Breaking News

ಸುವರ್ಣಸೌಧ ..ಹೊಸ ಭರವಸೆ ಮೂಡಿಸಿದ ಹೊಸ ಮುಖ್ಯಮಂತ್ರಿ….!!!

ಬೆಳಗಾವಿ-ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿ ಆಗಿರುವ,ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಹೊಸ ರೂಪ ಕೊಡುವ ನಿಟ್ಟಿನಲ್ಲಿ ಕೆಲವು ಮಹತ್ವ ನಿರ್ಧಾರಗಳನ್ನು ತೆಗೆದುಕೊಂಡೇ ಬೆಳಗಾವಿಗೆ ಬರ್ತೀನಿ, ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರ ನೇತ್ರತ್ವದಲ್ಲಿ ಕನ್ನಡ ಸಂಘಟನೆಗಳ ಕ್ರಿಯಾ ಸಮೀತಿಯ ಪದಾಧಿಕಾರಿಗಳು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು,ಭೇಟಿಯಾಗಿ,ಬೆಳಗಾವಿಯ ಸುವರ್ಣಸೌಧವನ್ನು ಕ್ರಿಯಾಶೀಲಗೊಳಿಸುವ ನಿಟ್ಟಿನಲ್ಲಿ ಚರ್ಚೆ ಮಾಡಿ ಮನವಿ ಅರ್ಪಿಸಿದರು.

ಬೆಳಗಾವಿಯ ಸುವರ್ಣ ಸೌಧಕ್ಕೆಒಂದು ರೂಪವನ್ನು ಕೊಟ್ಟೇ ಕೊಡುತ್ತೇನೆ.
ಕೆಲವೊಂದು ಮಹತ್ವದ ನಿರ್ಧಾರಗಳನ್ನು
ಕೈಗೊಳ್ಳಲು ತೀರ್ಮಾನಿಸಿದ್ದೇನೆ. ಗಡಿ ಅಭಿವೃದ್ಧಿ ಪ್ರಾಧಿಕಾರ,ಗಡಿ ಸಂರಕ್ಷಣಾ ಆಯೋಗ,ಸುವರ್ಣ ಸೌಧಕ್ಕೆ ಪ್ರಮುಖ ಕಚೇರಿಗಳ ಸ್ಥಳಾಂತರ ಹಾಗೂ
ಮುಂಬಯಿ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ಮರು ನಾಮಕರಣ
ಮಾಡುವ ಕುರಿತು ನಿಯೋಗವು ಬೊಮ್ಮಾಯಿ ಅವರೊಂದಿಗೆ ಚರ್ಚಿಸಿತು.

2006 ರ ಫೆಬ್ರುವರಿ 16 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ 2014 ರ ಅಕ್ಟೋಬರ 14 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ವಿಧಾನ ಸೌಧದಲ್ಲಿ ನಾಡು,ನುಡಿ ಹಾಗೂ
ಗಡಿಗೆ ಸಂಬಂಧಿಸಿದಂತೆ ಕನ್ನಡ ಪರ ಹೋರಾಟಗಾರರ,ಚಿಂತಕರ ಸಭೆ ಕರೆದಿದ್ದರು.ತಾವೂ ಸಹ ಬೆಳಗಾವಿಯ
ಸುವರ್ಣ ಸೌಧದಲ್ಲಿ ಇಂಥ ಸಭೆಯನ್ನು
ಕರೆಯಬೇಕೆಂದು ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಬೊಮ್ಮಾಯಿ ಅವರನ್ನು ಆಗ್ರಹಿಸಿದರು.

ಮುಂದಿನ ಅಕ್ಟೋಬರ 23ರ ಕಿತ್ತೂರು ಚೆನ್ನಮ್ಮ ರಾಣಿಯ ವಿಜಯೋತ್ಸವದ ಮುನ್ನವೇ ಮುಂಬಯಿ
ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ
ಎಂದು ನಾಮಕರಣ ಮಾಡಬೇಕೆಂದು
ಅಶೋಕ ಚಂದರಗಿ ಮನವಿ ಮಾಡಿದರು.

ನಿಯೋಗದಲ್ಲಿ ಮೈನೋದ್ದೀನ್
ಮಕಾನದಾರ,ಶಿವಪ್ಪ ಶಮರಂತ,ಹರೀಶ
ಕರಿಗೊನ್ನವರ,ವಿರೇಂದ್ರ ಗೋಬರಿ
ಇದ್ದರು.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *