ಬೆಳಗಾವಿ-ಸಿಡಿ ಪ್ರಕರಣಕ್ಕೆ ಸಮಂಧಿಸಿದಂತೆ ಸಚಿವ ರಮೇಶ್ ಜಾರಕಿಹೊಳಿ ಅವರು ಕೊಂಚ ನಿರಾಳರಾಗಿದ್ದಾರೆ ಎಂದು ತಿಳಿದು ಬಂದಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಸರ್ಕಾರ ಎಸ್ ಐಟಿ ರಚನೆ ಮಾಡಿತ್ತು. ಜಾರಕಿಹೊಳಿ ಪತ್ರದ ಮೂಲಕ ಮನವಿ ಹಿನ್ನಲೆಯಲ್ಲಿ ಅಂದಿನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಸ್ ಐ ಟಿ ರಚನೆ ಮಾಡಿತು. ಇದನ್ನು ಪ್ರಶ್ನಿಸಿ ಯುವತಿ ಪರ ನ್ಯಾಯವಾದಿಗಳು ಆಕ್ಷೇಪಣೆ ಸಲ್ಲಿಕೆ ಮಾಡಿದ್ರು. ಇದರಿಂದ ಎಸ್ ಐ ಟಿ ವರದಿ ಸಲ್ಲಿಕೆಗೆ ತಡಯಾತ್ಞೆ ನೀಡಲಾಗಿತ್ತು.
ಇಂದು ಸಂಬಂಧಿಸಿದ ಕೋರ್ಟ್ ವರದಿ ಸಲ್ಲಿಕೆಗೆ ಹೈಕೋರ್ಟ್ ಅನುಮತಿ ನೀಡಿದೆ.
ಮುಂದಿನ ವಿಚಾರಣೆ ಮಾರ್ಚ್ 9 ರಂದು ವಿಚಾರಣೆ ನಡಲಿದೆ. ಸಂಬಂಧಿಸಿದ ನ್ಯಾಯಾಲಯದ ಮುಂದೆ ವರದಿ ಸಲ್ಲಿಕೆಯಾಗಲಿದೆ. ರಿಪೋರ್ಟ್ ಸಲ್ಲಿಕೆಯಾದ ಬಳಿ ವರದಿಯಲ್ಲಿ ಎನಿದೆ ಎಂಬುದು ಬಹಿರಂಗ ಆಗಲಿದೆ. ಬಹುತೇಕ ರಮೇಶ ಜಾರಕಿಹೊಳಿ ಕ್ಲಿನ್ ಚಿಟ್ ಸಿಗಲಿದೇ ಎಂದೇ ಹೇಳಲಾಗುತ್ತಿದೆ.
ಈ ಮೊದಲು ಎಸ್ ಐ ಟಿ ವರದಿಯ ಕೆಲ ಅಂಶ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಇದನ್ನು ಯುವತಿ ಪರ ನ್ಯಾಯವಾದಿಗಳು ಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದರು. ಈಗ ಕೋರ್ಟ್ ಎಸ್ ಐ ಟಿ ವರದಿ ಸಲ್ಲಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ವರದಿಯಲ್ಲಿ ಏನಿದೆ.ಎಂಬುದು ಈಗ ಎಲ್ಲರ ಕುತೂಹಲ ಕೆರಳಿಸಿದೆ.
ಗೋವಾದಲ್ಲಿ ಗೋಕಾಕ್ ಸಾಹುಕಾರ್ ಹವಾ..!
ಬೆಳಗಾವಿ-ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಗೋವಾ ಚುನಾವಣೆಯ ಬಿಜೆಪಿ ಉಸ್ತುವಾರಿ,ಅವರನ್ನು ಭೇಟಿಯಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಫಡ್ನವಿಸ್ ಜೊತೆ ಮಾತುಕತೆ ನಡೆಸಿದ್ದಾರೆ
ಬಿಜೆಪಿ ಮುಖಂಡರ ಜೊತೆ ನಿನ್ನೆಯ ದಿನ ಗೋವಾಗೆ ತೆರಳಿದ ರಮೇಶ್ ಜಾರಕಿಹೊಳಿ,ಗೋವಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ.