ಬೆಳಗಾವಿ- ಮಾಜಿ ಶಾಸಕ ಸಂಜಯ ಪಾಟೀಲ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ನಡುವಿನ ವಾಕ್ ಸಮರ ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ,ಯಾಕಂದ್ರೆ,ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮತ್ತೆ ಮಾಜಿ ಶಾಸಕ ಸಂಜಯ್ ಪಾಟೀಲ್ ವಾಗ್ದಾಳಿ ನಡೆಸಿದ್ದು ಲಕ್ಷ್ಮೀ ಹೆಬ್ಬಾಳ್ಕರ್‌ನ್ನು ಆನಂದಿಬಾಯಿ ಪೇಶ್ವೆಗೆ ಹೋಲಿಸಿ ಟೀಕೆ ಮಾಡಿದ್ದಾರೆ.
ರೋಡ್ ಪಾಲಿಟಿಕ್ಸ್ ಆಯ್ತು ನೈಟ್ ಪಾಲಿಟಿಕ್ಸ್ ಆಯ್ತು ಈಗ ಭಾಷಾ ಪಾಲಿಟಿಕ್ಸ್ ಶುರುವಾಗಿದ್ದು,ಸಂಜಯ್ ಪಾಟೀಲ್ ಮರಾಠಾ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಹೆಬ್ಬಾಳಕರ ಬೆಂಬಲಿಗರು ಆರೋಪ ಮಾಡಿರುವ ಹಿನ್ನಲೆಯಲ್ಲಿ ಸಂಜಯ ಪಾಟೀಲ,ಮರಾಠಿ ಭಾಷೆಯಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
‘ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ
ನಾನು ಮರಾಠಿ ವಿರೋಧಿ, ಮರಾಠಿ ವಿರುದ್ಧ ಮಾತನಾಡ್ತೇನೆ ಎಂದು ಅಪಪ್ರಚಾರ ಮಾಡಲಾಗ್ತಿದೆ,ಈ ಹೇಳಿಕೆ ಕೇಳಿ ನನಗೆ ನಗೂ ಬರುತ್ತಿದೆ, ಸಂಜಯ್ ಪಾಟೀಲ್ ಮರಾಠಿ ವಿರುದ್ಧ ಮಾತನಾಡಲು ಸಾಧ್ಯವೇ?’ಸಂಜಯ್ ಪಾಟೀಲ್ ಕೊಲ್ಲಾಪುರದಲ್ಲಿ ಜನಿಸಿದ್ದು ಜನ್ಮದಿಂದಲೇ ಮರಾಠಿಗನಾಗಿದ್ದಾನೆ’,ನಾನು ಹಿಂದುತ್ವ ವಿಚಾರವಾದಿ, ಮರಾಠಿ, ಕನ್ನಡ, ಜಾತಿ ಧರ್ಮದ ಬಗ್ಗೆ ಮಾತನಾಡಲ್ಲ ಎಂದು ಸಂಜಯ ಪಾಟೀಲ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಕಿಡಿಕಾರಿದ್ದಾರೆ.
ನಾನು ಶಾಸಕನಿದ್ದಾಗ ರಾಜಹಂಸಗಡದಲ್ಲಿ ಶಿವಾಜಿ ಸ್ಮಾರಕ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದೆ,ಕರ್ನಾಟಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಆರಂಭಿಸಲು ಪ್ರಯತ್ನಿಸಿದ್ದೆ,ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಗೊತ್ತಿರುವ ಪೇಶ್ವೆಗಳ ಇತಿಹಾಸವಿದೆ,ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಕಾಲದಲ್ಲಿ ಆನಂದಿಬಾಯಿ ಅಂತಾ ಇದ್ದಳು, ‘ಧ’ ಅಕ್ಷರ ‘ಮ’ ಮಾಡಿ ಷಡ್ಯಂತ್ರ ಮಾಡಿದ್ದಳು,ಅದೇ ರೀತಿ ಇಲ್ಲಿಯೂ ಒಬ್ಬಳು ಆನಂದಿಬಾಯಿ ಇದ್ದಾಳೆ,’ಧ’ ಇದ್ದದ್ದನ್ನು ‘ಮ’ ಮಾಡಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾಳೆ,ನಾನು ನಿಮ್ಮೆಲ್ಲರ ಕೈ ಮುಗಿದು ಮನವಿ ಮಾಡ್ತೇನೆ,ನಾನು ಖಟ್ಟರ್ ಹಿಂದೂತ್ವವಾದಿ, ವಿಚಾರವುಳ್ಳವನಾಗಿದ್ದೇನೆ,ಎಲ್ಲಾ ಭಾಷಿಕರು, ಸಮುದಾಯದವರನ್ನು ಗೌರವಿಸುತ್ತೇನೆ,ಕನ್ನಡ, ಮರಾಠಿ, ಗುಜರಾತಿ, ಕೊಂಕಣಿ ಎಲ್ಲಾ ಭಾಷೆಗಳಿಗೂ ಗೌರವಿಸುತ್ತೇನೆ.ನನ್ನ ಮಾತೃಭಾಷೆ ಮರಾಠಿ ಬಗ್ಗೆ ನನಗೆ ಅಪಾರ ಪ್ರೇಮವಿದೆ. ಯಾರದ್ದಾದರೂ ಮನಸು ನೋಯಿಸಿದ್ರೆ ಕ್ಷಮೆಯಾಚಿಸುತ್ತೇನೆ”ಯಾರು ಮರಾಠಿಗರ ವಿರೋಧಿ ಅನ್ನೋದನ್ನ ನೀವು ನಿರ್ಧಾರ ಮಾಡಿ’ಎಂದು ಸಂಜಯ ಪಾಟೀಲ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ವಾಕ್ ಸಮರ ಮುಂದುವರೆಸಿದ್ದಾರೆ.