ಬೆಳಗಾವಿ- ಇವತ್ತು ವಿಕೆಂಡ್ ಕರ್ಫ್ಯು ,ಬೆಳ್ಳಂ ಬೆಳಿಗ್ಗೆ ಪೋಲೀಸರು ಅನಗತ್ಯವಾಗಿ ಸುತ್ತಾಡುವ,ವಾಹನಗಳನ್ನು,ಸೀಜ್ ಮಾಡುವದು,ಜೊತೆಗೆ ಹೆಲ್ಮೆಟ್, ಮಾಸ್ಕ ಹಾಕಿಕೊಳ್ಳದ ವಾಹನ ಸವಾರರಿಗೆ ದಂಡ ವಿಧಿಸುವ ಕಾರ್ಯಾಚರಣೆ ಶುರು ಮಾಡಿಕೊಂಡಿದ್ದರು.
ಬೆಳಗಾವಿಯ ಚನ್ನಮ್ಮಾ ವೃತ್ತ ದಲ್ಲಿ ,ಮಾಸ್ಕ್ ಹಾಕಿಕೊಳ್ಳಿ ಅಂದಿದ್ದಕ್ಕೆ ವೈದ್ಯೆ ಪೋಲೀಸ್ ಅಧಿಕಾರಿಗಳಿಗೆ ಕಿರಿಕ್ ಮಾಡಿದ ಘಟನೆಯೂ ನಡೆಯಿತು. ಡಿಸಿಪಿ ಜತೆಗೆ ಕಿರಿಕ್ ಮಾಡಿದ ಡಾಕ್ಟರ್, ಕೆಲ ಹೊತ್ತು ಅಧಿಕಾರಿಗಳ ಜೊತೆಗೆ ವಾಗ್ವಾದ ಮಾಡಿದ್ರು.
ಕಾರಿನಲ್ಲಿ ಮಾಸ್ಕ್ ಹಾಕದೇ ಹೋಗುತ್ತಿದ್ದ ವೈದ್ಯೆ ಹಾಗೂ ಡ್ರೈವರ್ ಇಬ್ಬರನ್ನು ಡಿಸಿಪಿ ತಡೆದು ತಪಾಸಣೆ ನಡೆಸಿ ಮಾಸ್ಕ್ ಹಾಕಿಕೊಳ್ಳಿ ಎಂದು ಡಿಸಿಪಿ ರವೀಂದ್ರ ಹಾಗೂ ಎಸಿಪಿ ಸದಾಶಿವ ಕಟ್ಟಿಮನಿ ಹೇಳಿದಾಗ,ರಸ್ತೆಯಲ್ಲಿ ಓಡಾಡುವವರು ಮಾಸ್ಕ್ ಹಾಕಿಲ್ಲ, ನಿಮ್ಮ ಪೊಲೀಸರು ಮಾಸ್ಕ್ ಹಾಕಿಲ್ಲ.
ನಾವು ಕಾರಿನಲ್ಲಿ ಹೋಗುವವರು ಮಾಸ್ಕ್ ಹಾಕಿ ಅಂತಿದೀರಿ ಎಂದು ಕಾರಿನಲ್ಲಿ ಕುಳಿತಿದ್ದ ಡಾಕ್ಟರ್ ಜಗಳ ಶುರು ಮಾಡಿಕೊಂಡ್ರು…
ಈ ವೇಳೆ ನಿಮ್ಮ ಸಲುವಾಗಿ ಮಾಸ್ಕ್ ಹಾಕಿಕೊಳ್ಳಿ ಎಂದು ಡಿಸಿಪಿ ರವೀಂದ್ರ ಹೇಳಿದಾಗ ವೈದ್ಯೆ
ಮೊಂಡುವಾದ ಮಾಡಿದಾಗ, ವೈದ್ಯೆಗೆ ಹೋಗಮ್ಮ ಎಂದ ಡಿಸಿಪಿ ಹೇಳಿದಾಗ,ಈ ವೇಳೆ ವೈದ್ಯೆ ಕೈಮುಗಿದಾಗ, ಆಗ ದೊಡ್ಡ ನಮಸ್ಕಾರ ಹೋಗಮ್ಮ ಎಂದ ಡಿಸಿಪಿ ವಾದಕ್ಕೆ ಅಂತ್ಯ ಹಾಡಿದ್ರು.