ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಘೋಷಣೆಯಾಗಿ,ನಾಮಪತ್ರ ಸಲ್ಲಿಸಲು ನಾಳೆ ಭಾನುವಾರ,ಮತ್ತು ಸೋಮವಾರ ಎರಡೇ ದಿನ ಬಾಕಿ ಇದ್ದರೂ,ಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆಯ ಮೇಲೆ ಎದುರಿಸಬೇಕೋ ಇಲ್ಲವೋ ಎಂದು ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ಕಿತ್ತಾಟ ಮುಂದುವರೆದಿದೆ.
ಶುಕ್ರವಾರ ಬೆಳಗಾವಿಯ ಪೈ ರೆಸಾರ್ಟಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ,ಸತೀಶ್ ಜಾರಕಿಹೊಳಿ,ಕಾಂಗ್ರೆಸ್ ಮುಖಂಡ,ಆರ್ ವ್ಹಿ ದೇಶಪಾಂಡೆ,ಅವರು ಬೆಳಗಾವಿ ಮತ್ತು ಹುಬ್ಬಳ್ಳಿ ಮಹಾನಗರಪಾಲಿಕೆ ಚುನಾವಣೆಗೆ ಸಮಂಧಿಸಿದಂತೆ ಸರಣಿ ಸಭೆಗಳನ್ನು ನಡೆಸಿದರೂ ಬೆಳಗಾವಿ ಪಾಲಿಕೆ ಚುನಾವಣೆಯ ಕುರಿತು ಯಾವುದೇ ರೀತಿಯ ನಿರ್ಧಾರಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಿಲ್ಲ.
ಬಲ್ಲ ಮೂಲಗಳ ಪ್ರಕಾರ ಚುನಾವಣೆಯನ್ನು ಪಕ್ಷದ ಚಿಹ್ನೆಯ ಆಧಾರದ ಮೇಲೆಯೇ ನಡೆಸಲು ನಿರ್ಧರಿಸಲಗಾಗಿದ್ದು” ಬಿ* ಫಾರ್ಮ್ ಗಳ ಲಕೋಟೆ ಬೆಂಗಳೂರಿನಿಂದ ಬೆಳಗಾವಿಗೆ ಪಾರ್ಸಲ್ ಆಗಿದೆ ಎಂದು ಹೇಳಲಾಗುತ್ತದೆ. ಈಗ ಟಿಕೆಟ್ ಹಂಚುವ ವಿಚಾರದಲ್ಲಿ ತಿಕ್ಕಾಟ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ಇವತ್ತೂ ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕರು ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಗೆ ಅಂತಿಮ ಸೂತ್ರ ರೂಪಿಸಿ ಅದನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.