ಬೆಳಗಾವಿ- ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಸಚಿವ ಮುರುಗೇಶ ನಿರಾಣಿ ಕಿಡಿಕಾರಿದ್ದು ಬಿಜಾಪೂರದ ನಾಲಾಯಕ್ ಎಂದು ಯತ್ನಾಳ ಅವರ ಹೆಸರು ಹೇಳದೇ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಿಎಂ ಯಡಿಯೂರಪ್ಪ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿರುವದಕ್ಕೆ ಕಿಡಿಕಾರಿದ ಮುರುಗೇಶ ನಿರಾಣಿ,ಯತ್ನಾಳ ಬಹಳ ಹಿರಿಯರು, ಎಲ್ಲಾ ಮೂಲಗಳಿಂದ ಎನೇನೋ ಸಿಗ್ತಿದೆ.ನಮ್ಮ ಪಕ್ಷದಲ್ಲಿದ್ದುಕೊಂಡು ನಮ್ಮ ಪಕ್ಷದವರನ್ನ ಟೀಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ.ಟೀಕೆ ಮಾಡುವುದಿತ್ತು ಅಂದ್ರೇ ಇವತ್ತು ರಾಜೀನಾಮೆ ಕೊಟ್ಟು ಹೊರಗಡೆ ಹೋಗಿ ಎನಾದ್ರೂ ಮಾತಾಡಲಿನಮ್ಮ ಪಕ್ಷದ ಸಿಂಬಾಲ್, ನಮ್ಮ ನಾಯಕರ ಪೋಟೋ ಹಾಕಿಕೊಂಡು ಆಯ್ಕೆಯಾಗಿ ಬಂದಿದ್ದಾರೆ.ಈಗ ಪಕ್ಷಕ್ಕೆ ಅನ್ಯಾಯ ಮಾಡುವುದು ಅಂದ್ರೇ ಊಂಡ ಮನೆಗೆ ದ್ರೋಹ ಮಾಡಿದಂತೆ ಆಗುತ್ತೆ.ಅದರ ಸಲುವಾಗಿ ಇನ್ನು ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು ಎಂದು ನಿರಾಣಿ ಯತ್ನಾಳಗೆ ಎಚ್ಚರಿಕೆ ನೀಡಿದ್ದಾರೆ.
ಮಾನವೀಯತೆ ಇದ್ದರೆ ಅವನು ರಾಜೀನಾಮೆ ಕೊಡಬೇಕು.ಎನಂತಾ ತಿಳಿದುಕೊಂಡಿದ್ದಾನೆ ಅವನು ಅಂತಾ ಏಕವಚನದಲ್ಲಿ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದ ನಿರಾಣಿ,ನಮ್ಮ ಪಕ್ಷದ ಸಿಂಬಾಲ್ ಹಾಕಿಕೊಂಡು ಮನೆಯಲ್ಲಿದ್ದು ವಿರೋಧ ಮಾಡ್ತಾನೆ ಅಂದ್ರೆ ಇದ್ಯಾವ ನ್ಯಾಯ.ನಮ್ಮ ಪಕ್ಷದ ಯಾರನ್ನೇ ಟೀಕೆ ಮಾಡಿದ್ರೇ ನಮ್ಮ ಪಕ್ಷದಲ್ಲಿದ್ದು ಮಾತಾಡಬಾರದು.ಸುಧಾರಣೆ ಆಗುವುದನ್ನ ಕಾದುನೋಡಿ ಹೈಕಮಾಂಡ್ ಕ್ರಮ ತೆಗೆದುಕೊಳ್ಳುತ್ತೆ.ಹೈಕಮಾಂಡ್ ಇದನ್ನ ಬಹಳ ಸೂಕ್ಷ್ಮವಾಗಿ ನೋಡುತ್ತಿದೆ ಎಂದುಬೆಳಗಾವಿಯಲ್ಲಿ ಸಚಿವ ಮುರಗೇಶ್ ನಿರಾಣಿ ಹೇಳಿದರು.
ವಿಜಯೇಂದ್ರ ಮುಂದೆ ಕೈಕಟ್ಟಿಕೊಂಡು ನಿಲ್ತಾರೆ ಎಂಬ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಮುರುಗೇಶ್ ನಿರಾಣಿ, ನಾಲಾಯಕ್ ಯಾರಾದರೂ ಇದ್ರೇ ಅದು ವಿಜಯಪುರದವ,ಯತ್ನಾಳ ಹೆಸರು ಬಳಸದೇ ನಾಲಾಯಕ್ ಅಂದ ಸಚಿವ ಮುರಗೇಶ್ ನಿರಾಣಿ,ಬೆಳಗಾವಿಯಲ್ಲಿ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದರು.
ಕೈಕಟ್ಟಿಕೊಂಡು ನಿಲ್ತಾರೆ ಅಂತಾರೆ ಯಾರಿಗೆ ಅಂವಾ ಮಾತಾಡೊದನ್ನ ಬಿಟ್ಟಿದ್ದಾನೆ, ಗದ್ದಿಗೌಡರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದಾಗ ವಿಜಯಪುರಕ್ಕೆ ಕಾಲಿಟ್ಟಿಲ್ಲ,ಶಟ್ರೂ ಭಟ್ರೂ ಅಂತಾ ಎಲ್ಲಾ ಶಬ್ದಗಳನ್ನ ಬಳಸಿಕೊಂಡು ಮಾತಾಡಿದರು,ಏಕವಚನದಲ್ಲಿ ವಾಗ್ದಾಳಿ ನಡೆಸುವಾಗ ಸಚಿವ ಉಮೇಶ್ ಕತ್ತಿ ಮುರುಗೇಶ್ ನಿರಾಣಿ ಅವರನು ಸಮಾಧಾನ ಪಡಿಸಿ ಹೆಚ್ಚು ಮಾತನಾಡದಂತೆ ತಡೆದರು.
ಹುಬ್ಬಳ್ಳಿಯವರು ಪಾಕಿಸ್ತಾನದವರಲ್ಲ- ಉಮೇಶ್ ಕತ್ತಿ
ಬೆಳಗಾವಿ ಲೋಕಸಭೆ ಚುನಾವಣೆ ಹುಬ್ಬಳ್ಳಿ ನಾಯಕರಿಗೆ ಉಸ್ತುವಾರಿ.ಬೆಳಗಾವಿ ಕಾರ್ಯಕರ್ತರ ಅಸಮಾಧಾನ ವಿಚಾರ.ಹುಬ್ಬಳ್ಳಿ, ಧಾರವಾಡದವರು ಪಾಕಿಸ್ತಾನ, ಅಮೆರಿಕದವರು ಅಲ್ಲ.ನಮ್ಮ ಪಕ್ಕದ ಜಿಲ್ಲೆಯ ನಾಯಕರು.ಚುನಾವಣೆ ಮುಗಿದ ಬಳಿಕ ಅಭಿವೃದ್ಧಿ ಕೆಲಸ.ನನಗೆ ಅವಕಾಶ ಕೊಟ್ಟರೇ ನಾನು ಉಸ್ತುವಾರಿ ಸಚಿವನಾಗುತ್ತೇನೆ.ಬೆಳಗಾವಿಯಲ್ಲಿ ಅಭ್ಯರ್ಥಿ ಗೆಲ್ಲಲ್ಲು ಖರ್ಚಿನ ಅವಶ್ಯಕತೆ ಇಲ್ಲ..ಜನ ನಮಗೆ ಆಶೀರ್ವಾದ ಮಾಡುತ್ತಾರೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.