ಬೆಳಗಾವಿ-ಸಚಿವ ಜಗದೀಶ್ ಶೆಟ್ಟರ್ ಅವರು ಇವತ್ತು ಬೆಳ್ಳಂ ಬೆಳಿಗ್ಗೆ ಬೆಳಗಾವಿಯಲ್ಲಿ ಮತಬೇಟೆ ಶುರು ಮಾಡಿದ್ದು ಬೆಳಗಾವಿಯ ಹನುಮಾನ ನಗರದಲ್ಲಿ ಅವರು ಚಾಯ್ ಪೇ ಚರ್ಚಾ ಮೂಲಕ ಕ್ಯಾಂಪೇನ್ ಆರಂಭಿಸಿದರು
ಶಾಸಕ ಅನೀಲ ಬೆನಕೆ,ಅಭ್ಯರ್ಥಿ ಮಂಗಲಾ ಅಂಗಡಿ ಮತ್ತು ಇನ್ನಿತರ ಕಾರ್ಯಕರ್ತರ ಪಡೆಯೊಂದಿಗೆ ಚಾಯ್ ಪೇ ಚರ್ಚಾ ದಲ್ಲಿ ಭಾಗವಹಿಸಿದ ಸಚಿವ ಜಗದೀಶ್ ಶೆಟ್ಟರ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಕುರಿತು ಚರ್ಚೆ ಮಾಡಿದರು.
ಸುರೇಶ್ ಅಂಗಡಿ ಅವರು ಸರಳ ಮತ್ತು ಸಜ್ಜನರಾಗಿದ್ದರು ಎಲ್ಲರ ಜೊತೆ ಆತ್ಮೀಯವಾಗಿ ಮಾತನಾಡಿ ವಿನಯದಿಂದಲೇ ಎಲ್ಲರ ಸಮಸ್ಯೆಗಳನ್ನು ಆಲಿಸುತ್ತಿದ್ದರು,ರಾಜ್ಯ ರೇಲ್ವೆ ಮಂತ್ರಿಯಾಗಿ ಬೆಳಗಾವಿಗೆ ಅನೇಕ ರೇಲ್ವೆ ಯೋಜನೆ ಮಂಜೂರು ಮಾಡುವದರ ಜೊತೆಗೆ ರಾಜ್ಯಕ್ಕೂ ಮಹತ್ವದ ರೇಲ್ವೆ ಯೋಜನೆಗಳನ್ನು ಮಂಜೂರು ಮಾಡುವ ಮೂಲಕ ಅಲ್ಪಾವಧಿಯಲ್ಲಿ ಸುರೇಶ್ ಅಂಗಡಿ ರಾಜ್ಯದಲ್ಲಿ ರೇಲ್ವೆ ಕ್ರಾಂತಿ ಮಾಡಿದ್ದರು,ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಶಾಸಕ ಅನೀಲ ಬೆನಕೆ ಮಾತನಾಡಿ,ಕೇಂದ್ರ ಸರ್ಕಾರ ಬೆಳಗಾವಿ ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಮಂಜೂರು ಮಾಡಿದ್ದರಿಂದಲೇ ಬೆಳಗಾವಿ ನಗರದಲ್ಲಿ ಅಭಿವೃದ್ಧಿಯ ಹೊಳೆ ಹರಿಯುತ್ತಿದೆ,ರಾಜ್ಯ ಸರ್ಕಾರವೂ ಬೆಳಗಾವಿ ನಗರ ಮತ್ತು ಜಿಲ್ಲೆಗೆ ವಿಶೇಷ ಕೊಡುಗೆಗಳನ್ನು ನೀಡಿದ್ದು ಮತದಾರರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯೆಕ್ತ ಪಡಿಸಿದರು.