ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಇಂದು ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪ್ರಚಾರಾರ್ಥ ನಡೆಸಿದ ಬೈಕ್ ರ‌್ಯಾಲಿ ಬೆಳಗಾವಿಯಲ್ಲಿ ಧೂಳೆಬ್ಬಿಸಿತು.
ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ,ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ,ಸಚಿವರಾದ ಜಗದೀಶ್ ಶೆಟ್ಟರ್,ಮುರುಗೇಶ್ ನಿರಾಣಿ,ಶ್ರೀಮಂತ ಪಾಟೀಲ,ಉಮೇಶ ಕತ್ತಿ ಶಾಸಕ ಅಭಯ ಪಾಟೀಲ ಸೇರಿದಂತೆ ಇತರ ಬಿಜೆಪಿ ನಾಯಕರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಗೌರವ ಸಮರ್ಪಿಸಿ ಬಿಜೆಪಿಯ ಬೈಕ್ ರ‌್ಯಾಲಿಗೆ ಅದ್ದೂರಿ ಚಾಲನೆ ನೀಡಿದರು.
ಬೆಳಗಾವಿಯಲ್ಲಿ ಎಂದಿಗೂ ಕಂಡರಿಯದ ಬೈಕ್ ರ‌್ಯಾಲಿ ಇದಾಗಿತ್ತು,ಸಾವಿರಾರು ಜನ ಬೈಕ್ ಸವಾರರು ಜೈಜೈ ಶ್ರೀರಾಂ ಎಂದು ಘೋಷಣೆ ಕೂಗುತ್ತ ಮುಂದೆ ಸಾಗಿದರು.ಸುಮಾರು ಮೂರು ಕಿ.ಮೀ ನವರೆಗೆ ಸಾಲಾಗಿ ನಿಂತಿದ್ದ ಬೈಕ್ ಸವಾರರು ಘೋಷಣೆ ಹಾಕುತ್ತ ರ‌್ಯಾಲಿ ಶುರು ಮಾಡುತ್ತಿದ್ದಂತೆಯೇ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಅಭಿಮಾನಿಗಳು,ಕಾರ್ಯಕರ್ತರು ಜಯಘೋಷಗಳೊಂದಿಗೆ ರ‌್ಯಾಲಿಯನ್ನು ಬಿಳ್ಕೊಟ್ಟರು.
ಬೆಳಗಾವಿಯ ಶಿವಾಜಿ ಉದ್ಯಾನವನದಿಂದ ಆರಂಭವಾದ ಬೈಕ್ ರ‌್ಯಾಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿತು.ಮುಖ್ಯಂತ್ರಿ ಯಡಿಯೂರಪ್ಪ ಸೇರಿದಂತೆ ಇತರ ಸಚಿವರು,ತೆರೆದ ವಾಹನದಲ್ಲಿ ಕೈ ಮುಗಿಯುತ್ತ ಮತಯಾಚಿಸಿದರು.
ಶಾಸಕ ಅಭಯ ಪಾಟೀಲರು ಇಂದು ನಡೆಸಿದ ಬೈಕ್ ರ‌್ಯಾಲಿ ಮತ್ತು ಮುಖ್ಯಮಂತ್ರಿಗಳ ರೋಡ್ ಶೋ ಎಂಈಎಸ್ ಗೆ ನಡುಕ ಹುಟ್ಟಿಸಿದ್ದು ಸತ್ಯ…..
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
