ಬೆಳಗಾವಿ- ಕೊರೋನಾ ಹೋಯ್ತಲ್ಲಾ ಅಂತಾ ಬೆಳಗಾವಿ ಜಿಲ್ಲೆಯ ಜನ ನಿಟ್ಟುಸಿರು ಬಿಡುವಾಗಲೇ ಮಹಾಮಾರಿ ಓಮಿಕ್ರಾನ್ ವೈರಸ್ ಬೆಳಗಾವಿ ಜಿಲ್ಲೆಗೂ ವಕ್ಕರಿಸಿದೆ.
ನೈಜೇರಿಯಾದಿಂದ ಹೈದ್ರಾಬಾದ್ ಗೆ ಆಗಮಿಸಿ ಹೈದ್ರಾಬಾದಿನಿಂದ ಬೆಳಗಾವಿಗೆ ಆಗಮಿಸಿದ ಬೆಳಗಾವಿ ನಗರದ ಆಝಂ ನಗರದ ನಿವಾಸಿಯೊಬ್ಬನಿಗೆ ಓಮಿಕ್ರಾನ್ ಇರುವದು ದೃಡಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ನೈಜೇರಿಯಾದಿಂದ ಹೈದ್ರಾಬಾದ್ ,ಅಲ್ಲಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಆಗಮಿಸಿದ ಓಮಿಕ್ರಾನ್ ಸೊಂಕಿತನ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು ಆತನ ರಿಪೋರ್ಟ್ ಪಾಸೀಟೀವ್ ಬಂದಿದ್ದರಿಂದ ಈತನ ಸ್ಯಾಂಪಲ್ ಓಮಿಕ್ರಾನ್ ಟೆಸ್ಟ್ ಮಾಡಲು ಬೆಂಗಳೂರಿಗೆ ಕಳುಹಿಸಲಾಗಿತ್ತು ಆದ್ರೆ ಈತನಿಗೆ ಓಮಿಕ್ರಾನ್ ಸೊಂಕು ಇರುವದು ಇಂದು ದೃಡವಾಗಿದ್ದು ಈತನನ್ನು ಇವತ್ತು ಭೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಳಗಾವಿಯಲ್ಲಿ ಪತ್ತೆಯಾಗಿರುವ ಓಮಿಕ್ರಾನ್ ಸೊಂಕಿತ ಇಪ್ಪತ್ತಕ್ಕೂ ಹೆಚ್ಚು ಜನರ ಪ್ರಾಥಮಿಕ ಸಂಪರ್ಕಕಕ್ಕೆ ಬಂದಿದ್ದು ಆರೋಗ್ಯ ಇಲಾಖೆಯ ಅಧಿಕಾರಿಗಳು ಓಮಿಕ್ರಾನ್ ಸೊಂಕಿತನ ಸಂಪರ್ಕಕ್ಕೆ ಬಂದವರನ್ನು ಹುಡುಕಾಟ ಶುರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ