ಬೆಳಗಾವಿ-ಇದು ಸರ್ಕಾರದ ಹಠಮಾರಿತನವೋ ಅಥವಾ ಸಾರಿಗೆ ನೌಕರರ ಚೆಲ್ಲಾಟವೋ ಅನ್ನೋದು ಅರ್ಥವಾಗುತ್ತಿಲ್ಲ,ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವದರಿಂದ ಸಾರ್ವಜನಿಕರು ಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ..
ವೇತನ ಹೆಚ್ಚಳ,ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಆರಂಭಿಸಿರುವ ಕಾರಣ ಬೆಳಗಾವಿ ಬಸ್ ನಿಲ್ಧಾಣ ಬಿಕೋ ಎನ್ನುತ್ತಿದೆ.
ಇಂದು ಮುಷ್ಕರ ಇದೆ ಎಂದು ಮುಂಚಿತವಾಗಿ ತಿಳಿದ ಕಾರಣ,ಪ್ರಯಾಣಿಕರು,ಬಸ್ ನಿಲ್ಧಾಣದ ಹತ್ತಿರ ಸುಳಿಯಲಿಲ್ಲ.ಬಸ್ ಗಳು ಗೂಡು ಬಿಟ್ಟು ಹೊರಗೆ ಬರಲೇ ಇಲ್ಲ.
ಈ ಹಿಂದೆ ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡ ಹೋರಾಟ ನಡಸಿದ ಸಂದರ್ಭದಲ್ಲಿ ಸಾರಿಗೆ ನೌಕರರ ಬೇಡಿಕೆಗೆ ಕಾಲಾವಕಾಶ ಕೇಳಿತ್ತು. ಆದರೆ ಇಲ್ಲಿಯವರೆಗೆ ಸಾರಿಗೆ ನೌಕರರ ಬೇಡಿಕೆಗೆ ಸರಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಮತ್ತೆ ಸಾರಿಗೆ ನೌಕರರು ಬಸ್ ಗಳನ್ನು ರಸ್ತೆಗೆ ಬಿಡದೆ ಸರಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ಜಿಲ್ಲಾಡಳಿತ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿದೆ.