Breaking News

ಬೆಳಗಾವಿ ರೈಲು ನಿಲ್ಧಾಣದಲ್ಲೇ ಉಸಿರು ನಿಲ್ಲಿಸಿದ ಮಹಿಳೆ…..

ಬೆಳಗಾವಿ- ಜೀವನದಲ್ಲಿ ಚಿಗುಪ್ಸೆ ಹೊಂದಿ,ದೂರದ ರೇಲ್ವೆ ಟ್ರ್ಯಾಕ್ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡ ಸಾವಿರಾರು ಪ್ರಕರಣಗಳನ್ನು ನೋಡಿದ್ದೇವೆ. ಆದ್ರೆ ಇವತ್ತು ರಾತ್ರಿ 9-00 ಗಂಟೆ ಸುಮಾರಿಗೆ ಬೆಳಗಾವಿ ರೇಲ್ವೆ ನಿಲ್ಧಾಣದಲ್ಲಿ ನಡೆದಿದ್ದೇ ಬೇರೆ.

ರಾತ್ರಿ 9-00 ಗಂಟೆಗೆ ದಿ.ಸುರೇಶ್ ಅಂಗಡಿ ಟ್ರೇನ್ ಬೆಳಗಾವಿಯಿಂದ ಬೆಂಗಳೂರಿಗೆ ಹೊರಟಿತ್ತು,ರೈಲು ಹೊರಡುವ ಮೊದಲೇ ಅಪರಿಚಿತ ಮಹಿಳೆಯೊಬ್ಬಳು ಟ್ರ್ಯಾಕ್ ಮೇಲೆ ಮಲಗಿ ಉಸಿರು ನಿಲ್ಲಿಸಿದ ಘಟನೆ ನಡೆದಿದೆ.

ರೈಲು ಹೊರಡುವ ಮೊದಲೇ ಈ ಮಹಿಳೆ ಟ್ರ್ಯಾಕ್ ಮೇಲೆ ಮಲಗಿದ್ದಳೋ ಅಥವಾ ರೈಲು ಹೊರಡುವಾಗ ಮಲಗಿದಳೋ ಅನ್ನೋದು ಇನ್ನುವರೆಗೆ ಸ್ಪಷ್ಟವಾಗಿಲ್ಲ,ಆದ್ರೆ ಈ ಘಟನೆ ಬೆಳಗಾವಿ ರೈಲು ನಿಲ್ಧಾಣದ ಪ್ಲಾಟ್ ಫಾರಂ ನಂ 2 ರಲ್ಲೇ ನಡೆದಿದೆ.

ಘಟನಾ ಸ್ಥಳಕ್ಕೆ ರೈಲ್ವೇ ಪೋಲೀಸರು ಧಾವಿಸಿದ್ದು ತನಿಖೆ ನಡೆಸಿದ್ದಾರೆ.ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು ಮೃತ ಮಹಿಳೆ 30-ರಿಂದ 35 ವರ್ಷ ವಯಸ್ಸಿನ ಮಹಿಳೆ ದು ಅಂದಾಜಿಸಲಾಗಿದೆ.

ಈ ಮಹಿಳೆ ಯಾರು..? ಘಟನೆ ನಡೆದಿದ್ದು ಹೇಗೆ.? ಎಂಬುದನ್ನು ಸಿಸಿ ಟಿವ್ಹಿ ಪೋಟೇಜ್ ನೋಡಿದ ಬಳಿಕವೇ ಈ ಪ್ರಕರಣದ ಬಗ್ಗೆ ಮಾಹಿತಿ ದೊರೆಯಲಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *