Breaking News

ಮತ್ತೊಂದು ಬಾರಿ ಚುನಾವಣೆಗೆ ಸ್ಪರ್ದೆ ಮಾಡಿ ಟೀಕೆಗೆ ಗುರಿಯಾದ “ಮಂಗಲಾ”….!!!!

ಬೆಳಗಾವಿ-ಒಂದು ಬಾರಿ ಚುನಾವಣೆಗೆ ಸ್ಪರ್ದೆ ಮಾಡಿ,ಐದು ವರ್ಷಗಳ ಕಾಲ ಮಾಡ ನ ಸೇವೆ ಮಾಡಿ,ಅಧಿಕಾರ ಅನುಭವಿಸಿ,ಕನ್ಮಡ ಸಮ್ಮೇಳನಗಳನ್ನು ನಡೆಸಿ,ಮಾಜಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅವರನ್ನೇ ಜಿಲ್ಲಾ ಸಮ್ಮೇಳನದ ಅದ್ಯಕ್ಷರನ್ನಾಗಿ ಮಾಡಿ ಹೊಸ ಸಂಪ್ರದಾಯವನ್ನು ಶುರು ಮಾಡಿದ ಮಂಗಲಕ್ಕ ಮತ್ತೊಂದು ಬಾರಿ ಚುನಾವಣೆಗೆ ಸ್ಪರ್ದೆ ಮಾಡಿರುವ ಸಂಗತಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಬೆಳಗಾವಿ ಜಿಲ್ಲೆ ಅತೀ ದೊಡ್ಡ ಜಿಲ್ಲೆ ಈ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಮಾಡಿರುವ ಮಂಗಲಾ ಮೆಟಗುಡ್ ಈಗ ಮತ್ತೊಂದು ಅವಧಿಗೆ ಆಯ್ಕೆ ಬಯಸಿ ಸ್ಪರ್ದೆ ಮಾಡಿದ್ದಾರೆ,ಮಂಗಲಾ ಮೆಟಗುಡ್,ರವೀಂದ್ರ ತೋಟಗೇರ ಬಸವರಾಜ ಖಾನಪ್ಪನವರ,ಹಿರಿಯ ಪತ್ರಕರ್ತ ಪ್ರಕಾಶ್ ದೇಶಪಾಂಡೆ,ಹಾಗು ಕರಲಿಂಗನ್ನವರ ಹೀಗೆ ಒಟ್ಟು ಐದು ಜನರು ಕಣದಲ್ಲಿದ್ದಾರೆ.

ಮೇ 9 ರಂದು ಮತದಾನ ನಡೆಯಲಿದೆ,15 ಸಾವಿರಕ್ಕೂ ಹೆಚ್ವು ಮತದಾರರಿದ್ದಾರೆ.ಎಲ್ಲ ತಾಲ್ಲೂಕಾ ಕೇಂದ್ರಗಳಲ್ಲಿ ಮತದಾನ ನಡೆಯಲಿದ್ದು,ಮಂಗಲಾ ಮೆಟಗುಡ್ ಅವರು ಇನ್ನೊಂದು ಬಾರಿ ಸ್ಪರ್ದೆ ಮಾಡಿರುವದಕ್ಕೆ ಇದು ಅತೀಯಾಸೆ ಎಂದು ಇನ್ನುಳಿದ ಸ್ಪರ್ದಾಳಗಳ ಟೀಕೆಯಾಗಿದೆ.

ಇದು ಗಡಿ ಜಿಲ್ಲೆ,ಈ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರು,ಕನ್ನಡ, ನೆಲ,ಜಲ,ಭಾಷೆಗೆ ಧಕ್ಕೆ ಬಂದಾಗ ನಾಡು,ನುಡಿಯ ಹಿತ ಕಾಯಲು ಮುಂದಾಗಬೇಕು,ಆದ್ರೆ ಮಂಗಲಾ ಮೆಟಗುಡ್ ಅವರು,ಐದು ವರ್ಷಗಳ ಕಾಲ ಬೆಳಗಾವಿ ಜಿಲ್ಲಾಧ್ಯಕ್ಷರಾಗಿದ್ದಾಗ,ಯಾವ ಸಂಧರ್ಭದಲ್ಲೂ ಅವರು ಕನ್ನಡದ ಪರವಾಗಿ ಹೋರಾಟ ಮಾಡುವದಿರಲಿ,ಕನಿಷ್ಟ ಒಂದು ಕನ್ನಡಪರ ಹೇಳಿಕೆ ನೀಡಿದ ಒಂದು ಉದಾಹರಣೆಯೂ ಇಲ್ಲ.

ಕಣದಲ್ಲಿ ಕರವೇ ಮುಖಂಡ ಬಸವರಾಜ ಖಾನಪ್ಪನವರ,ಕನ್ನಡಪರ ದಾಖಲೆಗಳ ಸಂಗ್ರಹಕಾರ ರವೀಂದ್ರ ತೋಟಗೇರ,ಹಿರಿಯ ಪತ್ರಕರ್ತ ಪ್ರಕಾಶ್ ದೇಶಪಾಂಡೆ ಮತ್ತು ಕರಲಿಂಗನ್ನವರ ಸ್ಪರ್ದೆ ಮಾಡಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಯಾರನ್ನು ಗೆಲ್ಲಿಸುತ್ತಾರೆ ಅನ್ನೋದನ್ನು ಕಾಯ್ದು ನೋಡಬೇಕು.

ಸಾಹಿತ್ಯ ಪರಿಷತ್ತಿನ ಕಳೆದ ಮೂರ್ನಾಲ್ಕು ಚುನಾವಣೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ,ಕನ್ನಡ ಅಭಿಮಾನಿಗಳ ಸ್ವತ್ತಾಗಿರದೇ ಇದು ಕೆ.ಎಲ್ ಇ ಸಂಸ್ಥೆಯ ಸ್ವತ್ತಾಗಿರುವದು,ಸ್ಪಷ್ಟವಾಗುತ್ತದೆ.ಕನ್ನಡಿಗರ ಸ್ವಾಭಿಮಾನದ ಸಂಸ್ಥೆಯೂ ಡಾ. ಪ್ರಭಾಕರ ಕೋರೆಯವರ ಕೈಗೊಂಬೆಯಾಗಿದೆ

ಈ ಬಾರಿಯ ಚುನಾವಣೆಯಲ್ಲಿ ಕೆ.ಎಲ.ಇ ಸಂಸ್ಥೆ ಮತ್ತೆ ಮಂಗಲಾ ಮೆಟಗುಡ್ ಅವರನ್ನೇ ಬೆಂಬಲಿಸುತ್ತದೆಯೋ ಅಥವಾ ಕ್ರೀಯಾಶೀಲ ಅದ್ಯಕ್ಷ ನೇಮಕಕ್ಕೆ ನಿರ್ಧರಿಸುತ್ತದೆಯೋ ಇಲ್ಲವೋ ಅನ್ನೋದನ್ನು ಕಾಯ್ದು ನೋಡಬೇಕು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *