ಬೆಳಗಾವಿ- ಬೆಳಗಾವಿಯ ಹಿಂಡಲಗಾ ಗಣಪತಿ ಮಂದಿರದ ಎದರಲ್ಲಿನ ಕೆರೆಯಲ್ಲಿ ಇವತ್ತು ಮಧ್ಯಾಹ್ನ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮಹಿಳೆ ತಮ್ಮಿಬ್ಬರು ಮಕ್ಕಳೊಂದಿಗೆ ಹೊರವಲಯದ ಹಿಂಡಲಗಾ ಗಣಪತಿ ಕೆರೆಗೆ ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ತಾಯಿ, ಮಗುವಿನ ಮೃತದೇಹ ಪತ್ತೆಯಾಗಿದ್ದು, ಇನ್ನೊಬ್ಬ ಮಗುವಿನ ಶೋಧ ಕಾರ್ಯ ಕತ್ತಲಾಗುವವರೆಗೂ ಮುಂದುವರೆದಿದೆ.
ಇಲ್ಲಿನ ಸಹ್ಯಾದ್ರಿ ನಗರದ ಕೃಷಾ ಮನೀಶ ಕೇಶವಾಣಿ (36) ತಮ್ಮ ಮಕ್ಕಳಾದ ವೀರೇನ್ (7) ಹಾಗೂ ಭಾವೀರ್ (4) ಜೊತೆ ಕೆರೆಗೆ ಹಾರಿದ್ದರು ಎನ್ನುವ ಮಾಹಿತಿ ಬಂದಿದೆ. ಮಹಿಳೆ ಮತ್ತು ಭಾವೀರ್ ಮೃತದೇಹ ಪತ್ತೆಯಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.ಕ್ಯಾಂಪ್ ಠಾಣೆ ಪೊಲೀಸರು ತಾಯಿ ಮತ್ತು ಒಂದು ಮಗುವಿನ ಮೃತದೇಹ ಹೊರ ತೆಗೆದಿದ್ದಾರೆ.
‘ಕೃಷಾ ಮಹಾರಾಷ್ಟ್ರದ ಮೀರಜ್‌ನವರು. ಅವರ ಪತಿ ಮನೀಶ ಖಡೇಬಜಾರ್‌ದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು.ಹೆಚ್ಚು ಕತ್ತಲಾದ್ದರಿಂದ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಶನಿವಾರ ಮುಂದುವರಿಸಲಾಗುವುದಎಂದು ತಿಳಿಸಿದರು.ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ