ಬೆಳಗಾವಿ-ಗೋಕಾಕಿನಲ್ಲಿ ಇದೇ ರೀತಿ ಪಾಲಿಟೀಕ್ಸ್ ನಡೆಯುತ್ತದೆ ಅಂತಾ ಹೇಳಲು ಸಾಧ್ಯವೇ ಇಲ್ಲ,ಯಾಕಂದ್ರೆ ಪ್ರತಿಯೊಂದು ಚುನಾವಣೆಯಲ್ಲಿ ಇಲ್ಲಿಯ ಪರಿಸ್ಥಿತಿ ವಿಭಿನ್ನವಾಗಿರುತ್ತದೆ,ಈ ಬಾರಿಯ ಉಪ ಚುನಾವಣೆಯಲ್ಲಿಯೂ ಗೋಕಾಕಿನ ಪರಿಸ್ಥಿತಿ,ಅದಲ್ ಬದಲ್ ಕದಲ್ ಆಗಿದೆ.
ಲಖನ್ ಜಾರಕಿಹೊಳಿ ಅವರು ಕಳೆದ ಬಾರಿಯ ಗೋಕಾಕ್ ಬೈ ಇಲೆಕ್ಷನ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು,ಈಗ ಲೋಕಸಭೆಯ ಬೈ ಇಲೆಕ್ಷನ್ ದಲ್ಲಿ ಲಖನ್ ಜಾರಕಿಹೊಳಿ ಅವರು ಬಿಜೆಪಿಗೆ ಬಹಿರಂಗ ಬೆಂಬಲ ವ್ಯೆಕ್ತ ಪಡಿಸುವ ಮೂಲಕ ಲಖನ್ ಪಕ್ಷಾಂತರ ಮಾಡಿದ್ದಾರೆ.
ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಟೂರ್ ಮುಗಿಸಿರುವ ಅಶೋಕ ಪೂಜಾರಿ, ಬೈ ಇಲೆಕ್ಷನ್ ದಲ್ಲಿ ಜೆಡಿಎಸ್ ಗೆ ಗುಡ್ ಬೈ ಹೇಳಿ ಈಗ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.ಅಧಿಕೃತವಾಗಿ ಕಾಂಗ್ರೆಸ್ ಸೇರುವ ಮುನ್ನವೇ ಗೋಕಾಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊವಹನಳಿ ಅವರ ಪರವಾಗಿ ಪ್ರಚಾರ ಶುರು ಮಾಡಿದ್ದಾರೆ.
ಗೋಕಾಕ ರಾಜಕೀಯವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ,ಅಶೋಕ ಪೂಜಾರಿ ಮತ್ತು ಲಖನ್ ಜಾರಕಿಹೊಳಿ ಈ ಇಬ್ಬರೂ ನಾಯಕರ ಮನಸ್ಸು ಚಂಚಲ,ಇಬ್ಬರಿಗೂ ರಾಜಕೀಯ ಸ್ಥರತೆ ಇಲ್ಲವೇ ಇಲ್ಲ,ಹೀಗಾಗಿ ಲಖನ್ ಜಾರಕಿಹೊಳಿ ಮತ್ತು ಅಶೋಕ ಪೂಜಾರಿಗೆ ಗೋಕಾಕಿನ ಜನ ಈಗ ಟೂರೀಂಗ್ ಟಾಕೀಸ್ ಎಂದು ಕರೆಯಲು ಶುರು ಮಾಡಿದ್ದಾರೆ.
ನಿರಂತರವಾಗಿ ಜಾರಕಿಹೊಳಿ ಕುಟುಂಬದ ವಿರುದ್ಧವೇ ರಾಜಕಾರಣ ಮಾಡುತ್ತ ಬಂದಿರುವ ಅಶೋಕ ಪೂಜಾರಿ ಈ ಬಾರಿಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರ ಪರವಾಗಿ ಮತಯಾಚಿಸುತ್ತರುವದು ಗೋಕಾಕ ರಾಜಕೀಯ ರಂಗದ ಹೊಸ ಇತಿಹಾಸ…