ಬೆಳಗಾವಿ-ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥಗೌಡ ಇಂದು ಬೆಳಗಾವಿಯಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ಡಿಕೆಶಿವಕುಮಾರ್ ಸಮ್ಮುಖದಲ್ಲಿ ಸೇರ್ಪಡೆಯಾದರು.
ಇದಾದ ಬಳಿಕ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು.ಮಾಜಿ ಶಾಸಕ ಮಧು ಬಂಗಾರಪ್ಪ ಸಹ ಪಕ್ಷ ಸೇರ್ಪಡೆಯಾಗುವ ಕುರಿತು ಅರ್ಜಿ ಸಲ್ಲಿಸಿದ್ದಾರೆ,ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಜಾತ್ಯಾತೀತ ನಿಲುವುಗಳನ್ನ ಹೊಂದಿದ್ದಾರೋ ಅವರಿಗೆ ಪತ್ರ ಬರೆಯುವೆ,ಅವರು ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡುವೆ,ಕಮ್ಯೂನಿಸ್ಟ್ ಪಕ್ಷ. ರೈತ ಸಂಘದ ಮುಖಂಡರು, ಬಾಬಾಗೌಡ ಪಾಟೀಲರು. ಕೋಡಿಹಳ್ಳಿ ಚಂದ್ರಶೇಖರ. ಕರವೇ ನಾರಾಯಣಗೌಡ ಬಣ,ಸೇರಿದಂತೆ ಎಲ್ಲರಿಗೂ ಮನವಿ ಮಾಡುವೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಬೆಳಗಾವಿ ಉಪಚುನಾವಣೆ, ಮಸ್ಕಿ ವಿಧಾನಸಭೆ ಚುನಾವಣೆಯಲ್ಲಿ ಜಾತ್ಯಾತೀತ ಪಕ್ಷಗಳ ಬೆಂಬಲ ಕೇಳುತ್ತಿರುವೆ, ರಸಗೊಬ್ಬರ, ಬೆಲೆ ಎರಿಕೆ ವಿರುದ್ದ ರೈತರು ಸೈನಿಕರು ಜನಸಾಮಾನ್ಯರು ಮತ ಚಲಾಯಿಸಬೇಕು,ರಾಜ್ಯ ಸರ್ಕಾರಕ್ಕೆ ಯಾರು ಸಲಹೆ ನೀಡಿದ್ದಾರೋ ಎನೋ,ನೀರು ಸರಬರಾಜು ಮಾಡಲು ಬೆಳಗಾವಿ. ಧಾರವಾಡ. ಮೈಸೂರು ಖಾಸಗಿಕರಣ ಮಾಡಲು ಹೊರಟಿದೆ, ಸರ್ಕಾರ ಖಾಸಗಿಕರಣ ಮಾಡಲು ಹೊರಟಿರುವುದ ಹಿಂದೆ ದೊಡ್ಡ ದಂಧೆ ಇದೆ, ನೀರು ಸರಬರಾಜು ಮಾಡುವ ಯೋಜನೆ ಮಾಡುವುದು ಖಾಸಗಿಕರಣದಿಂದ ಹಿಂಪಡೆಯಬೇಕು,ಈ ಕುರಿತು ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ, ಸಿಎಂ ಬಿಎಸ್ ವೈ ಮನವಿ ಮಾಡುವೆ, ಕೂಡಲೇ ಖಾಸಗಿಕರಣ ಕೈ ಬಿಡುವಂತೆ ಮನವಿ ಮಾಡುವೆ ಎಂದು ಡಿಕೆಶಿ ಹೇಳಿದರು.
ಲಖನ್ ಜಾರಕಿಹೊಳಿ ಕಾಂಗ್ರೆಸ್ ತೊರೆಯುವುದಾದ್ರೆ ತೊರೆಯಲಿ, ಅವರ ಮನವೊಲಿಸುವ ಪ್ರಯತ್ನ ಮಾಡಲ್ಲ. ಪಕ್ಷದ ತತ್ವ ಸಿದ್ದಾಂತ ಒಪ್ಪಿ ಇರುವುದಾದ್ರೆ ಇರಲಿ,ನಾನು ಬೆಳಗಾವಿಯಲ್ಲಿ ಜೆಡಿಎಸ್ ನಾಯಕರಲ್ಲೂ ಮನವಿ ಮಾಡುವೆ,ಜಾತ್ಯಾತೀತ ಮತಗಳ ವಿಭಜನೆಯಾಗಬಾರದು. ಅವರಿಗೆ ಕೈ ಮುಗಿದು ಬೆಂಬಲ ನೀಡುವಂತೆ ಮನವಿ ಮಾಡುತ್ತೇನೆ ಎಂದರು.
ಡಿಕೆ ಸಿಎಂ ಆಗ್ತಾರೆ ಅಂತಾ ಸ್ವಾಮೀಜಿಗಳ ಭವಿಷ್ಯ ಹಿನ್ನಲೆ, ನಾನು ಸಧ್ಯ ಪಕ್ಷದ ಕಾರ್ಯಕರ್ತ. ಸ್ವಾಮೀಜಿಗಳು. ಮಾಧ್ಯಮಗಳ ಆರ್ಶಿವಾದ ಇರಲಿ, ಮುಂದೊಂದು ದಿನ ನೋಡೋಣ ಎಂದು ಹೇಳಿ ಡಿಕೆಶಿ ಕೈ ಮುಗಿದರು.