ಬೆಳಗಾವಿ- ಸಂಜೆಯಾದ್ರೆ ಸಾಕು ಬೆಳಗಾವಿಯ ಜನ ಮನೆ ಸೇರಿಕೊಳ್ಳುತ್ತಿದ್ದಾರೆ,ಯಾಕಂದ್ರೆ ಸೂರ್ಯ ಮುಳುಗುತ್ತಿದ್ದಂತೆಯೇ ಚಳಿಯ ಆಟ ಇಲ್ಲಿ ಶುರುವಾಗುತ್ತೆ,ಮೈಕೊರೆಯುವ ಈ ಚಳಿ ಬೆಳಗಾವಿಯ ನಿವಾಸಿಗಳನ್ನು ತಲ್ಲಣಗೊಳಿಸಿದೆ.
ಬೆಳಿಗ್ಗೆ ಸೂರ್ಯ ಉದಯವಾಗುವ ಮೊದಲು ಮನೆಯಿಂದ ಹೊರಗೆ ಬಂದ್ರೆ, ಪಕ್ಕದ ಮನೆ ಕಾಣಿಸುವದೇ ಇಲ್ಲ,ಯಾಕಂದ್ರೆ ಎಲ್ಲಿ ನೋಡಿದಲ್ಲಿ ದಟ್ಟವಾದ ಮಂಜು ಕಾಣಿಸುತ್ತದೆ,ಬೆಳಗಿನ ವಾತಾವರಣ ನೋಡಿದ್ರೆ ಬೆಳಗಾವಿ ಕಾಶ್ಮೀರದ ಕಣಿವೆಯ ಸ್ವರೂಪ ಪಡೆದಿರುವದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ವರ್ಷದ ಚಳಿ,ಮತ್ತು ದಟ್ಟವಾದ ಮಂಜು ಕುಂದಾನಗರಿ ಬೆಳಗಾವಿಗೆ ಕಾಶ್ಮೀರದ ರೂಪ ಕೊಟ್ಟಿದ್ದು ಸತ್ಯ..
ಕಳೆದ 10 ವರ್ಷಗಳ ನಂತರ ದಾಖಲೆಯ ತಾಪಮಾನ….
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಚಳಿಗೆ ಜನ ತತ್ತರಿಸಿದ್ದಾರೆ. ಕಳೆದೆರಡು ದಿನಗಳಿಂದ 10″ಡಿಗ್ರಿ ಸೆಲಸಿಯ್ಸ್ ಇದ್ದ ತಾಪಮಾನ ಇಂದು 8″ ಡಿಗ್ರಿ ಸೆಲಸಿಯ್ಸಗೆ ಇಳಿಕೆ ಕಂಡಿದೆ.ಕುಂದಾನಗರಿಯಲ್ಲಿ ಬಹುತೇಕ ಶೀತ ಚಳಿ ಇರುವ ವಾತಾವರಣ ಹಿನ್ನಲೆಯಲ್ಲಿ ಅಲ್ಲಲ್ಲಿ ಜನ ಫೈರ್ ಕ್ಯಾಂಪ್ ಹಾಕಿ ಚಳಿ ಕಾಯಿಸುತ್ತಿದ್ದಾರೆ. ಇನ್ನೂ ಮಧ್ಯರಾತ್ರಿಯಿಂದ ಬೆಳಗಿನ ಜಾವಾ 8 ಗಂಟೆಗೆವರೆಗೂ ದಟ್ಟನೆಯ ಮಂಜು ಕವಿದ ವಾತಾವರಣ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ನೆಗಡಿ, ಕೆಮ್ಮು, ಶೀತ ಹಾಗೂ ಜ್ವರದ ಲಕ್ಷಣಗಳು ಜಾಸ್ತಿ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ.ಹತ್ತು ವರ್ಷಗಳ ನಂತರ ಇಷ್ಟೊಂದು ಪ್ರಮಾಣದ ಚಳಿ ಕುಂದಾನಗರಿಯಲ್ಲಿ ಕಂಡು ಬಂದಿದೆ. ಇನ್ನಷ್ಟು ತಾಪಮಾನ ಇಳಿಕೆ ಕಾಣಲಿದೆ ಎಂದು ಹವಾಮಾನ ಇಲಾಖೆ ಮುನ್ಸುಚನೆ ನೀಡಿದ ಹಿನ್ನಲೆಯಲ್ಲಿ ಗಡಿ ಜಿಲ್ಲೆ ಜನತೆ ಮತ್ತಷ್ಟು ಆತಂಕದಲ್ಲಿದ್ದಾರೆ.
ಇನ್ನೂ ವಾತಾವಾರಣದಲ್ಲಿ ಕ್ಷಿಪ್ರ ಬದಲಾವಣೆಯಿಂದ ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬಿರುತ್ತಿದೆ. ಹೃದಯದ ಹಾಗೂ ಶ್ವಾಸಕೋಶ ಸಂಬಂಧಿ ರೋಗಗಳಿರುವ ಜನರು ಹೆಚ್ಚಿನ ಮುಂಜಾಗ್ರತೆಯಲ್ಲಿ ಇರಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ. ಚಳಿ ಹಾಗೂ ಶೀತದ ವಾತಾವರಣ ಇರುವುದರಿಂದ ಬೆಚ್ಚನೆಯ ಉಡುಪುಗಳು ಹಾಗೂ ಸಾಮಾಜಿಕ ಅಂತರ, ಮಾಸ್ಕ್ ಹಾಕಬೇಕು. ಇಲ್ಲದಿದ್ರೆ ಕೊರೊನಾ ಉಲ್ಬಣವಾಗುವ ಸ್ಥಿತಿ ನಿರ್ಮಾಣವಾಗಿದೆ.ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಈಗಾಗಲೇ ಕೊರೊನಾ ಹೆಚ್ಚುತ್ತಿದೆ.ಮಹಾರಾಷ್ಟ ಮತ್ತು ಗೋವಾ ಗಡಿ ಹಚ್ಚಿಕೊಂಡಿರುವದರಿಂದ ಕುಂದಾನಗರಿ ಜನತೆ ನಿರ್ಲಕ್ಷವಹಿಸಿದರೆ ಕಿಲ್ಲರ್ ಕೊರೊನಾ ಕಂಟಕವಾಗಲಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.
ಒಟ್ಟಾರೆಯಲ್ಲಿ ವಾತಾವರಣ ಪ್ರತಿಕೂಲದಿಂದಾಗಿ ಕುಂದಾನಗರಿ ಜನತೆ ಹೈರಾಣ ಆಗಿದ್ದಾರೆ. ಇನ್ನೂ ಮೂರು ನಾಲ್ಕು ದಿನಗಳಲ್ಲಿ ತಾಪಮಾನ ಇಳಿಕೆ ಕಾಣುತ್ತೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜನರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅಂತಾ ಕಾದುನೋಡಬೇಕಿದೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					


