ಬೆಳಗಾವಿ- ಬೆಂಗಳೂರಿನಲ್ಲಿ ಸೆಕೆಂಡ್ ಸೆಮ್ ಪರೀಕ್ಷೆ ಮುಗಿಸಿ ಬೆಳಗಾವಿಗೆ ಬಂದು ತಂದೆ ತಾಯಿಯ ಜೊತೆ ನರಸಿಂಹ ವಾಡಿಯ ದತ್ತ ಮಂದಿರಕ್ಕೆ ತೆರಳಿದ್ದ ಬೆಳಗಾವಿಯ ಯುವಕನೊಬ್ಬ ಮೆಟ್ಟಿಲು ಇಳಿಯುವಾಗ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ ನಡೆದಿದೆ
ಬೆಳಗಾವಿಯ ಎಲ್ ಐ ಸಿ ಅಧಿಕಾರಿ ಶ್ರೀ ಹರಿ ಅವರ ಪುತ್ರ ಶ್ರೀ ನಂದನ್ ಮೃತ ಪಟ್ಟದುರ್ದೈವಿಯಾಗಿದ್ದಾನೆ
ದತ್ತ ಮಂದಿರದಲ್ಲಿ ದೇವರ ದರ್ಶನ ಪಡೆದು ಮೆಟ್ಟಿಲು ಇಳಿಯುವಾಗ ಕಾಲು ಜಾರಿ ಬಿದ್ದ ಶ್ರೀನಂಧನ್ ನದಿಗೆ ಉರುಳಿ ತೆಲೆಗೆ ಬಲವಾದ ಪೆಟ್ಟುಬಿದ್ದ ಪರಿಣಾಮ ತಂದೆ ತಾಯಿಯ ಎದರೇ ಪ್ರಾಣ ಬಿಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ
ಶ್ರೀನಂದನ ಬೆಂಗಳೂರಿನ ಕಾಲೇಜುವೊಂದರಲ್ಲಿ ವ್ಯಾಸಂಗಾಡುತ್ತಿದ್ದು ತಂದೆ ಶ್ರೀ ಹರಿ ಬೆಳಗಾವಿಯ ಎಲ್ ಐ ಸಿ ಕಚೇರಿಯ ಅಧಿಕಾರಿಯಾಗಿದ್ದು ಟಿಳಕವಾಡಿಯಲ್ಲಿ ವಾಸಿಸುತ್ತಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ