ಬೆಳಗಾವಿ, ಮಾ.31(ಕರ್ನಾಟಕ ವಾರ್ತೆ): ಸಮರ್ಪಕ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 42.71 ಲಕ್ಷ ರೂಪಾಯಿ ನಗದು ಹಣವನ್ನು ಘಟಪ್ರಭಾ ಬಳಿಯ ಚೆಕ್ ಪೋಸ್ಟ್ ನಲ್ಲಿ ಬುಧವಾರ(ಮಾ.31) ವಶಪಡಿಸಿಕೊಳ್ಳಲಾಗಿದೆ.
ಉಪ ಚುನಾವಣೆ ಹಿನ್ನೆಲೆಯಲ್ಲಿ ಘಟಪ್ರಭಾ ಬಳಿ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ ನಲ್ಲಿ ಚುನಾವಣಾ ಕಾರ್ಯನಿರತ ಎಸ್.ಎಸ್.ಟಿ. ತಂಡವು ಮಹಾರಾಷ್ಟ್ರ ಮೂಲದ ಕಾರು ತಪಾಸಣೆ ನಡೆಸಿದಾಗ ನಗದು ಹಣ ಪತ್ತೆಯಾಗಿರುತ್ತದೆ.
ಮಂಗಸೂಳಿ ಮಾರ್ಗವಾಗಿ ಯರಗಟ್ಟಿ ಕಡೆಗೆ ಹೊರಟಿದ್ದ ಕಾರಿನಲ್ಲಿ ಹಣ ಪತ್ತೆಯಾಗಿದ್ದು, ಸೂಕ್ತ ದಾಖಲಾತಿಗಳು ಇಲ್ಲದಿರುವುದರಿಂದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಸದರಿ ಹಣವನ್ನು ಖಜಾನೆಗೆ ಒಪ್ಪಿಸಿ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಲಾಗಿರುತ್ತದೆ.
ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ್ ಮನಗೂಳಿ ನೇತೃತ್ವದ ಎಸ್.ಎಸ್.ಟಿ. ತಂಡವು ಕಾರ್ಯಾಚರಣೆಯನ್ನು ನಡೆಸಿರುತ್ತದೆ.
*****