ಬೆಳಗಾವಿ-ಪ್ಯಾರಾ ಕ್ಲೈಂಬಿಂಗ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಬೆಳಗಾವಿ ರೈತನ ಮಗಳು ಅಧ್ಬುತ ಸಾಧನೆ ಮಾಡಿದ್ದಾಳೆ.
ರಷ್ಯಾದ ಮಾಸ್ಕೋದಲ್ಲಿ ನಡೆದ ಪ್ಯಾರಾ ಕ್ಲೈಂಬಿಂಗ್ ವಿಶ್ವಚಾಂಪಿಯನ್‌ಶಿಪ್ ನಲ್ಲಿ ಸುನಿತಾ ದುಂಡಪ್ಪನವರ್‌ಗೆ ಕಂಚಿನ ಪದಕ ಲಭಿಸಿದೆ.
ಸಮರ್ಥನಂ ಅಂಗವಿಕಲರ ಸಂಸ್ಥೆಗೆ ಸೇರಿದ್ದ ಸುನಿತಾ ದುಂಡಪ್ಪನವರ್ ವಿಶೇಷ ಸಾಧನೆ ಮಾಡುವ ಮೂಲಕ ಬೆಳಗಾವಿಗೆ ಕೀರ್ತಿ ತಂದಿದ್ದಾಳೆ.
ತೋಲಗಿ ಗ್ರಾಮದ ರೈತ ನೀಲಕಂಠ ಬಸಪ್ಪ ದುಂಡಪ್ಪನವರ್, ಸಾವಿತ್ರಿ ಪುತ್ರಿಯಾಗಿರುವ ಸುನಿತಾ ಹಲವಾರು ವರ್ಷಗಳಿಂದ ಪರಿಶ್ರಮ ಪಟ್ಟಿದ್ದರು.ರೈತ ನೀಲಕಂಠ ದುಂಡಪ್ಪನವರ್‌ಗೆ ಒಟ್ಟು ನಾಲ್ವರು ಹೆಣ್ಣುಮಕ್ಕಳಿದ್ದು,ನಾಲ್ವರು ಹೆಣ್ಣುಮಕ್ಕಳ ಪೈಕಿ ಕೊನೆಯ ಪುತ್ರಿ ಸುನಿತಾ ದುಂಡಪ್ಪನವರ್.
ಇದೇ ಮೊದಲ ಬಾರಿ ದೃಷ್ಟಿದೋಷವುಳ್ಳವರು ಭಾರತವನ್ನು ಪ್ರತಿನಿಧಿಸಿದ್ದರುಸುನಿತಾ ದುಂಡಪ್ಪನವರ್ ಸಾಧನೆಗೆ ಮಹಾಂತೇಶ ಕಿವಡಸಣ್ಣವರ್ ಮೆಚ್ಚುಗೆ ವ್ಯೆಕ್ತಪಡಿಸಿದ್ದಾರೆ. ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹಾಂತೇಶ ಕಿವಡಸಣ್ಣವರ್ ಹರ್ಷ ವ್ಯೆಕ್ತಪಡಿಸಿದ್ದಾರೆ.
ಪ್ಯಾರಾ ಕ್ಲೈಂಬಿಂಗ್ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಭಾಗಿಯಾಗಲು ಸಮರ್ಥನಂ ಸಂಸ್ಥೆಯ ಮೂವರು ಆಯ್ಕೆಯಾಗಿದ್ರು,ಸಮರ್ಥನಂ ಸಂಸ್ಥೆಯ ಕ್ರೀಡಾ ಸಂಯೋಜಕಿ ಶಿಖಾ ಜೊತೆ ಮಾಸ್ಕೋಗೆ ಮೂವರು ಕ್ರೀಡಾಪಟುಗಳು ತೆರಳಿದ್ದರು.