Breaking News
Home / Breaking News / ಬೆಳಗಾವಿ ಕನ್ನಡಿಗರ ಅಪ್ಪನ ಆಸ್ತಿಯಲ್ಲ- ಕಿರಣ ಠಾಕೂರ

ಬೆಳಗಾವಿ ಕನ್ನಡಿಗರ ಅಪ್ಪನ ಆಸ್ತಿಯಲ್ಲ- ಕಿರಣ ಠಾಕೂರ

ಬೆಳಗಾವಿ- ಕರ್ನಾಟಕ ಸರ್ಕಾರಕ್ಕೆ ಬೆಳಗಾವಿ ಪುಕ್ಸಟ್ಟೆಯಾಗಿ ಸಿಕ್ಕಿದೆ ಬೆಳಗಾವಿ ಕನ್ನಡಿಗರ ಅಪ್ಪನ ಆಸ್ತಿ ಅಲ್ಲ ಎಂದು ಎಂಈಎಸ್ ಮುಖಂಡ ಕಿರಣ ಠಾಕೂರ ಪುಂಡಾಟಿಕೆಯ ಹೆಳಿಕೆ ನೀಡಿದ್ದಾರೆ

ಬೆಳಗಾವಿಯ ರಾಮನಾಥ ಮಂಗಲ ಕಾರ್ಯಾಲಯ ದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು ಗಡಿ ವಿವಾದ ಸುಪ್ರೀಂ ಕೋರ್ಟಿನಲ್ಲಿದೆ ಕೇಂದ್ರ ಸರ್ಕಾರ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿದರೆ ಕರ್ನಾಟಕ ಸರ್ಕಾರಕ್ಕೆ ಆವಾಗ ಬುದ್ಧಿ ಬರುತ್ತದೆ ಎಂದು ಕಿರಣ ಠಾಕೂರ ಹೇಳಿದ್ದಾರೆ

ನಮ್ಮ ತೆರಿಗೆ ಹಣದಲ್ಲಿ ಬೆಳಗಾವಿಯಲ್ಲಿ ಐದು ನೂರು ಕೋಟಿ ಖರ್ಚು ಮಾಡಿ ಸುವರ್ಣ ವಿಧಾನಸೌಧವನ್ನು ನಿರ್ಮಿಸಿದ್ದಾರೆ ವರ್ಷದಲ್ಲಿ ಹತ್ತು ದಿನವೂ ಇಲ್ಲಿ ಸರಿಯಾಗಿ ಕಲಾಪಗಳು ನಡೆಯುವದಿಲ್ಲ ಸಾರ್ವಜನಿಕರ ಹಣವನ್ನು ಕರ್ನಾಟಕ ಸರ್ಕಾರ ವೇಸ್ಟ್‌ ಮಾಡಿದೆ ಎಂದು ಕಿರಣ ಠಾಕೂರ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ

ಮಹಾರಾಷ್ಟ್ರದ ಸಂಜಯ ರಾವತ ಮಾತನಾಡಿ ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ ಆದ್ರೂ ನಾನು ಮಾತನಾಡಲು ಹೆದರುವದಿಲ್ಲ ಬೆಳಗಾವಿಯ ಮರಾಠಿಗರಿಗಾಗಿ ನೂರಾರು ಕೇಸ್ ಹಾಕಿಸಿ ಕೊಳ್ಳಲು ನಾನು ಸಿದ್ಧನಿದ್ದೇನೆ ಬೆಳಗಾವಿಯಲ್ಲಿ ಒಂದು ಮಹಾರಾಷ್ಟ್ರ ಬಸ್ ಗೆ ಬೆಂಕಿ ಹಚ್ಚಿದರೆ ನಾವು ಮಹಾರಾಷ್ಟ್ರದಲ್ಲಿ ಕರ್ನಾಟಕದ ಹತ್ತು ಬಸ್ ಗಳಿಗೆ ಬೆಂಕಿ ಹಚ್ವುತ್ತೇವೆ ಎಂದು ಸಂಜಯ ರಾವತ ಪುಂಡಾಟಿಕೆಯ ಮಾತುಗಳನ್ನಾಡಿದ್ದಾರೆ

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *