ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಜನಿಸಿ ಹೊರರಾಜ್ಯದಲ್ಲಿ ನೆಲೆಸಿ,ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಹೆಮ್ಮೆಯ ಪುತ್ರನಿಗೂ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಬೆಳಗಾವಿ ಜಿಲ್ಲೆಯ ಕ್ರಾಂತಿಯ ನೆಲ ಕಿತ್ತೂರು ತಾಲ್ಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಜನಿಸಿರುವ ಬಾಳೇಶ ಉರ್ಫ ಬಾಳಪ್ಪ ಸಣ್ಣಬಸಪ್ಪ ಭಜಂತ್ರಿ ಅವರಿಗೂ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಬಾಳೇಶ ಭಜಂತ್ರಿ ಅವರು 1958 ರಲ್ಲಿ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಜನಿಸಿದ್ದರು 80-90 ರ ದಶಕದಲ್ಲಿ ಬಾಳಪ್ಪ ಭಜಂತ್ರಿ ಅವರು ಸಂಗೀತ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತ ಬೆಂಗಳೂರಿಗೆ,ಅಲ್ಲಿಂದ ತಮಿಳುನಾಡಿನ ಚನ್ನಾಯಿಯಲ್ಲಿ ಸೆಟಲ್ ಆಗಿದ್ದರು,ಅವರು ಸನಾದಿ ಅಪ್ಪಣ್ಣ ಕನ್ನಡ ಚಲನ ಚಿತ್ರದಲ್ಲಿಯೂ ಸಂಗೀತ ನೀಡಿದ್ದರು.
ಬಾಳಪ್ಪ ಭಜಂತ್ರಿ ಅವರು ಪ್ರತಿವರ್ಷ ಸಂಕ್ರಾಂತಿ ಹಬ್ಬದ ದಿನ ಎಂ.ಕೆ ಹುಬ್ಬಳ್ಳಿಗೆ ಬಂದು ಅವರ ಅಣ್ಣ ತಮ್ಮಂದಿರು ಹಾಗೂ ಕುಟುಂಬದವರ ಜೊತೆ ಹಬ್ಬ ಆಚರಿಸುತ್ತಿದ್ದರು.
ಬೆಳಗಾವಿ ಜಿಲ್ಲೆಯ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಹಿರೇಮಠ ಸಂಗೀತ ಗುರುಗಳ ಗರಡಿಯಲ್ಲಿ ಪಳಗಿ ಶಹನಾಯಿ ಸಂಗೀತದಲ್ಲಿ ಹೆಸರು ಮಾಡಿ ತಮಿಳುನಾಡಿನಲ್ಲಿ ಬದುಕು ಕಟ್ಟಿಕೊಂಡಿದ್ದ ಬಾಳಪ್ಪ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವದು ಬೆಳಗಾವಿ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.