Breaking News

ಬೆಳಗಾವಿ ಪಾಲಿಕೆಗೆ ಡಾಕ್ಟರ್ ದಿನೇಶ್ ಇಂಜೆಕ್ಷನ್….!!!

ಬೆಳಗಾವಿ, ಮಾ, 5 : ಕೊವೀಡ್ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳಲ್ಲಿ ಆಸ್ತಿಕರ ಆಕರಣೆಯಲ್ಲಿಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಕರಣೆ ಮಾಡುವ ಆಸ್ತಿ ಕರ (ತೆರಿಗೆ) ಯಲ್ಲಿ ಶೇ. 10ರಷ್ಟು ರಿಯಾಯಿತಿ ನೀಡುವಂತೆ ಮಾಜಿ ನಗರ ಸೇವಕ ದಿನೇಶ ನಾಶಿಪುಡಿ ಅವರ ನೇತ್ರತ್ವದಲ್ಲಿ ಪಾಲಿಕೆಯ ಮುಂದೆ ಧರಣಿ ನಡೆಸಲಾಗುತ್ತಿದೆ.

ಶನಿವಾರ ಬೆಳಿಗ್ಗೆ ಬೆಳಗಾವಿ ಮಹಾನಗರ ಮಹಾನಗರ ಪಾಲಿಕೆಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.ಅನೇಕ ರಾಜ್ಯಗಳಲ್ಲಿ ಕೋವಿಡ್-19 ಮಹಾಮಾರಿ ಸಂದರ್ಭದಲ್ಲಿ ಜನರು ಆರ್ಥಿಕವಾಗಿ ಕಷ್ಟದಲ್ಲಿರುವುದನ್ನುಗಮನಿಸಿ, ಆಸ್ತಿಕರ ಭರಣಾ ಮಾಡುವಲ್ಲಿ ಅಂದಾಜು ಶೇ. 10ರಷ್ಟು ರಿಯಾಯಿತಿ ನೀಡಿರುತ್ತಾರೆ. ಬೆಳಗಾವಿಯಲ್ಲಿಯೂ ಸಹ ಕೋವಿಡ್-19 ಮಹಾಮಾರಿ ಸಂದರ್ಭದಲ್ಲಿ ಆರ್ಥಿಕವಾಗಿ ಕಷ್ಟದಲ್ಲಿ ಇದ್ದುದ್ದರಿಂದ ಅವರಿಗೆ ಆಸ್ತಿಕರ ಭರಣಾ ಮಾಡುವಲ್ಲಿ ಶೇ. 10ರಷ್ಟು ರಿಯಾಯಿತಿ ನೀಡಬೇಕು.

ಹೋಟೇಲ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್‌ಗಳಿಗೆ ಆಸ್ತಿ ಕರ ಭರಣಾ ಮಾಡುವಲ್ಲಿ ಶೇ. 10ರಷ್ಟುರಿಯಾಯಿತಿಯನ್ನು ರಾಜ್ಯ ಸರ್ಕಾರವು ಘೋಷಿಸಿದೆ. ಅದೇ ರೀತಿ ಇನ್ನಿತರೇ ವ್ಯಾಪಾರಸ್ಥರಿಗೆ ಹಾಗೂಕಾರ್ಖಾನೆಗಳಿಗೆ ಮತ್ತು ವಿದ್ಯಾ ಸಂಸ್ಥೆಗಳಿಗೆ ಶೇ. 50 ಲರಷ್ಟು ರಿಯಾಯಿತಿ ನೀಡಬೇಕು.

ಕೋವಿಡ್-19 ಮಹಾಮಾರಿ ಸಂದರ್ಭದಲ್ಲಿ ತಮ್ಮ ಜೀವವನ್ನು ಅಡವಿಟ್ಟು, ಪ್ರಂಟಲೈನ್ ವರ್ಕರ್ ಅಂತಾ ಕಾರ್ಯ ನಿರ್ವಹಿಸಿದ ಜನರಿಗೆ ಶೇ. 100 ರಷ್ಟು ರಿಯಾಯತಿ ನೀಡಬೇಕು.ಮಾಳಮಾರುತಿ ಬಡಾವಣೆಯಲ್ಲಿ ರಸ್ತೆ ತುಂಬಾ ಆಗಿರುವ ಗುಂಡಿಗಳನ್ನು ದುರಸ್ಥಿಪಡಿಸಬೇಕು.

ಮಾಳಮಾರುತಿ ಬಡಾವಣೆಯಲ್ಲಿ ಹಾಗೂ ನಗರದ ಅನೇಕ ಕಡೆ ಸ್ಮಾರ್ಟ್ ಸಿಟಿ ವತಿಯಿಂದ ಅಂದಾಜು ಒಂದು ವರ್ಷಗಳಹಿಂದೆ ಬೀದಿ ದೀಪದ ಮೊಲೆಗಳನ್ನು ಅಳವಡಿಸಿದ್ದು, ಅವುಗಳಿಗೆ ಎಲ್.ಇ.ಡಿ ದೀಪಗಳನ್ನು ಆದಷ್ಟು ಬೇಗನೆ ಅಳವಡಿಸಬೇಕು.

ಶಿವಬಸವ ನಗರದಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಸಿದ್ದು, ಅಂದಾಜು ಒಂದು ಆವು ಕಾರ್ಯ ರೂಪದಲ್ಲಿಇರುವುದಿಲ್ಲ. ಆದಷ್ಟು ಬೇಗನೇ ದುರಸ್ಥಿ ಮಾಡಬೇಕು.ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕ (ರೆಗ್ಯುಲರ್) ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳಿಗೆ ಪ್ರತಿ ದಿನ ರೂ. 20/-

ಮೊತ್ತವನ್ನು ಮೀರದಂತೆ ಬೆಳಗ್ಗಿನ ಉಪಹಾರದ ವೆಚ್ಚವನ್ನು ನೀಡುತ್ತಾರೆ ಅದೇ ರೀತಿ ಗುತ್ತಿಗೆ, ಹೊರಗುತ್ತಿಗೆ ಆಧಾರದಡಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೂ ಪ್ರತಿ ದಿನ ಬೆಳಗ್ಗಿನ ಉಪಹಾರದ ವೆಚ್ಚವನ್ನು ನೀಡುವುದು.

ನಗರ ಸ್ಥಳೀಯ ಸಂಸ್ಥೆಗಳಿಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕಲ್ಯಾಣ ನಿಧಿ ಅಡಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಧನ ಸಹಾಯನೀಡಲು ಅನುದಾನವನ್ನು ಕಾಯ್ದಿರಿಸಿರುವುದಿಲ್ಲ. ಶ್ರೀ. ವಿಕಾಸ ಮಾಳಗೆ ಇವರು ರಿಕ್ಷಾ ಚಾಲಕರಾಗಿದ್ದು, ಆರ್ಥಿಕವಾಗಿಕಷ್ಟದಲ್ಲಿದ್ದು, ಇವರ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದು, ಸದರಿ ಚಿಕಿತ್ಸೆಗೆ ತಗುಲಿದ ವೆಚ್ಚವನ್ನುನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.

ವಂಟಮುರಿ ಕಾಲನಿಯಲ್ಲಿರುವ ಕಚ್ಚಾ ಆಶ್ರಯ ಮನೆಗಳನ್ನು ಸ್ಲಂ ಬೋರ್ಡ್ ವತಿಯಿಂದ ಪಕ್ಕಾ ಮನೆಗಳನ್ನಾಗಿನಿರ್ಮಾಣ ಮಾಡಲು ಅನೇಕ ವರ್ಷಗಳಿಂದ ಬೇಡಿಕೆ ಇಟ್ಟಿದ್ದು, ಇನ್ನುವರೆಗೆ ಸಹ ಕಾರ್ಯರೂಪಕ್ಕೆ ಬಂದಿರುವುದಿಲ್ಲ.ಆಸ್ತಿ ಕರ ಭರಣಾ ಮಾಡಲು ವಿಳಂಬ ಮಾಡಿದ ಜನರಿಗೆ ದಂಡ ವಿಧಿಸಿರುವುದರಲ್ಲಿ ಶೇ. 70-80 ರಷ್ಟು ರಿಯಾಯಿತಿ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *