ಬೆಳಗಾವಿ-ಗ್ರಾಮದಲ್ಲಿ ನಡೆದ ಬ್ರಷ್ಟಾಚಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಮಾರನೇಯ ದಿನವೇ ದೂರು ನೀಡಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ,ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಇಂದು ಬೆಳಿಗ್ಗೆ ಬೆಳಗಾವಿ ಸಮೀಪದ ಬೋಡಕೇನಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ, ಮಾಜಿ ಸದಸ್ಯರು ಮತ್ತು ಬೆಂಬಲಿಗರ ಸೇರಿ ದೂರು ನೀಡಿದ ವ್ಯೆಕ್ತಿಯ ಮೇಲೆ ಗೂಂಡಾಗಿರಿ ಮಾಡಿ,ಆತನಿಗೆ ಮನಬಂದಂತೆ ಥಳಿಸಿದ ಘಟನೆ ಬೆಳಗಾವಿ ತಾಲೂಕಿನ ಬೋಡಕೇನಟ್ಟಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಶೆಟ್ಟು ಕಾಳಪ್ಪ ನಾಯಕ್ ಎಂಬಾತ ಗ್ರಾಮದಲ್ಲಿ ನಡೆದಿರುವ ಬ್ರಷ್ಟಾಚರದ ಬಗ್ಗೆ ತನಿಖೆ ಮಾಡಿ ಬ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿಗೆ ಮನವಿ ಸಲ್ಲಿಸಿದ್ದರು. ನೆರೆ ಸಂತ್ರಸ್ತರಿಗೆ ನೀಡಬೇಕಾದ ವಸತಿ ಯೋಜನೆಗಳ ಮನೆಗಳ ಹಂಚಿಕೆಯಲ್ಲಿ ಗೋಲ್‌ಮಾಲ್ ನಡೆದಿದ್ದು
ಮನೆ ಇದ್ದವರಿಗೂ ಮನೆಗಳನ್ನ ಹಂಚಿಕೆ ಮಾಡಿದ್ದಾರೆ. ಮನೆ ಕಳೆದುಕೊಂಡವರಿಗೆ ವಸತಿ ಮಂಜೂರು ಮಾಡಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇರಿದಂತೆ ಹಲವರು ಹಣ ಪಡೆದು ವಸತಿ ಹಂಚಿಕೆ ಮಾಡಿದ್ದಾರೆ. ಎಂದು ಅವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಶೆಟ್ಟು ನಾಯಕ್ ನಿನ್ನೆ ಸೋಮವಾರ. ಡಿಸಿಗೆ ದೂರು ನೀಡಿದ್ದರು.
ಈ ವಿಚಾರ ಗೊತ್ತಾಗುತ್ತಿದ್ದಂತೆ ಇಂದು ಬೆಳಗ್ಗೆ ನೂರಕ್ಕೂ ಅಧಿಕ ಜನರು ಸೇರಿ ಏಟ್ಟು ನಾಯಕ್ ಮನೆಯ ಮೇಲೆ ದಾಳಿ ಮಾಡಿ,ದಾಂಧಲೆ ನಡೆಸಿದ್ದಾರೆ. ಶೆಟ್ಟು ನಾಯಕ್ ಮನೆ ಮೇಲೆ ಕಲ್ಲು ತೂರಿ, ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶೆಟ್ಟು ನಾಯಕ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಸುರೇಶ್ ಜಾಧವ್ ಗ್ರಾ.ಪಂ ಅಧ್ಯಕ್ಷ, ನಾಗೇಶ್ ನಾಯಕ್ ಮಾಜಿ ಗ್ರಾ.ಪಂ ಸದಸ್ಯ, ಚನ್ನಪ್ಪ ನಾಯಕ್, ನಿಂಗಪ್ಪ.ಕ ನಾಯಕ್, ಜ್ಯೋತಿಬಾ ತವನೋಜಿ ಸೇರಿದಂತೆ ಬೆಂಬಲಿಗರಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.