ಬೆಳಗಾವಿ-ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿಶನದಲ್ಲಿ ಇಂದು ವಿಧಾನಸಭೆಯಲ್ಲಿ ಶಾಸಕರು ಪಕ್ಷಾತೀತವಾಗಿ ಎಲ್ಲರೂ ಎಂಈಎಸ್ ಪುಂಡಾಟಿಕೆಯ ವಿರುದ್ಧ ಕಿಡಿಕಾರಿದರು.
ಇಂದು ದಿನವಿಡಿ ಸದನದಲ್ಲಿ ಎಂಈಎಸ್ ಪುಂಡಾಟಿಕೆಯ ಕುರಿತು ಚರ್ಚೆ ನಡೆಯಿತು,ಎಲ್ಲರೂ ಇವತ್ತು ಎಂಈಎಸ್ ವಿರುದ್ಧ ಮನಬಿಚ್ವಿ ಮಾತನಾಡಿ,ಎಂಈಎಸ್ ಕಿತಾಪತಿಯ ಕುರಿತು ಆಕ್ರೋಶ ವ್ಯೆಕ್ತಪಡಿಸಿದರು.
ಸಚಿವ ಈಶ್ವರಪ್ಪ ಮಾತನಾಡಿ,ಇದು ಮಹಾರಾಷ್ಟ್ರ ಏಕೀಕರಣ ಸಮೀತಿ ಅಲ್ಲ,ಇದು ಮಹಾರಾಷ್ಟ್ರ ಹೇಡಿಗಳ ಸಮೀತಿ ಎಂದು ಕಿಡಿಕಾರಿ,ಕ್ರಾಂತಿವೀರನ ಮೂರ್ತಿಯನ್ನು ವಿರೂಪಗೊಳಿಸಿದ ದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಎಂಈಎಸ್ ವಿರುದ್ಧ ವಾಗ್ದಾಳಿ ನಡೆಸಿದ್ರು
ಸುದೀರ್ಘ ಚರ್ಚೆಯ ಬಳಿಕ ಉತ್ತರ ನೀಡಿದ ಸಿಎಂ ಬೊಮ್ಮಾಯಿ, ಮಹಾಪುರುಷರ ಮೂರ್ತಿಯ‌್ನು ವಿರೂಪಗೊಳಿಸಿದ ವಿಕೃತ ಕಿಡಗೇಡಿಗಳ ವಿರುದ್ದ ದೇಶದ್ರೋಹದ ಕೇಸ್ ದಾಖಲು ಮಾಡುತ್ತೇವೆ, ಇವರ ಹಿಂದೆ ಯಾರಿದ್ದಾರೆ? ಯಾವ ಸಂಘಟನೆಗಳಿವೆ ಅನ್ನೋದನ್ನು ಕಾಲ್ ಟ್ರ್ಯಾಕ್ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಅವರು ಯಾರೇ ಇರಲಿ ಅವರ ವಿರುದ್ಧ ಗೂಂಡಾ ಕೇಸ್ ದಾಖಲು ಮಾಡುತ್ತೇವೆ ಈ ವಿಚಾರದಲ್ಲಿ ಸರ್ಕಾರ ಎಲ್ಲ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಸದನಕ್ಕೆ ಭರವಸೆ ನೀಡಿದ್ರು.
ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ವೀರರಾಣಿ ಕಿತ್ತೂರು ಚನ್ನಮ್ಮಾಜಿ,ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತೇವೆ.ಎಂದು ಸಿಎಂ ಬೊಮ್ಮಾಯಿ ಸದನದಲ್ಲಿ ಇಂದು ಘೋಷಣೆ ಮಾಡಿದ್ರು.
ಮಹಾರಾಷ್ಟ್ರದಲ್ಲಿ ಇರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಜರಿಗಿಸುತ್ತದೆ.ಜೊತೆಗೆ ಮಹಾರಾಷ್ಟ್ರದ ಕೆಕವು ಹಳ್ಳಿಗಳು ಕರ್ನಾಟಕಕ್ಕೆ ಸೇರಲು ಮುಂದಾಗಿವೆ,ಈ ವಿಚಾರದಲ್ಲಿ ನಮ್ಮ ಸರ್ಕಾರ ಅವರಿಗೆ ಸಪೋರ್ಟ್ ಮಾಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ರು.