Breaking News

ದೇಸೂರ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಣ್ಣ ತಂಗಿ

ಬೆಳಗಾವಿ- ಬೆಳಗಾವಿಯಿಂದ ಖಾನಾಪೂರದ ಕಡೆಗೆ ಹೊರಟಿದ್ದ ಕಾರು ಟ್ರಕ್ ಓವರ್ ಟೇಕ್ ಮಾಡುತ್ತಿರುವಾಗ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಣ್ಣ ಮತ್ತು ತಂಗಿ ಸಾವನ್ನೊಪ್ಪಿದ ಘಟನೆ ದೇಸೂರ ಬಳಿ ನಡೆದಿದೆ

ಬೆಳಗಾವಿಯಯ ವಡಗಾಂವ ಪ್ರದೇಶದ ಯುವಕರು ಧಾಬಾಗೆ ಉಟ ಮಾಡಲು ಕಾರಿನಲ್ಲಿ ಹೊರಟಿದ್ದರು ಈ ಕಾರು ದೇಸೂರ ಬಳಿ ಲಾರಿ ಓವರಟೇಕ್ ಮಾಡುತ್ತಿರುವಾಗ ಎದುರಿನಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಾಗ ಬೈಕ್ ಮತ್ತು ಕಾರು ರಸ್ತೆ ಪಕ್ಕದ ಗಿಡಗಂಟೆಗಳಲ್ಲಿ ಪಟ್ಟಿಯಾದ ಪರಿಣಾಮ ಖಾನಾಪೂರ ತಾಲ್ಲೂಕಿನ ಅಣ್ಣ ಮತ್ತು ತಂಗಿ ಮೃತಪಟ್ಟಿದ್ದಾರೆ

ಮೃತ ಪಟ್ಟವರನ್ನು ಖಾನಾಪೂರ ತಾಲ್ಲೂಕಿನ ಮಾನಿಕವಾಡಿ ಗ್ರಾಮದ ನಾಮದೇವ ತುಕಾರಾಮ ಗಾವಡೆ 40 ಹತ್ತರಗುಂಜಿ ಗ್ರಾಮದ ಸರೀತಾ ನಾರಾಯಣ ಅಡಕುರಕರ 34 ಎಂದು ಗುರುತಿಸಲಾಗಿದೆ

ಬೆಳಿಗ್ಗೆ ಅಫಘಾತ ಸಂಭವಿಸಿದ್ದ ಸಂಧರ್ಭದಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು ಇಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಅಣ್ಣ ನಾಮದೇವ ಮಧ್ಯಾಹ್ನ 12 ಘಂಟೆಗೆ ಮೃತಪಟ್ಟರೆ ತಂಗಿ ಸರೀತಾ ಸಂಜೆ 7 ಘಂಟೆಗೆ ಮೃತ ಪಟ್ಟಿದ್ದಾಳೆ

ಮಚ್ಛೆ ಗ್ರಾಮದಲ್ಲಿದ್ದ ತಮ್ಮ ಸಮಂಧಿಕರನ್ನು ಭೇಟಿಯಾಗಲು ಹೊರಟಿದ್ದ ಅಣ್ಣ ತಂಗಿ ಮಸಣ ಸೇರಿದ್ದು ದುರ್ದೈವದ ಸಂಗತಿಯಾಗಿದೆ

ಕಾರಿನಲ್ಲಿ ಸಂಚರಿಸುತ್ತಿದ್ದ ಇಬ್ಬರು ಯುವಕರು ಈ ಅಪಘಾತದಲ್ಲಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆತುತ್ತಿದ್ದಾರೆ ಬೆಳಗಾವಿ ಗದರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *