Breaking News

ಬೆಳಗಾವಿಯ ಕನ್ನಡ ಸಾಹಿತ್ಯ ಭವನ,ಕನ್ನಡಿಗರ ಆಸ್ತಿ….!!!

ಬೆಳಗಾವಿ- ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನ,ಯಾರಪ್ಪನ ಆಸ್ತಿ ಅಲ್ಲ.ಇದು ಸಮಸ್ತ ಕನ್ನಡಿಗರ ಆಸ್ತಿಯಾಗಿದ್ದು,ಈ ಆಸ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೇರಬೇಕೆನ್ನುವ ಒತ್ತಾಯಕ್ಕೆ ಮೂರು ದಶಕಕಗಳ ಇತಿಹಾಸವಿದೆ.

ಬೆಳಗಾವಿಯ ಕನ್ನಡ ಸಾಹಿತ್ಯ ಭವನ ಈಗ ಸದ್ಯಕ್ಕೆ ವಿಶ್ವಸ್ಥ ಮಂಡಳಿಯ ಸ್ವಾಧೀನ ದಲ್ಲಿದ್ದು,ಈ ಆಸ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಆಸ್ತಿ ಆಗಬೇಕು,ಕನ್ನಡದ ಬೆಳವಣಿಗೆಗೆ ಈ ಭವನ ಆಸರೆಯಾಗಬೇಕು ಎನ್ನುವ ಆಸೆ ಗಡಿಭಾಗದ ಕನ್ನಡಿಗರದ್ದಾಗಿದೆ‌.

ಕನ್ನಡ ಸಾಹಿತ್ಯ ಭವನದ ಇತಿಹಾಸ.‌‌..

ಬೆಳಗಾವಿಯ ಲಿಂಗರಾಜ್ ಕಾಲೇಜು ಮೈದಾನದಲ್ಲಿ 1980 ರಲ್ಲಿ 52 ನೇಯ ಅಖಿಲ ಭಾರತ, ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು.ಬಸವರಾಜ್ ಕಟ್ಟಿಮನಿ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.

ಈ ಸಮ್ಮೇಳನದಲ್ಲಿ 1 ಲಕ್ಷ ರೂ ಉಳಿತಾಯವಾಗಿತ್ತು, ಮಾಲಗತ್ತಿ,ಆರ್ ಎಸ್ ಕುಲಕರ್ಣಿ, ಎಸ್ ಎಂ ಕುಲಕರ್ಣಿ ,ಸಿದ್ಧನಗೌಡ ಪಾಟೀಲ ,ರಾಘವೇಂದ್ರ ಜೋಶಿ ಅವರು ಸೇರಿದಂತೆ ಅನೇಕ ಜನ ಸಾಹಿತಿಗಳು ಕನ್ನಡಪರ ಹೋರಾಟಗಾರರು ಸೇರಿಕೊಂಡು ಉಳಿತಾಯದ ಹಣದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ನಿರ್ಧರಿಸಿ ಈ ವಿಚಾರದಲ್ಲಿ ಅವರು ಸಫಲರಾಗಿದ್ದರು.

ಚನ್ನಮ್ಮ ವೃತ್ತದ ಬಳಿಯಲ್ಲಿ ನ್ಯಾಯಾಂಗ ಇಲಾಖೆ ನೀಡಿದ ಜಾಗೆಯಲ್ಲಿ ಬೆಳಗಾವಿಯ ದಿಗ್ಗಜರು ಕನ್ನಡ ಭವನ ನಿರ್ಮಿಸಿದರು‌. ಕನ್ನಡ ಭವನ ನಿರ್ಮಿಸಿದ ಬಳಿಕ ಈ ಭವನ ವಿಶ್ವಸ್ಥ ಮಂಡಳಿಯ ಪಾಲಾಯಿತು.

ಬೆಳಗಾವಿಯಲ್ಲಿ 1980 ರಲ್ಲಿ ನಡೆದ 52 ನೇಯ ಸಾಹಿತ್ಯ ಸಮ್ಮೇಳನದಲ್ಲಿ ಉಳಿತಾಯವಾದ 1 ಲಕ್ಷ ರೂ ವೆಚ್ಚದಲ್ಲಿ ಬೆಳಗಾವಿಯ ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗಿದೆ.ಹೀಗಾಗಿ ಈ ಭವನ ಕನ್ನಡ ಸಾಹಿತ್ಯ ಪರಿಷತ್ತಿನ ಆಸ್ತಿ ಆಗಬೇಕು ಎನ್ನುವದು ಕನ್ನಡಿಗರ ಒತ್ತಾಯ ಆಗಿದೆ.

ರಮೇಶ್ ಕುಡಚಿ ಅವರ ಕೊಡುಗೆ…

ಬೆಳಗಾವಿಯ ಕನ್ನಡ ಸಾಹಿತ್ಯ ಭವನದ ಒಂದು ಅಂತಸ್ತಿನ ಕಟ್ಟಡ ನಿರ್ಮಾಣವಾಯಿತು,1999 ರಲ್ಲಿ ಶಾಸಕ ರಮೇಶ್ ಕುಡಚಿ ಅವರು ಈ ಸಾಹಿತ್ಯ ಭವನದ ಇನ್ನೊಂದು ಅಂತಸ್ತು ನಿರ್ಮಿಸಲು ಮುಂದಾದರು,ಲೋಕೋಪಯೋಗಿ ಇಲಾಖೆಯಿಂದ 13 ಲಕ್ಷ ರೂ ಮಂಜೂರು ಮಾಡಿಸಿ ಕನ್ನಡ ಸಾಹಿತ್ಯ ಭವನದ ಎರಡನೇಯ ಅಂತಸ್ತು ಪೂರ್ಣಗಿಳಿಸಿದರು.

ಕನ್ನಡ ಸಾಹಿತ್ಯ ಭವನದ ವಿಶ್ವಸ್ಥ ಮಂಡಳಿಯ ಸದಸ್ಯರಾಗಿದ್ದ ಸಿದ್ಧನಗೌಡ ಪಾಟೀಲ ಮತ್ತು ರಾಘವೇಂದ್ರ ಜೋಶಿ ಸೇರಿದಂತೆ ಅನೇಕ ಜನ ಸದಸ್ಯರು ಇಹಲೋಕ ತ್ಯಜಿಸಿದ್ದಾರೆ.

ಬೆಳಗಾವಿಯ ಕನ್ನಡ ಸಾಹಿತ್ಯ ಭವನ ಸಮಸ್ತ ಕನ್ನಡಿಗರ ಆಸ್ತಿ ಆಗಲಿ ಎನ್ನುವ ಧ್ವನಿ ಈಗ ಗಡಿನಾಡ ಗುಡಿಯಲ್ಲಿ ಸದ್ದು ಮಾಡುತ್ತಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *