ಬೆಳಗಾವಿ- ಧಾರವಾಡದಲ್ಲಿ ಸಾಹಿತಿಗಳು ಸಿಕ್ಕಂಗೆ,ಬೆಳಗಾವಿಯಲ್ಲಿ ಕಲಾಕಾರರು ಸಿಗ್ತಾರೆ,ಇಲ್ಲಿಯ ಜನ ಬಹಳ ಕ್ರಿಯಾಶೀಲ,ಅನ್ನೋದಕ್ಕೆ ಈ ಪೋಟೋ ನೋಡಿದ್ರೆ ಸಾಕು,ಬೆಳಗಾವಿ ಜನ ಎಷ್ಟು ಕ್ರಿಯೇಟಿವ್ ಅಂತಾ ಗೊತ್ತಾಗಿ ಬಿಡುತ್ತದೆ.
ಬೆಳಗಾವಿಯಲ್ಲಿ ಎಲ್ಲರೂ ಮಾಸ್ಕ್ ಹಾಕಿಕೊಳ್ಳುತ್ತಾರೋ ಗೊತ್ತಿಲ್ಲ,ಆದ್ರೆ ಬೆಳಗಾವಿಯ ಜನ ಚನ್ನಮ್ಮ ವೃತ್ರದಲ್ಲಿರುವ ಚನ್ನಮ್ಮಾಜಿಯ ವೀರ ಸೈನಿಕರ ಪ್ರತಿಮೆಗಳಿಗೂ ಮಾಸ್ಕ ಹಾಕಿ,ಎಲ್ಲಾರೂ ಮಾಸ್ಕ್ ಹಾಕೊಳ್ರಿ ಎನ್ನುವ ಸಂದೇಶ ಸಾರಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಕೆ ಹೆಚ್ ಜಗದೀಶ್ ಅವರು ಚೆನ್ನಮ್ಮ ವೃತ್ತದಲ್ಲಿರುವ ಚನ್ನಮ್ಮಾಜಿಯ ಮೂರ್ತಿಯ ಗೋಡೆಯ ಮೇಲೆ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮಾಜಿಯ ಇತಿಹಾಸದ ಗತವೈಭವ ಸಾರುವ ಆಕರ್ಷಕ ಕಲಾಕೃತಿಗಳನ್ನು ನಿರ್ಮಿಸಿದ್ದು,ಈ ಕಲಾಕೃತಿಯಲ್ಲಿರುವ ಎಲ್ಲ ಸೈನಿಕರಿಗೂ ಮಾಸ್ಕ್ ಹಾಕಲಾಗಿದ್ದು,ಸೈನಿಕರು ಧರಿಸಿರುವ ಈ ಮಾಸ್ಕಗಳು ಎಲ್ಲರ ಗಮನ ಸೆಳೆಯುತ್ತಿವೆ.
ಈ ಚಿತ್ರ ನೋಡಿಯಾದರೂ ಬೆಳಗಾವಿಯ ಜನ…
*ನಿನ್ನ ನೋಡಿ ಸುಮ್ನೆಂಗ್ ಇರಲಿ…!!*
*ಮಾಸ್ಕ್ ಹಾಕಾಕ…*
*ಸೈನಿಟೈಸರ್ ಹೊಡಿಯಾಕ*
*ಡಿಸ್ಟನ್ಸ್ ಕಾಯಾಕ*
*ನಿನ್ನ ನೋಡಿ ಸುಮ್ನೆಂಗ್ ಇರಲಿ….
ಎಂದು ಬೆಳಗಾವಿಯ ಜನ ಸೈನಿಕನ ಮಾಸ್ಕ್ ನೋಡಿಯಾದ್ರೂ ಕೋವೀಡ್ ನಿಯಮಾವಳಿಗಳನ್ನು ಪಾಲಿಸಲಿ ಅನ್ನೋದಷ್ಟೆ ನಮ್ಮ ಕಳಕಳಿ