ಬೆಳಗಾವಿ-ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಕಟ್ಟಡ ಕಾರ್ಮಿಕನ ಬರ್ಬರ ಹತ್ಯೆ ನಡೆದಿದೆ.ಬೆಳಗಾವಿಯ ವಡಗಾವಿ ಬಳಿ ಯಳ್ಳೂರ ಕ್ರಾಸ್‌ನಲ್ಲಿ ಕಟ್ಟಡ ಕಾರ್ಮಿಕನ ಮೇಲೆ ಕಟರ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ.
ಮಾರಕಾಸ್ತ್ರಗಳಿಂದ ಕೊಚ್ಚಿ ಮಹಾದೇವ ಜಾಧವ್ (55) ಎಂಬ ಕಟ್ಟಡ ಕಾರ್ಮಿಕನ ಹತ್ಯೆ ಮಾಡಲಾಗಿದೆ.
ಕೊಲೆಯಾದ ಮಹಾದೇವ ಜಾಧವ್ ಬೆಳಗಾವಿ ತಾಲೂಕಿನ ಅಂಬೇವಾಡಿಯ ನಿವಾಸಿಯಾಗಿದ್ದು ಮನೆಯಲ್ಲಿ ಜಗಳಾಡಿ ಅಂಬೇವಾಡಿ ಬಿಟ್ಟು ಬೆಳಗಾವಿಯ ವಡಗಾವಿಯಲ್ಲಿರುವ ತಂಗಿಯ ಮನೆಯ ಪಕ್ಕದಲ್ಲಿ ವಾಸವಾಗಿದ್ದ.
ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮಹಾದೇವ ಜಾಧವ್ ಇತನ ಸಹಾಯಕ ಕಾರ್ಮಿಕನಿಗೆ ಎರಡು ಸಾವಿರ ಸಾಲ ಕೊಟ್ಟಿದ್ದ,ಕೊಟ್ಟ ಸಾಲವನ್ನು ಕೇಳಲು ಹೋದಾಗ ಸಹಾಯಕ ಕಾರ್ಮಿಕನೊಬ್ಬ ಕಟರ್ ಹಿಡಿದು ಹೆದರಿಸುವ ಪ್ರಯತ್ನ ಮಾಡುವಾಗ ಕಟರ್ ಕುತ್ತಿಗೆಗೆ ತಾಗಿ ಹತ್ಯೆ ನಡೆದಿದೆ.
ಭಾರತ್ ನಗರದಲ್ಲಿ ತಂಗಿ ಮನೆಯ ಬಳಿ ರೂಮ್ ಬಾಡಿಗೆ ಪಡೆದು ವಾಸವಿದ್ದ ಆತ,ಇಂದು ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದ ಮಹಾದೇವ ಜಾಧವ್ ಮೇಲೆ, ಅಪರಿಚಿತ ದುಷ್ಕರ್ಮಿಗಳಿಂದ ಮಹಾದೇವ ಜಾಧವ್ ಹತ್ಯೆ ನಡೆದಿದೆ.ಸ್ಥಳಕ್ಕೆ ಶಹಾಪುರ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಶಹಾಪುರ ಠಾಣೆ ಪೊಲೀಸರು ಕೊಲೆ ಮಾಡಿದ ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ