ಬೆಳಗಾವಿ- ಚಾಕಲೇಟ್ ಕೊಟ್ಟು ಮಕ್ಕಳನ್ನು ಕಿಡ್ನ್ಯಾಪ್ ಮಾಡಲು ಗ್ಯಾಂಗ್ ಒಂದು ಬಂದಿತ್ತು. ಆದ್ರೆ ಗ್ರಾಮಸ್ಥರು ಕಿರುಚಾಡಿದ ಪರಿಣಾಮ ಆ ಖದೀಮರು ಮಕ್ಕಳನ್ನು ಬಿಟ್ಟು ಹೋದ್ರು….
ಹಾಡಹಗಲೇ ಮಕ್ಕಳ ಕಿಡ್ನಾಪ್‌ಗೆ ವಿಫಲಯತ್ನ ನಡೆಯಿತು ಇದರಿಂದ ಗ್ರಾಮಸ್ಥರು ಬೆಚ್ಚಿ ಬಿದ್ರು.ಈ ಘಟನೆ ನಡೆದಿದ್ದು,ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ ಗ್ರಾಮದಲ್ಲಿ.
ಆಟವಾಡುತ್ತಿದ್ದ ಮಕ್ಕಳನ್ನು ಟಾರ್ಗೆಟ್ ಮಾಡಿ ಕಿಡ್ನ್ಯಾಪ್ ಮಾಡಲು ಯತ್ನಿಸಿದ ಗ್ಯಾಂಗ್ ಮಕ್ಕಳಿಗೆ
ಚಾಕೊಲೇಟ್ ಕೊಡ್ತೇನಿ ಬಾ ಅಂತಾ ಮಕ್ಕಳನ್ನು ಕರೆದು ಕಿಡ್ನ್ಯಾಪ್ ಮಾಡಲು ಯತ್ನಿಸಿದೆ.
ಓಮಿನಿ ವ್ಯಾನ್ ನಲ್ಲಿ ಬಂದಿದ್ದ ನಾಲ್ವರಿಂದ ಕಿಡ್ನ್ಯಾಪ್ ಮಾಡುವ ಪ್ರಯತ್ನ ನಡೆದಿದೆ.
ಏಳು ವರ್ಷದ ಬಾಲಕಿ, ಐದು ವರ್ಷದ ಬಾಲಕಿ ಹೊತ್ತೊಯ್ಯುತ್ತಿದ್ದ ಗ್ಯಾಂಗ್
ಓಮಿನಿ ವ್ಯಾನ್ ನಲ್ಲಿ ಮಕ್ಕಳನ್ನ ಹಾಕಿಕೊಂಡಿದ್ದರು ಈ ದುಷ್ಕರ್ಮಿಗಳು ಕೃತ್ಯ ನೋಡಿ
ಸ್ಥಳೀಯರು ಗಮನಿಸಿ ಕಿರುಚುತ್ತಿದ್ದಂತೆ ಮಕ್ಕಳನ್ನ ಬಿಟ್ಟು ಓಡಿ ಹೋಗಿದ್ದಾರೆ ಖದೀಮರು.
ಉಮೇಶ್ ಕಾಂಬ್ಳೆ ಎಂಬುವವರಿಗೆ ಸೇರಿದ ಮಕ್ಕಳು ಇವರಾಗಿದ್ದು ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ