ಗೋಕಾಕಿನಲ್ಲಿ ಸತೀಶ್, ಸಾಹುಕಾರ್ ಶೋ….!!!

ಬೆಳಗಾವಿ-ಹುಟ್ಟೂರು ಗೋಕಾಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ‌ ಭರ್ಜರಿ ರೋಡ್ ಶೋ ನಡೆಸಿದರು.

ಇಂದು ಗೋಕಾಕಿನಲ್ಲಿ ನಡೆದ ಸತೀಶ್ ಜಾರಕಿಹೊಳಿ‌ ನಡೆಸಿದ ರೋಡ್ ಶೋ ನಲ್ಲಿ ಸಾವಿರಾರು ಜನ ಭಾಗವಹಿಸಿ ಸಾಹುಕಾರ್ ಗೆ ಬೆಂಬಲ ಸೂಚಿಸಿದರು.

ಕೊಳವಿ ಹನುಮಂತ ದೇವಸ್ಥಾನದಿಂದ ತೆರೆದ ವಾಹನದಲ್ಲಿ ಪ್ರಚಾರ ಆರಂಭಿಸಿ, ಬಸವೇಶ್ವರ ವೃತ್ತ, ರವಿವಾರ ಪೇಟೆ, ಗುರುವಾರ ಪೇಟೆ, ಮಾರುಕಟ್ಟೆ ಸೇರಿ ನಗರದ ವಿವಿಧ ಬಡಾವಣೆಗಳಲ್ಲಿ ಮತಯಾಚಿಸಿದರು.

ಮೊಲದ ಬಾರಿ ಲೋಕಸಭೆ ಪ್ರವೇಶ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಸತೀಶ ಜಾರಕಿಹೊಳಿ ಅವರ ತವರೂರಿನಲ್ಲಿ ಇಂದು ನಡೆದ ಚುನಾವಣಾ ಪ್ರಚಾರದಲ್ಲಿ, ಸಾಗರೋಪಾದಿಯಲ್ಲಿ ಜನರು ಬಂದು ಅವರಿಗೆ ಬಲ ತುಂಬಿದ್ದು ವಿಶೇಷವಾಗಿತ್ತು.

ಪ್ರಚಾರದುದ್ದಕ್ಕೂ ಕಳೆದ 25 ವರ್ಷಗಳಿಂದ ಅವರು, ಗೋಕಾಕ ನಗರ ಮತ್ತು ಜನರಿಗಾಗಿ ಶ್ರಮಿಸಿದ ಸೇವೆಯನ್ನು ಪರಿಗಣಿಸಿ ತಮಗೆ ಮತ ನೀಡಲು ಮನವಿ ಮಾಡಿಕೊಂಡರು. ಕಳೆದ ವರ್ಷ ಪ್ರವಾಹದಲ್ಲಿ ಗೋಕಾಕ ನಗರ ಅನುಭವಿಸಿದ ನಷ್ಟ ಮತ್ತು ಜನರ ಆತಂಕಕ್ಕೆ ನೆರವಿನ ಕೈ ಚಾಚಿರುವ ಸತೀಶ ಅವರ ಕಾಳಜಿಗೆ ಜನ ಮನಸೋತು, ಸತೀಶ ಅವರ ಬೆಂಬಲಕ್ಕೆ ನಿಂತಿದ್ದಾರೆ.

ನಾನು ಹುಟ್ಟಿ, ಬೆಳೆದ ಈ ಊರಿನ ಜನ ಈ ಚುನಾವಣೆಯಲ್ಲಿ ನನ್ನ ಕೈಹಿಡಿಯುತ್ತಾರೆಂದು ಅಚಲ ನಂಬಿಕೆಯಿದೆ. ಕಳೆದ ಎರಡೂವರೆ ದಶಕದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಇನ್ನುಳಿದ ಅನೇಕ ರಂಗಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಇಷ್ಟು ದಿನ ಯಾವ ರೀತಿ ನನಗೆ ಸಹಕರಿಸಿ ಈ ಮಟ್ಟಕ್ಕೆ ತಂದಿದ್ದೀರಿ ಭವಿಷತ್ತಿನಲ್ಲಿ ಕೂಡ ನನಗೆ ಬೆಳೆಯಲು ತಮ್ಮ ಸಹಕಾರ ನೀಡುತ್ತೀರಿ ಎಂಬ ವಿಶ್ವಾಸ ಇದೆ ಎಂದು ಸತೀಶ ಜಾರಕಿಹೊಳಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ನಗರಾಧ್ಯಕ್ಷರುಗಳಾದ ಸಿದ್ದಲಿಂಗ ದಳವಾಯಿ, ಅಶೋಕ ಪಾಟೀಲ, ಮೋಸಿನ್ ಖೋಜಾ, ವಿವೇಕ ಜತ್ತಿ, ಶಿವನಗೌಡ ಪಾಟೀಲ ಸೇರಿ ಇನ್ನುಳಿದ ಮುಖಂಡರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *