Breaking News

ಪ್ರತಿಯೊಬ್ಬ ಮತದಾರರಿಗೆ ಮಾಸ್ಕ ಕಡ್ಡಾಯ

ಬೆಳಗಾವಿ, – ಮತದಾನ ಸಮಯದಲ್ಲಿ ಕೋವಿಡ್ ನಿಯಮ ಪಾಲನೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತಿ ಮತಗಟ್ಟೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಕಡ್ಡಾಯವಾಗಿ ನೇಮಕ ಮಾಡಲಾಗಿದೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಕೆ. ಹೆಚ್. ಜಗದೀಶ್ ಅವರು ತಿಳಿಸಿದರು.

ಮಹಾನಗರ ಪಾಲಿಕೆಯ ಸಹಾಯಕ               ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಗುರುವಾರ (ಏ.15) ನಡೆದ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಪೂರ್ವ ಸಿದ್ಧತೆ ಕುರಿತು ಅವರು ಮಾತನಾಡಿದರು.

ಬೆಳಗಾವಿ ಉತ್ತರ ವಿಧಾನ ಸಭಾ ಮತಕ್ಷೇತ್ರದಲ್ಲಿ ಒಟ್ಟು 242618 ಮತದಾರರಿದ್ದು ಅದರಲ್ಲಿ 120502 ಪುರುಷರು, 122105 ಮಹಿಳೆಯರು ಹಾಗೂ ಇತರೆ 11 ಮತದಾರರಿದ್ದು, ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಒಟ್ಟು 243027 ಮತದಾರರಲ್ಲಿ 122705 ಪುರುಷರು, 120316 ಮಹಿಳೆಯರು ಹಾಗೂ 6 ಇತರೆ ಮತದಾರಿದ್ದಾರೆ.

ಈಗಾಗಲೇ ಮತಗಟ್ಟೆಯ ತಯಾರಿ ಮಾಡಲಾಗಿದ್ದು, ಪ್ರತಿ ಮತಗಟ್ಟೆಗಳನ್ನು ಪೂರ್ಣ ಪ್ರಮಾಣದಲ್ಲಿ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಪ್ರತಿ ಮತಗಟ್ಟೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ತಪಾಸಣೆ,  ಹ್ಯಾಂಡ್ ಸ್ಯಾನಿಟೈಸರ್ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುವುದು ಎಂದು ತಿಳಿಸಿದರು.

25 ಸೂಕ್ಷ್ಮ ವೀಕ್ಷಕರು, 13 ವಿಡಿಯೊ ವೀಕ್ಷಕರು, ವೆಬ್ ಕಾಸ್ಟ್ 119, ರಿಸರ್ವ್ ಪೊಲೀಸ್ ಹಾಗೂ ಪ್ಯಾರಾ ಮಿಲಿಟರಿ 14 ಮತಗಟ್ಟೆಗಳಿಗೆ ನೇಮಕ ಮಾಡಲಾಗಿದೆ ಎಂದು ಹೇಳಿದರು.

ಮತದಾನ ನಡೆಯಲಿರುವ ಸ್ಥಳಗಳಲ್ಲಿ ಮಳೆ ಬರವ ಸಾಧ್ಯತೆ ಇದ್ದು, ಮತ ಯಂತ್ರಗಳನ್ನು ರವಾನೆ ಮಾಡಲು ಪಾಲಿಥೀನ್ ಚೀಲ ಬಳಸಲಾಗುವುದು. ಇವರಿಗೂ ಸಿಬ್ಬಂದಿಯ ಕೊರತೆ ಆಗಿಲ್ಲ ಮುಂದೆ ಸಿಬ್ಬಂದಿಗಳ ಆರೋಗ್ಯದ ಸಮಸ್ಯೆ ಬಂದಲ್ಲಿ ರಿಸರ್ವ್ ನಲ್ಲಿ ಇರುವ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ಮತ ಚಲಾವಣೆ ಮಾಡಲು ಸಂಜೆ 7 ಗಂಟೆಯ ಸಮಯ ಕೊನೆಯದಾಗಿದ್ದು, 7 ಗಂಟೆಯ ಒಳಗೆ ಬಂದ ಮತದಾರರಿಗೆ ಟೋಕನ್ ನೀಡಿ ಮತ ಚಲಾಯಿಸಲು ಅವಕಾಶ ನೀಡಲಾಗುವುದು ಎಂದು ಪಾಲಿಕೆ ಆಯುಕ್ತರಾದ ಜಗದೀಶ್ ತಿಳಿಸಿದರು.

ಪ್ರತಿ ಮತದಾರರಿಗೆ ಮಾಸ್ಕ್ ಕಡ್ಡಾಯವಾಗಿದೆ. ಮತಗಟ್ಟೆಯಲ್ಲಿ ನಿಯೋಜಿತ ಆರೋಗ್ಯ ಇಲಾಖೆ ಸಿಬ್ಬಂದಿಗಳ ಮೂಲಕ ತಪಾಸಣೆ,  ಹ್ಯಾಂಡ್ ಸ್ಯಾನಿಟೈಸರ್ ಮಾಡಿದ ನಂತರ ಮತ ಚಲಾಯಿಸಲು ಕಳುಹಿಸಲಾಗುವುದು.

ಈ ಚುನಾವಣೆಯಲ್ಲಿ ಸಂದಿಗ್ಧ ಪರಿಸ್ಥಿತಿ ಎದುರಾಗಿದ್ದು, ಪ್ರತಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಕೋವಿಡ್ ನಿಯಮ ಪಾಲಿಸುವುದರ ಜೊತೆಗೆ ಸಹಕಾರ ನೀಡಬೇಕು ಎಂದು ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ.ಕೊಡ್ಲಿ ಅವರು ಸುದ್ದಿಗಾರರಿಗೆ ತಿಳಿಸಿದರು.

***

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *