ಬೆಳಗಾವಿ- ರಾಜ್ಯದಲ್ಲಿ ಓಮ್ರಿಕಾನ್ ತಳಿಯ ಕೋವೀಡ್ ಸೊಂಕಿನ ಬಗ್ಗೆ ಆತಂಕ ಎದುರಾಗಿದ್ದು ಬೆಳಗಾವಿ ಗಡಿಯಲ್ಲಿ ಹೈ- ಅಲರ್ಟ್ ಘೋಷಿಸಲಾಗಿದ್ದು ಮಹಾರಾಷ್ಟ್ರದಿಂದ ರಾಜ್ಯದ ಗಡಿ ಪ್ರವೇಶ ಮಾಡುವ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಲಾಗುತ್ತಿದೆ.
ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ವಿನ ನಿಗಾ ಇಡಲಾಗಿದೆ. ಬೆಳಗಾವಿ- ಮಹಾರಾಷ್ಟ್ರ ರಾಜ್ಯಗಳನ್ನು ಸಂಪರ್ಕಿಸುವ ಬಾಚಿ ಚೆಕ್ ಪೋಸ್ಟ್ ನಲ್ಲಿ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.
ಬೆಳಗಾವಿ ಬಾಚಿ ಚೆಕ್ ಪೋಸ್ಟ್ ನಲ್ಲಿ ಪ್ರತಿಯೊಂದು ವಾಹನಗಳನ್ನು ತಡೆದು ತಪಾಸಣೆ ಮಾಡಲಾಗುತ್ತಿದೆ. RTPCR ವರದಿ ಇಲ್ಲದೇ ಬರುವ ಪ್ರಯಾಣಿಕರನ್ನು ವಾಪಸ್ ಕಳುಹಿಸಲಾಗಿತ್ತಿದೆ.
ಬಾಚಿ ಚೆಕ್ ಪೋಸ್ಟ್ ನಲ್ಲಿ ಕಂದಾಯ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು,ತುರ್ತು ಸೇವೆಗೆ ತೆರಳುತ್ತಿರುವ ಪ್ರಯಾಣಿಕರಿಗೆ,ಸ್ಥಳದಲ್ಲೇ ರ್ಯಾಪೀಡ್ ಟೆಸ್ಟ್ ಮಾಡುವ ವ್ಯೆವಸ್ಥೆ ಮಾಡಲಾಗಿದೆ.
ಬಾಚಿ ಚೆಕ್ ಪೋಸ್ಟ್ ಬಳಿಯೇ ರ್ಯಾಪೀಡ್ ಆ್ಯಂಟಿಜನ್ ಟೆಸ್ಟ ಮಾಡಲಾಗುತ್ತಿದ್ದು ರಿಪೋರ್ಟ್ ನೆಗೆಟೀವ್ ಬಂದ್ರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ RTPCR ರಿಪೋರ್ಟ್ ಕಡ್ಡಾಯ ಮಾಡಲಾಗಿದ್ದು ಬೆಳಗಾವಿ ಜಿಲ್ಲಾಡಳಿತ ಗಡಿಯಲ್ಲಿ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿದೆ.