ಬೆಳಗಾವಿ-ಕೆಜೆಪಿಯಿಂದ ರಾಜಕೀಯ ಕ್ಷೇತ್ರಕ್ಕೆ ಧುಮುಕಿ,ನಂತರ ಬಿಜೆಪಿ ಸೇರಿಕೊಂಡು,ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಗರಡಿಯಲ್ಲಿ ಪಳಗಿರುವ ಬೆಳಗಾವಿಯ ಸಂಘಟನಾ ಚತುರ ರಾಜೀವ ಟೋಪಣ್ಣವರ,ಅವರು ಇವತ್ತು ಬಿಜೆಪಿ ತೊರೆದು ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದಾರೆ.
ಇಂದು ಬೆಂಗಳೂರಿನ ಆಮ್ ಆದ್ಮಿ ಕಚೇರಿಯಲ್ಲಿ, ಪಕ್ಷದ ಮುಖಂಡರ ಸಮ್ಮುಖದಲ್ಲಿ ರಾಜೀವ ಟೋಪಣ್ಣವರ ಅಧಿಕೃತವಾಗಿ ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದಾರೆ.
ರಾಜೀವ ಟೋಪಣ್ಣವರ ಅವರ ಪಕ್ಷಾಂತರ, ಬೆಳಗಾವಿ ಜಿಲ್ಲೆಯಲ್ಲಿ ಬದಲಾವಣೆಯ ಪರ್ವಕ್ಕೆ ಚಾಲನೆ ನೀಡಿದಂತಾಗಿದೆ. ವಿಧಾನಸಭೆಯ ಚುನಾವಣೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಹೈ ಓಲ್ಟೇಜ್ ಪಾಲಿಟಿಕ್ಸ್ ಶುರುವಾಗಿದೆ.
ನಾನು ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಫ್ಯಾನ್ ಆಗಿದ್ದೆ ಅವರು ಒಳ್ಳೆಯ ಯೋಜನೆಗಳನ್ನು ಸಹ ಜಾರಿಗೆ ತಂದಿದ್ದರು ಆದ್ರೆ ಸ್ಥಳೀಯ ನಾಯಕರು ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡುತ್ತಿಲ್ಲ.ಅರವಿಂದ್ ಕೇಜ್ರಿವಾಲ್ ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದು ಅವರ ಜನಪರ ಕಾಳಜಿಯನ್ನು ಮೆಚ್ಚಿ ಆಮ್ ಆದ್ಮಿ ಪಾರ್ಟಿ ಸೇರುತ್ತಿದ್ದು ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸುವದಾಗಿ ಭರವಸೆ ನೀಡಿದ್ರು.
ಆಮ್ ಆದ್ಮಿ ಪಾರ್ಟಿ ಸೇರಿದ ರಾಜೀವ ಟೋಪಣ್ಣವರ ಅವರಿಗೆ ಉತ್ತರ ಕರ್ನಾಟಕ ಪ್ರದೇಶದ ಸಂಘಟನೆಯ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಬಿಜೆಪಿಯಲ್ಲಿ ಇರುವಾಗಲೇ ರಾಜೀವ ಟೋಪಣ್ಣವರ ಸರ್ಕಾರದ ಹಲವಾರು ಯೋಜನೆಗಳ ಅನುಷ್ಠಾನದಲ್ಲಿ ಬ್ರಷ್ಟಾಚಾರ ನಡೆದಿದೆ ಎಂದು ಪ್ರತಿಭಟಿಸಿದ್ದನ್ನು ಸ್ಮರಿಸಬಹುದಾಗಿದ್ದು,ಆಮ್ ಆದ್ಮಿ ಪಾರ್ಟಿ ಸೇರಿಕೊಂಡ ರಾಜೀವ ಟೋಪಣ್ಣವರ ಇನ್ನು ಮುಂದೆ ಕಸಬರ್ಗಿ ಹಿಡಿದು ಬ್ರಷ್ಟರ ವಿರುದ್ಧ ಅವಾಜ್ ಹಾಕಲಿದ್ದಾರೆ.