ಅಣ್ಣ ಕೋವೀಡ್ ನಿಂದ ಸತ್ತ ತಮ್ಮ ಅಣ್ಣನ ಅಂಗಡಿಯಿಂದ ಬಂಗಾರ ಹೊತ್ಕೊಂಡ ಹೋದ…
ಬೆಳಗಾವಿ- ಕುಂದಾನಗರಿ ಬೆಳಗಾವಿಯಲ್ಲಿ ಮತ್ತೊಂದು ಗೋಲ್ಡ್ ಗೋಲ್‌ಮಾಲ್ ಪ್ರಕರಣ ಬೆಳಕಿಗೆ ಬಂದಿದೆ. ಅಣ್ಣ ಕೋವಿಡ್‌ನಿಂದ ಮೃತಪಟ್ಟ ಆದ್ರೆ ತಮ್ಮ ಅಣ್ಣನ ಬಂಗಾರ ಅಂಗಡಿ ಖಾಲಿ ಮಾಡಿದ ಪ್ರಕರಣ ಈಗ ಪೋಲೀಸ್ ಠಾಣೆ ಕಟ್ಟೆ ಏರಿದೆ.
ಹಿರಿಯ ಸಹೋದರ ಕೋವಿಡ್ ನಿಂದ ಸಾಯ್ತಾನೆ,ನಂತರ ತಮ್ಮ ಅಣ್ಣನ,ಚಿನ್ನದಂಗಡಿಯಲ್ಲಿದ್ದ 4 ಕೋಟಿ ಮೌಲ್ಯದ ಚಿನ್ನ, ಹಣದೊಂದಿಗೆ ಎಸ್ಕೇಪ್ ಆಗ್ತಾನೆ. ಈ ಕುರಿತು ಅಣ್ಣನ ಮಗಳು ಈಗ ಪೋಲೀಸರಿಗೆ ದೂರು ನೀಡಿದ್ದಾಳೆ.
ಲಾಕ್‌ಡೌನ್ ವೇಳೆ ನಡೆದ ಘಟನೆ ಅನ್‌ಲಾಕ್ ಬಳಿಕ ಬಯಲಾಗಿದೆ.ಈಗ ಚಿನ್ನದಂಗಡಿಗೆ ಆಭರಣ ಮಾಡಿಸಲು ಕೊಟ್ಟಿದ್ದ ಗ್ರಾಹಕರು ಕಂಗಾಲಾಗಿದ್ದಾರೆ.ಚಿಕ್ಕಪ್ಪನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಚಿನ್ನದಂಗಡಿ ಮಾಲೀಕನ ಪುತ್ರಿ,ಚಿಕ್ಕಪ್ಪ ಅಂಗಡಿಗೆ ನುಗ್ಗಿ ಚಿನ್ನ ಹೊತ್ಕೊಂಡು ಹೋದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪೋಲೀಸರಿಗೆ ಕೊಟ್ಟಿದ್ದಾಳೆ.
ಬೆಳಗಾವಿಯ ಪ್ರತಿಷ್ಠಿತ ಮುತಕೇಕರ್ ಜ್ಯುವೆಲರ್ಸ್‌ಗೆ ಮಾಲೀಕರಾದ ಮುತಗೇಕರ ಬ್ರದರ್ಸ ಕುಟುಂಬದಲ್ಲಿ ಗೋಲ್ಡ್ ಗೋಲ್ ಮಾಲ್ ನಡೆದಿದ್ದು ಆಭರಣ ಮಾಡಿಸಲು ಹಣ ಮತ್ತು ಚಿನ್ನ ನೀಡಿದ್ದ ಗ್ರಾಹಕರು ಈಗ ಕಂಗಾಲಾಗಿದ್ದಾರೆ.
ಬೆಳಗಾವಿಯಲ್ಲಿ ಚಿನ್ನದಂಗಡಿ ಹೊಂದಿದ್ದ ಅನಿಲ್ ಮುತಕೇಕರ್, ಅರವಿಂದ ಮುತಕೇಕರ್ ಸಹೋದರರು ಹಲವಾರು ವರ್ಷಗಳಿಂದ ಜ್ಯವಲರಿ ಬ್ಯಸನೆಸ್ ನಡೆಸಿದ್ದರು.ಮುತಕೇಕರ್ ಜ್ಯುವೆಲ್ಲರ್ಸ್, ಎಸ್.ವಿ.ಮುತಕೇಕರ್ & ಕಂ. ಹೆಸರಲ್ಲಿ ಎರಡು ಪ್ರತ್ಯೇಕ ಮಳಿಗೆ ಇವೆ.ಪಾರ್ಟ್ನರ್ಶಿಪ್‌ನಲ್ಲಿ ಅನಿಲ್, ಅರವಿಂದ,ಮಳಿಗೆ ನಡೆಸುತ್ತಿದ್ದರು.ಜೂನ್ 11ರಂದು ಕೋವಿಡ್‌ನಿಂದ ಅನಿಲ್ ಮುತಕೇಕರ್ ಮೃತಪಟ್ಟ,
ಅಣ್ಣ ಸಾವನ್ನಪ್ಪಿದ ಬಳಿಕ ತಮ್ಮ, ಚಿನ್ನದ ಅಂಗಡಿಯಲ್ಲಿನ ಚಿನ್ನ, ಹಣ ಲೂಟಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.ಜುಲೈ ಐದರಂದು ಸಂಬಂಧಿಗಳ ಜೊತೆ ಅರವಿಂದ ಮುತಕೇಕರ್ ಚಿನ್ನದಂಗಡಿ ನುಗ್ಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಸಿಸಿ ಕ್ಯಾಮರಾ ದೃಶ್ಯಾವಳಿ ಸಮೇತ ಖಡೇಬಜಾರ್ ಠಾಣೆಗೆ ದೂರು ನೀಡಲಾಗಿದೆ.ಖಡೇಬಜಾರ್ ಠಾಣೆಗೆ ಅನಿಲ್ ಮುತಕೇಕರ್ ಪುತ್ರಿ ಸಂಪದಾ ದೂರು ನೀಡಿದ್ದಾಳೆ.
ಮತ್ತೊಂದೆಡೆ ಆಭರಣ ಮಾಡಿಸಲು ಚಿನ್ನ ನೀಡಿದ ಗ್ರಾಹಕರು ಪರದಾಡುತ್ತಿದ್ದಾರೆ.