ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಣೇಶ ವಿಸರ್ಜನಾ ಮೆರವಣಿಗೆಯ ಸಂಧರ್ಭದಲ್ಲಿ ಅಚ್ಚು ಕನ್ನಡದಲ್ಲಿ ನಾಮಫಲಕ ಹಾಕಲಾಗಿತ್ತು,ಇದಕ್ಕೆ ವಿರೋಧ ವ್ಯೆಕ್ತಪಡಿಸಲು ಬಂದ,ಎಂಇಎಸ್ ಪುಂಡರಿಗೆ ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು,ಎಂಇಎಸ್ ಗೆ ತಕ್ಕ ಪಾಠ ಕಲಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಬೆಳಗಾವಿ ನಗರದ ಕಪಿಲೇಶ್ವರ ಹೊಂಡದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಗಣೇಶ ವಿಸರ್ಜನೆಗೆ ಎಲ್ಲ ರೀತಿಯ ಅನಕೂಲ ಕಲ್ಪಿಸಿ ಕೊಡಲಾಗಿತ್ತು,ಹೊಂಡದ ಪಕ್ಕದಲ್ಲಿ ಪಾಲಿಕೆ ವತಿಯಿಂದ ವೇದಿಕೆ ನಿರ್ಮಿಸಿ ಇದೇ ವೇದಿಕೆ ಮೂಲಕ ಗಣೇಶ ಮಂಡಳಗಳಿಗೆ ಸೂಕ್ತ ನಿರ್ದೇಶನ ನೀಡುವ ಕಾರ್ಯವೂ ನಡೆದಿತ್ತು.ಈ ವೇದಿಕೆಯ ಮೇಲೆ ಕನ್ನಡದಲ್ಲಿ ಸ್ವಾಗತ ಫಲಕವನ್ನು ಹಾಕಲಾಗಿತ್ತು.
ವೇದಿಕೆಯ ಮೇಲೆ ಹಾಕಲಾಗಿರುವ ಫಲಕದಲ್ಲಿ ಮರಾಠಿ ಏಕಿಲ್ಲ..? ಎಂದು ತಕರಾರು ತೆಗೆದ ಎಂಈಎಸ್ ಪುಂಡರು ವೇದಿಕೆಯ ಮೇಲೆ ಏರಿ ಪಾಲಿಕೆಯ ಮುಖ್ಯ ಇಂಜಿನಿಯರ್ ಲಕ್ಷ್ಮೀ ನಿಪ್ಪಾಣಿಕರ ಅವರಿಗೆ ಘೇರಾವ್ ಹಾಕಿದ್ರು..
ಇದಕ್ಕೆ ಜಗ್ಗದ ಲಕ್ಷ್ಮೀ ರುದ್ರಾವತಾರ ತಾಳಿದ್ರು,ಎಂಇಎಸ್ ಪುಂಡರಿಗೆ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು,ಸಾವಿರಾರು ಜನಸಮೂಹದ ನಡುವೆ ಹೆದರದೇ ತಕ್ಕ ಉತ್ತರ ನೀಡುವ ಮೂಲಕ ಕನ್ನಡದ ಹಿತ ಕಾಯ್ದರು ಎಂಈಎಸ್ ನಾಯಕರಿಗೆ ಈ ಮೊದಲೂ ಈ ರೀತಿ ಯಾರೂ ಪಾಠ ಕಲಿಸಿರಲಿಲ್ಲ.
ಲಕ್ಷ್ಮಿ ಉಗ್ರಾವತಾರಕ್ಕೆ ಬೆದರಿದ ಎಂಇಎಸ ಪುಂಡರು ಅಲ್ಲಿಂದ ಜಾಗ ಖಾಲಿ ಮಾಡಿದ್ರು…
ಲಕ್ಷ್ಮಿ ನಿಪ್ಪಾಣಿಕರ , ಬೆಳಗಾವಿ ಮಹಾನಗರ ಪಾಲಿಕೆ ಡೆಪ್ಯೂಟಿ ಕಮಿಷನರ್ ಆಫ್ ಡೆವಲಪ್ಮೆಂಟ್ ಹುದ್ದೆಯಲ್ಲಿದ್ದಾರೆ.ನಗರದ ಕಪಿಲೇಶ್ವರ ಹೊಂಡದ ಬಳಿ ಮಹಾನಗರ ಪಾಲಿಕೆ ವೇದಿಕೆಯಲ್ಲಿನ ಬ್ಯಾನರನಲ್ಲಿ ಮರಾಠಿ ಭಾಷೆ ಬಳಸಿಲ್ಲವೆಂದ ಪುಂಡಾಟಿಕೆ ನಡೆಸಿದ್ದ ಎಂಎಸ್ ಪುಂಡರಿಗೆ,ಲಕ್ಷ್ಮೀ ನಿಪ್ಪಾಣಿಕರ, ಕೆನ್ನೆಗೆ ಬಾರಿಸಲು ಮುಂದಾದ್ರು ನಂತರ ಎಂಇಎಸ್ ಪುಂಡರು ಅಲ್ಲಿಂದ ಜಾಗ ಖಾಲಿ ಮಾಡಿದ್ರು…