ಬೆಳಗಾವಿ- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಘಟಕದ ಜಿಲ್ಲಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ದಿಲೀಪ ಕುರುಂದವಾಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಉಳಿದ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು,ಸಂಘಸ ಗೌರವ ಅಧ್ಯಕ್ಷರಾಗಿ ಭೀಮಶಿ ಜಾರಕಿಹೊಳಿ ಅವರು ಆಯ್ಕೆಯಾಗಿದ್ದಾರೆ. ಬೆಳಗಾವಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿತ್ತು ಜಿಲ್ಲಾ ಕಾರ್ಯಕಾರಿಣಿ ಸದಸ್ಯರ 15 ಸ್ಥಾನಕ್ಕಾಗಿ 16 ಜನ ನಾಮಪತ್ರ ಸಲ್ಲಿಸಿದ್ದರು ನಾಮಪತ್ರ ವಾಪಸ್ ಪಡೆಯಲು ಇಂದು ಶನಿವಾರ ಮಧ್ಯಾಹ್ನ 1ಗಂಟೆಯವರೆಗೆ ಕೊನೆಯ. ಅವಧಿಯಾಗಿತ್ತು ಇಂದು ಬೆಳಿಗ್ಗೆ ಮಹಾರುದ್ರ ಮಹಾಲಮನಿ ಅವರು ನಾಮಪತ್ರ ವಾಪಸ್ ಪಡೆದಿರುವ ಹಿನ್ನಲೆಯಲ್ಲಿ ಕಾರ್ಯಕಾರಿಣಿ ಸಮೀತಿಯ 15 ಜನ ಸದಸ್ಯರು ಸೇರಿದಂತೆ ಉಳಿದ ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಇನ್ ಬೆಳಗಾವಿ ಸಂಪಾದಕರಾದ ರಾಜಶೇಖರ ಪಾಟೀಲ, ಯಲ್ಲಪ್ಪ ತಳವಾರ, ಶ್ರೀಶೈಲ ಮಠದ, ಪ್ರಧಾನ ಕಾರ್ಯದರ್ಶಿಯಾಗಿ ಅರುಣ ಸಿ.ಪಾಟೀಲ, ಶ್ರೀಕಾಂತ ಕುಬಕಡ್ಡಿ ಕಾರ್ಯದರ್ಶಿ, ಈಶ್ವರ ಹೋಟಿ, ಕಾರ್ಯದರ್ಶಿ ತಾನಾಜಿರಾವ್ ಮುರಂಕರ ಕಾರ್ಯದರ್ಶಿಯಾಗಿ, ಹಾಗೂ ಖಜಾಂಚಿಯಾಗಿ ಚೇತನ ಹೊಳೆಪ್ಪಗೊಳ ಅವರು ಆಯ್ಕೆಯಾಗಿದ್ದಾರೆ.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಲ್ಲಿಕಾರ್ಜುನ ಗೊಂದಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಸವರಾಜ ಹೊಂಗಲ, ಸಂಜೀವಕುಮಾರ ತಿಲಗರ, ಸುನೀಲ ಗಾವಡೆ, ಸುರೇಶ ಬಾಳೋಜಿ, ರಾಜೇಂದ್ರ ಕೋಳಿ, ರವಿ ಹುಲಕುಂದ, ಸುಕುಮಾರ ಬನ್ನೂರೆ, ಸಿದ್ದಲಿಂಗಯ್ಯ ಪೂಜೇರ, ಸೂರ್ಯಕಾಂತ ಪಾಟೀಲ, ರಾಜಕುಮಾರ ಬಾಗಲಕೋಟ, ಈರನಗೌಡ ಪಾಟೀಲ, ವಿಕ್ರಮ ಪೂಜೇರಿ, ಭೀಮಪ್ಪ ಕಿಚಡಿ, ಲೀನಾ ಟೋಪನ್ನವರ, ಈರಣ್ಣ ಬುಡ್ಡಾಗೋಳ ಅವಿರೋಧ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ,ಹಿರಿಯ ಪತ್ರಕರ್ತ ಜಿ.ಕೆ ಪೂಜಾರ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.