ಬೆಳಗಾವಿ-ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಿಯ ದರ್ಶನಕ್ಕೆ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ.ಕೇವಲ ಒಂದೇ ತಿಂಗಳಲ್ಲಿ ದೇವಸ್ಥಾನದ ಹುಂಡಿಯಲ್ಲಿ ನೋಟಿನ ರಾಶಿಯೇ ಸಂಗ್ರಹವಾಗಿದೆ.
ಅಕ್ಟೋಬರ್ ಒಂದೇ ತಿಂಗಳಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ 1.20ಕೋಟಿ ಸಂಗ್ರಹವಾಗಿದ್ದು,ಒಂದೂವರೆ ವರ್ಷದ ಬಳಿಕ ಓಪನ್ ಆಗಿದ್ದ ದೇವಸ್ಥಾನದಲ್ಲಿ ದಾಖಲೆ ಮೊತ್ತದ ದೇಣಿಗೆ ಸಂಗ್ರಹವಾಗಿದೆ.
ಅಕ್ಟೋಬರ್ ತಿಂಗಳಲ್ಲಿ 15 ಲಕ್ಷ ಮೌಲ್ಯದ ಚಿನ್ನ, 2 ಲಕ್ಷ ಮೌಲ್ಯದ ಬೆಳ್ಳಿ ಕಾಣಿಕೆ ಬಂದಿದೆ.ಈ ಹಿಂದೆ ವರ್ಷಕ್ಕೆ ಸರಾಸರಿ 4 ಕೋಟಿ ರೂ. ಸಂಗ್ರಹ ಆಗ್ತಿತ್ತು,ಒಂದೂವರೆ ವರ್ಷ ಕೋವಿಡ್ ಹಿನ್ನೆಲೆ ದೇಗುಲ್ ಬಂದ್ ಆಗಿ ಆದಾಯ ಬಂದಿರಲಿಲ್ಲ, ಇದೇ ಮೊದಲ ಬಾರಿ ದಾಖಲೆ ಮೊತ್ತ ಸಂಗ್ರಹ ಆಗಿದೆ.
ದೇವಸ್ಥಾನದ 85 ಸಿಬ್ಬಂದಿ, ಸಿಂಡಿಕೇಟ್ ಬ್ಯಾಂಕ್‌ನ 10 ಸಿಬ್ಬಂದಿಯಿಂದ ನೋಟಿನ ಎಣಿಕೆ ಕಾರ್ಯ ನಡೆಯಿತು.
ದೇವಸ್ಥಾನ ವ್ಯವಸ್ಥಾಪಕ ಸಮಿತಿ, ಡಿಸಿ ಕಚೇರಿ, ಧಾರ್ಮಿಕ ದತ್ತಿ ಇಲಾಖೆ, ತಹಶಿಲ್ದಾರ್ ಕಚೇರಿ, ಸವದತ್ತಿ ಪೊಲೀಸ್ ಠಾಣೆ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿಯಲ್ಲಿ ಸಂಗ್ರಹವಾಗಿದ್ದ ನೋಟಿನ ಎಣಿಕೆ ಕಾರ್ಯ ನಡೆಯಿತು
ಹುಂಡಿಯಲ್ಲಿ ಅಮಾನ್ಯವಾದ 500 ರೂ. ,1000 ರೂ. ಮುಖಬೆಲೆಯ ನೋಟುಗಳನ್ನೂ ಕೆಲ ಭಕ್ತರು ಹಾಕಿದ್ದು ವಿಶೇಷ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ