ಬೆಳಗಾವಿ- ಬೆಳಗಾವಿ ತಾಲ್ಲೂಕಿನ ಕಾಲೇಜುಗಳು ಇರುವ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿಯ ಸೈಬರ್ ಠಾಣೆಯ ಪೋಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಗಾಂಜಾ ವಶ ನಡೆಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ಬೆಳಗಾವಿಯ ಹುಂಚ್ಯಾನಟ್ಟಿ,ಮಚ್ಛೆ ಕ್ರಾಸ್ ನಲ್ಲಿ,ಜೈನ್ ಇಂಜಿನಿಯರಿಂಗ್ ಕಾಲೇಜು ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಮಚ್ಛೆ ಗ್ರಾಮದ ರಾಹುಲ್ ಬಸವರಾಜ್ ಸುತಾರ್ (20) ಎಂಬಾತನನ್ನು ಬಂಧಿಸಿ,ಆತನ ಬಳಿ ಇದ್ದ,2kg 125 ಗ್ರಾಂ ಗಾಂಜಾ ಹಾಗು ಎಪ್ರಿಲಾ ಬೈಕ್ ವಶಪಡಿಸಿಕೊಂಡಿದ್ದಾರೆ.
ನಗರ ಪೋಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಅವರು ಗಾಂಜಾ ವಿರುದ್ಧ ಸಮರ ಸಾರಿದ್ದು ಸೈಬರ್ ಸಿಇಎನ್ ಠಾಣೆಯ ಇನಸ್ಪೆಕ್ಟರ್ ಗಡ್ಡೇಕರ್ ಅವರು ಕಾರ್ಯಾಚರಣೆ ಶುರು ಮಾಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ