು ವಿರೋಧ ವ್ಯೆಕ್ತಪಡಿಸಿದ್ದಾರೆ.
ಸತೀಶ್ ಜಾರಕಿಹೊಳಿ ಲೋಕಸಭೆಗೆ ಸ್ಪರ್ಧಿಸದಂತೆ ಅಭಿಮಾನಿಗಳ ಒತ್ತಾಯ ಮಾಡುತ್ತಿದ್ದು ,ಯಮಕನಮರಡಿ ಕ್ಷೇತ್ರದಲ್ಲಿ ಈಗ ,ಯಮಕನಮರಡಿ ಬಿಡಬೇಡಿ,ಬೈ ಇಲೆಕ್ಷನ್ ಗೆ ನಿಲ್ಲಬೇಡಿ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರು ಮಾಡಿದ್ದಾರೆ.
ಒತ್ತಾಯದ ಮೂಲಕ ಟಿಕೆಟ್ ನೀಡಿ ಕೇಂದ್ರಕ್ಕೆ ಕಳಸಲು ಒಳಸಂಚು ನಡೆದಿದೆ ಎನ್ನುವ ಆರೋಪ ಸತೀಶ್ ಜಾರಕಿಹೊಳಿ ಅವರದ್ದಾಗಿದೆ.ಸತೀಶ್ ಜಾರಕಿಹೊಳಿ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪೋಸ್ಟ್ ಮಾಡಲಾಗುತ್ತಿದೆ. ಕೇಂದ್ರಕ್ಕೆ ಕಳುಹಿಸಿ ರಾಜ್ಯದಲ್ಲಿರುವ ಹಿಡಿತ ಬುಡಮೇಲು ಮಾಡಲು ಒಳಸಂಚು ನಡೆದಿದೆ.ಸತೀಶ್ ಜಾರಕಿಹೊಳಿರನ್ನು ಮುಂದಿನ ದಿನಗಳಲ್ಲಿ ಸಿಎಂ ಆಗಿ ನೋಡುವ ಆಸೆಯಿದೆ ಅವರು ಕೇಂದ್ರ ರಾಜಕಾರಣಕ್ಕೆ ಹೋಗೋದು ಬೇಡ ಎಂದು ಸತೀಶ್ ಅಭಿಮಾನಿಗಳು ಒತ್ರಾಯಿಸಿದ್ದಾರೆ.
ಪ್ರಕಾಶ ಹುಕ್ಕೇರಿಯಂತ ಪ್ರಭಾವಿ ರಾಜಕಾರಣಿ ಇದ್ದರೂ ಅವರ ಹೆಸರು ಸೂಚಿಸಿಲ್ಲ ಉದ್ದೇಶಪೂರ್ವಕವಾಗಿ,ಸತೀಶ್ ಸಿಎಂ ರೇಸ್‌ನಲ್ಲಿರುವುದರಿಂದ ರಾಜ್ಯದಲ್ಲಿರುವ ಹಿಡಿತ ಮೂಲೆಗುಂಪು ಮಾಡುವ ಯತ್ನ ನಡೆದಿದೆ.ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸತೀಶ್ ಜಾರಕಿಹೊಳಿ ಅಭಿಮಾನಿಗಳಿಂದ ಪೋಸ್ಟ್ ಮಾಡಲಾಗುತ್ತಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ