ಬೆಳಗಾವಿ-ಬೆಳಗಾವಿಯ ಖ್ಯಾತ ರಿಯಲ್ ಇಸ್ಟೇಟ್ ಉದ್ಯಮಿ,ಮದನ್ ಕುಮಾರ್ ಬೈರಪ್ಪನವರ ಅವರನ್ನು ಇಂದು ಬೆಳಿಗ್ಗೆ ಕಿಡ್ನ್ಯಾಪ್ ಮಾಡಿದ ಘಟನೆ ಮಾಳಮಾರುತಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗಾವಿಯ ಕಣಬರ್ಗಿ ರಸ್ತೆಯಲ್ಲಿರುವ ಶೃತಿ ಅಪಾರ್ಟ್ಮೆಂಟ್ ಬಳಿ,ಕಾರಿನಲ್ಲಿ ಬಂದ ಕೆಲವು ಜನ ಘಾತುಕರು ,ಮದನ್ ಕುಮಾರ್ ಅವರನ್ನು ಬಲವಂತವಾಗಿ ಎಳೆದಾಡಿ ಅವರನ್ನು ಕಿಡ್ನ್ಯಾಪ್ ಮಾಡಿದ್ದು,ಈ ಕುರಿತು ಅವರ ಕುಟುಂಬದವರು ಮಾಳ ಮಾರುತಿ ಪೋಲೀಸರಿಗೆ ದೂರು ನೀಡಿದ್ದಾರೆ.
ಮದನ್ ಕುಮಾರ್ ಬೈರಪ್ಪನವರು ದೊಡ್ಡ ರಿಯಲ್ ಇಸ್ಟೇಟ್ ಉದ್ಯಮಿಯಾಗಿದ್ದು,ಶೃತಿ ಕನ್ಸಟ್ರಕ್ಷನ್ಸ್ ,ಶೃತಿ ಲೇಔಟ್,ಶೃತಿ ಅಪಾರ್ಟ್ಮೆಂಟ್ ಮಾಲೀಕರಾಗಿದ್ದು,ಬೆಳಗಾವಿಯಲ್ಲಿ ರಿಯಲ್ ಇಸ್ಟೇಟ್ ಉದ್ಯಮದಲ್ಲಿ ಹೆಸರು ಮಾಡಿದ್ದಾರೆ.
ಕಿಡ್ನ್ಯಾಪ್ ಪ್ರಕರಣದ ಕುರಿತು ಮಾಳ ಮಾರುತಿ ಠಾಣೆಯ ಪೋಲೀಸರು ತನಿಖೆ ಚುರುಕುಗೊಳಿಸಿದ್ದಾರೆ.ಮದನ್ ಕುಮಾರ್ ಭೈರಪ್ಪನವರ ಅಪಹರಣ ,ರಿಯಲ್ ಇಸ್ಡೇಟ್ ಉದ್ಯಮಿಗಳನ್ನು ತಲ್ಲಣಗೊಳಿಸಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ