Breaking News
Home / Breaking News / ಬೆಳಗಾವಿಗೆ ಮತ್ತೆ ಎಂಟ್ರಿ ಹೊಡೆದ ಖತರ್ನಾಕ್ ಇರಾಣಿ ಗ್ಯಾಂಗ್

ಬೆಳಗಾವಿಗೆ ಮತ್ತೆ ಎಂಟ್ರಿ ಹೊಡೆದ ಖತರ್ನಾಕ್ ಇರಾಣಿ ಗ್ಯಾಂಗ್

ಬೆಳಗಾವಿ- ಸರಗಳ್ಳತನ ನಡೆಸಿ ಬೆಳಗಾವಿ ಮಹಾನಗರದ ಜನತೆಯ ನಿದ್ದೆಗೆಡಿಸಿದ್ದ ಖತರ್ನಾಕ್ ಇರಾಣಿ ಗ್ಯಾಂಗ್ ಏಳು ವರ್ಷದ ಬಳಿಕ ಬೆಳಗಾವಿಗೆ ಮತ್ತೆ ಎಂಟ್ರಿ ಹೊಡೆದಿದೆ.

2015 ರಲ್ಲಿ ಬೆಳಗಾವಿಯ ರಾಮತೀರ್ಥ ನಗರದ ಬಳಿ ಸಿಪಿಐ ಗಡ್ಡೇಕರ ಅವರು ಇರಾಣಿ ಗ್ಯಾಂಗ್ ಮೇಲೆ ಫೈರಿಂಗ್ ನಡೆಸಿ ಇರಾಣಿ ಗ್ಯಾಂಗ್ ಗೆ ನಡುಕ ಹುಟ್ಟಿಸಿದ್ದರು. ಆದ್ರೆ 7 ವರ್ಷಗಳಿಂದ ಬೆಳಗಾವಿ ನಗರವನ್ನೇ ಮರೆತಿದ್ದ ಇರಾಣಿ ಗ್ಯಾಂಗ್ ಕಳೆದ ಒಂದು ವಾರದಿಂದ ಬೆಳಗಾವಿ ನಗರಕ್ಕೆ ಕಾಲಿಟ್ಟಿದೆ.

ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಆ್ಯಕ್ಟೀವ್ ಆಗಿರುವ ಇರಾನಿ ಗ್ಯಾಂಗ್ ಸರಗಳ್ಳತನ ಮಾಡುತ್ತಿದೆ. ಒಂದು ವಾರದ ಅಂತರದಲ್ಲಿ ಎರಡು ಸರಗಳ್ಳತನ ಪ್ರಕರಣ ಬಯಲಾಗಿವೆ. ಪೊಲೀಸರೆಂದು ಹೇಳಿ ಯಾಮಾರಿಸಿ ವೃದ್ಧ ದಂಪತಿ ಬಳಿ ಚಿನ್ನಾಭರಣ‌ ದೋಚಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಸಂಬಂಧಿಕರ ಮದುವೆಗೆ ಹೊರಟಿದ್ದ ವೃದ್ಧ ದಂಪತಿ‌ ಯಾಮಾರಿಸಿ ಚಿನ್ನಾಭರಣ‌ ಕಳ್ಳತನ ಮಾಡಲಾಗಿದೆ. ಬೆಳಗಾವಿ ನಗರದ ಹೊರವಲಯದ ಗಣೇಶಪುರದಲ್ಲಿ ಈ ಘಟನೆ ನಡೆದಿದೆ.50 ಗ್ರಾಂ ಚಿನ್ನಾಭರಣ‌ ಕಳೆದುಕೊಂಡು ವೃದ್ಧ ದಂಪತಿ ಕಣ್ಣೀರು ಹಾಕಿದ್ದಾರೆ.ಸೋದರ ಸಂಬಂಧಿ ಮದುವೆಗೆ ಪತ್ನಿ ಜೊತೆ ಹೊರಟಿದ್ದ ಗಣಪತ್ ಪಾಟೀಲ್ ಎಂಬಾತರನ್ನು ತಡೆದ ಚಿನ್ನಾಭರಣ ದೋಚಲಾಗಿದೆ.

ತಾನು ಪೊಲೀಸ್‌ನಾಗಿದ್ದು ವಿಸಲ್ ಹಾಕ್ತಿದ್ರೂ ದ್ವಿಚಕ್ರವಾಹನ ನಿಲ್ಲಿಸುತ್ತಿಲ್ಲ ಏಕೆ ಅಂತಾ ಆವಾಜ್ ಹಾಕಿರುವ ಇರಾಣಿ ಗ್ಯಾಂಗ್ ಸರಗಳ್ಳರು,ಬಳಿಕ ನಿಮ್ಮ ದ್ವಿಚಕ್ರವಾಹನದಲ್ಲಿ ಗಾಂಜಾ, ಅಫೀಮು ಸಾಗಿಸುತ್ತಿದ್ದೀರಿ ಅಂತಾ ಮಾಹಿತಿ ಇದೆ ಅಂತಾ ಚೆಕಿಂಗ್ ಮಾಡ್ತೀವಿ ಎಂದು ಸುಳ್ಳು ಹೇಳಿ,ಬಳಿಕ ವಾಹನ ತಪಾಸಣೆ ನಡೆಸಿದಾಗ ಮದುವೆಗೆ ಹೊರಟಿದ್ದೇವೆ‌ ಎಂದು ಆಮಂತ್ರಣ ಪತ್ರಿಕೆ ತೋರಿಸಿದ್ದ ವೃದ್ಧ ದಂಪತಿಯನ್ನು ಯಾಮಾರಿಸಿ ಚಿನ್ನ ದೋಚಿದ್ದಾರೆ.ಇದೇ ವೇಳೆ ಚಿನ್ನಾಭರಣ ಧರಿಸಿ ಮತ್ತೋರ್ವ ವ್ಯಕ್ತಿ ಸ್ಥಳಕ್ಕೆ ಆಗಮನ

ಆಗ ಆತನ ಕಪಾಳಕ್ಕೆ ಬಾರಿಸಿ ಈ ರಸ್ತೆಯಲ್ಲಿ ಚಿನ್ನ ಹಾಕಿಕೊಂಡು‌ ಹೋಗಬೇಡ ಅಂತಾ ಆವಾಜ್ ಹಾಕಿ ಪರಾರಿಯಾಗಿದ್ದಾರೆ.ಬಳಿಕ ಕ್ಯಾಂಪ್ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ ವೃದ್ಧ ದಂಪತಿ
ಪೊಲೀಸ್ ಠಾಣೆ ಎದುರು ಕಣ್ಣೀರು ಹಾಕಿದ್ದಾರೆ.

ಮತ್ತೊಂದೆಡೆ ಬೆಳ್ಳಂಬೆಳಗ್ಗೆ ಹಾಲು ತರಲು ಹೋದ ವೃದ್ಧೆಯ ಸರಗಳ್ಳತನ

ಮಹಾಂತೇಶ ನಗರದ ಎಸ್‌ಬಿಐ ಬ್ಯಾಂಕ್ ಬಳಿ ಮಾಂಗಲ್ಯ ಕಳ್ಳತನ ನಡೆದಿದೆ.60 ವರ್ಷದ ಕವಿತಾ ಡೊಳ್ಳಿ ಎಂಬುವರ 20 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳ್ಳತನ ಮಾಡಲಾಗಿದೆ.ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಬೆಳಗಾವಿ ನಗರದಲ್ಲಿ ಸರಗಳ್ಳತನ ಪ್ರಕರಣ ಹೆಚ್ಚಳ ಹಿನ್ನೆಲೆ ಸಾರ್ವಜನಿಕರಲ್ಲಿ ಆತಂಕ* ಹೆಚ್ಚಾಗಿದೆ

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *