ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮತ್ತೆ ಮುಂದುವರೆದಿದೆ ಜಿಲ್ಲೆಯಪುಟ್ಟ ಹಳ್ಳಿಯೊಂದರಲ್ಲೇ ಮಹಾಮಾರಿ ಕೊರೊನಾ ಮಹಾಸ್ಪೋಟ ಆಗಿದೆ.
ಒಂದೇ ಗ್ರಾಮದ 144 ಜನರಿಗೆ ಡೆಡ್ಲೀ ಕೊರೋನಾ ವೈರಸ್ ಒಕ್ಕರಿಸಿದೆ.ಅಬನಾಳಿ ಗ್ರಾಮದ 144 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು ಕೊರೋನಾ ವ್ಯಾಪಕವಾಗಿ ಹರಡುತ್ತಿದೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಅಬನಾಳಿ ಗ್ರಾಮವೊಂದರಲ್ಲೇ 144 ಜನರಿಗೆ ಸೊಂಕು ತಗಲಿದ್ದು ಆತಂಕಕಾರಿ ಸಂಗತಿಯಾಗಿದೆ.
ಗ್ರಾಮದ ಅಶೋಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರ‌್ಯಾಂಡಮ್ ಟೆಸ್ಟ್ ಮಾಡಿಸಲಾಗಿತ್ತು,ರ‌್ಯಾಂಡಮ್ ಟೆಸ್ಟ್ ವೇಳೆ 145 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ.300 ಜನಸಂಖ್ಯೆ ಹೊಂದಿರುವ ಅಬನಾಳಿ ಗ್ರಾಮದ ಅರ್ಧಕ್ಕೂ ಅಧಿಕ ಜನರಿಗೆ ಸೊಂಕು ದೃಡವಾಗಿದ್ದು ಈ ಗ್ರಾಮದ ಕಾರ್ಮಿಕರುಮಹಾರಾಷ್ಟ್ರ, ಗೋವಾಗೆ ವಲಸೆ ಹೋಗಿದ್ದರು,ಈ ಕಾರ್ಮಿಕರು ಸ್ವಗ್ರಾಮಕ್ಕೆ ವಾಪಸ್ ಬಂದಿದ್ದರಿಂದ ಸೋಂಕು ಹರಡಿದೆ ಎಂದು ಶಂಕಿಸಲಾಗಿದೆ.
ಸೋಂಕಿತರ ಟ್ರಾವೆಲ್ ಹಿಸ್ಟರಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಜಿಲ್ಲಾಡಳಿತ,ಸೋಂಕಿತರೆಲ್ಲರಿಗೂ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.ಇಡೀ ಗ್ರಾಮವನ್ನೇ ಕಂಟೈನ್‌ಮೆಂಟ್ ಝೋನ್ ಮಾಡಲು ಬೆಳಗಾವಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.ಅಬನಾಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರ ಥ್ರೋಟ್ ಸ್ವ್ಯಾಬ್ ಪಡೆಯಲು ಆರೋಗ್ಯ ಇಲಾಖೆ ಮುಂದಾಗಿದೆ.